ಮಂಗಳೂರು : ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ 4.80 ಲಕ್ಷ ವಂಚನೆ !
Twitter
Facebook
LinkedIn
WhatsApp
ಮಂಗಳೂರು, ಜೂ 20: ಕೆನಡಾದಲ್ಲಿ ಉದ್ಯೋಗ ನೇಮಕಾತಿ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.
ವ್ಯಕ್ತಿಯೋರ್ವರು ವಿದೇಶದಲ್ಲಿ ಉದ್ಯೋಗಾವಕಾಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಮಾ. 28ರಂದು ಇನ್‌ಸ್ಟಾಗ್ರಾಂ ಖಾತೆಯ ಮೂಲಕ ವಿಲಿಯಂ ಪೌಲ್ ಆ್ಯಂಟನಿಯ ಪರಿಚಯವಾಗಿತ್ತು.
ಆತ ತಾನು ಕೆನಡಾ ದೇಶದ ಪ್ರಜೆಯಾಗಿದ್ದು, ಇಮಿಗ್ರೇಷನ್ ಅಧಿಕಾರಿಯಾಗಿರುವುದಾಗಿ ಪರಿಚಯಿಸಿಕೊಂಡು ಕೆನಡಾ ದೇಶದಲ್ಲಿ ಉದ್ಯೋಗ ಒದಗಿಸಿಕೊಡುವುದಾಗಿ ನಂಬಿಸಿದ್ದ. ಅನಂತರ +1(289)724-1900 ವಾಟ್ಸ್‌ಆ್ಯಪ್ ನಂಬರ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ. ಉದ್ಯೋಗ ನೇಮಕಾತಿಯ ಬಗ್ಗೆ ವಿವಿಧ ದಾಖಲೆಗಳನ್ನು ಕಳುಹಿಸುತ್ತಿದ್ದ. ನೇಮಕಾತಿಯ ಬಗ್ಗೆ ವಿವಿಧ ಕಾರಣಗಳನ್ನು ನೀಡಿ ಮಾ. 28ರಿಂದ ಜೂ. 9ರ ನಡುವೆ ಹಂತ ಹಂತವಾಗಿ 4,80,000 ರೂ.ಗಳನ್ನು ವರ್ಗಾಯಿಸಿಕೊಂಡು ಬಳಿಕ ಉದ್ಯೋಗ ಒದಗಿಸದೆ ವಂಚಿಸಿದ್ದಾನೆ. ಈ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.