ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಆಳದ ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ ಪೇಜಾವರ ಶ್ರೀಗಳು

Twitter
Facebook
LinkedIn
WhatsApp
WhatsApp Image 2022 07 19 at 11.51.07 AM 3

ಉಡುಪಿ: ಪೇಜಾವರ ಮಠದ 60ರ ಹರೆಯದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸುಮಾರು 40 ಅಡಿ ಆಳದ ಬಾವಿಗಿಳಿದು ಬೆಕ್ಕೊಂದನ್ನು ರಕ್ಷಿಸಿದ ಘಟನೆ ರವಿವಾರ ನಡೆದಿದೆ.

ಸ್ವಾಮೀಜಿಯವರು ಚೆನ್ನೈ ಮೊಕ್ಕಾಂನಿಂದ ಮುಚ್ಲುಕೋಡು ದೇವಸ್ಥಾನಕ್ಕೆ ಮಧ್ಯಾಹ್ನ ಆಗಮಿಸಿದ್ದರು. ಏತನ್ಮಧ್ಯೆ ದೇವಸ್ಥಾನದ ಬಾವಿಯೊಳಗೆ ಬೆಕ್ಕೊಂದು ಬಿದ್ದಿರುವುದಾಗಿ ದೇವಸ್ಥಾನದ ಸಿಬಂದಿ ಹೇಳಿದರು.

ಸ್ವಾಮೀಜಿ ಕೂಡಲೇ ಬಾವಿಯತ್ತ ತೆರಳಿ ಬಕೆಟ್‌ ಇಳಿಸಿ ಬೆಕ್ಕನ್ನು (ಒಂದು ಅಂತಸ್ತಿನಲ್ಲಿತ್ತು) ಬಕೆಟ್‌ ಒಳಗೆ ಬರುವಂತೆ ಪ್ರಯತ್ನಿಸಿದರು. ಅದು ಫ‌ಲಕಾರಿಯಾಗದಿದ್ದಾಗ, ಉಟ್ಟ ಖಾವಿಶಾಟಿಯನ್ನು ಸೊಂಟಕ್ಕೆ ಬಿಗಿಯಾಗಿ ಸುತ್ತಿ ಸುಮಾರು ಐದಡಿ ವ್ಯಾಸದ ಬಾವಿಗೆ ಹಗ್ಗದ ಸಹಾಯದಿಂದ ಇಳಿದರು. ತುಸು ದೂರ ಹಗ್ಗದ ಸಹಾಯದಿಂದ ಇಳಿದರೆ ಮತ್ತೆ ಬಾವಿಯೊಳಗಿನ ಅಂಚಿನಲ್ಲಿ ಕಾಲಿಟ್ಟು ಆಚೀಚೆ ಕೈಗಳ ಆಧಾರದಲ್ಲಿ ಇಳಿದರು. ಬೆಕ್ಕನ್ನು ಬಕೆಟ್‌ಗೆ ಹಾಕಿ ಮೇಲಕ್ಕೆತ್ತುವಂತೆ ಸೂಚಿಸಿದರು. ಮೇಲಿಂದ ಬಕೆಟ್‌ ಎತ್ತಿದರೂ ತುಸು ಮೇಲೆ ಬರುವಾಗ ಬೆಕ್ಕು ಹೆದರಿ ಹೊರಕ್ಕೆ ಹಾರಿ ಇನ್ನೊಂದು ಅಂತಸ್ತಿನಲ್ಲಿ ಕುಳಿತುಕೊಂಡಿತು. ಹೇಗೆ ಇಳಿದರೋ ಅದೇ ರೀತಿ ಕೈ, ಕಾಲುಗಳ ಆಧಾರದಲ್ಲಿ ಮೇಲೆ ಹತ್ತಿದ ಸ್ವಾಮೀಜಿ ತುಂಡು ವಸ್ತ್ರವನ್ನು ಮೇಲಿಂದ ಹಾಕಲು ಹೇಳಿ ಅದನ್ನು ಕೈಗೆ ಸುತ್ತಿಕೊಂಡು ಬೆಕ್ಕಿನ ಕುತ್ತಿಗೆ ಹಿಡಿದು ಮತ್ತೆ ಬಕೆಟ್‌ಗೆ ಹಾಕಲು ಯತ್ನಿಸಿದರು. ಅದು ಸರಿಯಾಗದೆ ಇದ್ದಾಗ ಒಂದೊಂದೆ ಅಂತಸ್ತನ್ನು ಏರಿ ಒಂದು ಕೈಯಲ್ಲಿ ಬೆಕ್ಕನ್ನು ಅಂತಸ್ತಿನಲ್ಲಿರಿಸಿಕೊಂಡು ಮೇಲೆ ಬಂದರು. ಹತ್ತಿರ ಬರುತ್ತಿದ್ದಂತೆ ಬೆಕ್ಕನ್ನು ಮೇಲಕ್ಕೆ ಎಸೆದರು. ಎದ್ದೆನೋ ಬಿದ್ದೆನೋ ಎಂಬಂತೆ ಬೆಕ್ಕು ಓಡಿಹೋಯಿತು.

ಸ್ವಾಮೀಜಿ ಮಾತ್ರ ಏನೂ ಆಗದಂತೆ ಉಡುಪಿ ಪೇಜಾವರ ಮಠಕ್ಕೆ ಪೂಜೆಗೆ ಹೊರಟರು. ಅವರು ಬೆಳಗ್ಗೆ ಚೆನ್ನೈ ಮಠದಲ್ಲಿ ಪೂಜೆ ಮುಗಿಸಿ ಆಹಾರವನ್ನೂ ತೆಗೆದುಕೊಳ್ಳದೆ ಉಡುಪಿಗೆ ಬಂದಿದ್ದರು. ಉಡುಪಿಯಲ್ಲಿ ಸಂಜೆ ಜ್ಯೋತಿಃಶಾಸ್ತ್ರಜ್ಞ ದಿ| ಬೈಲೂರು ಅನಂತಪದ್ಮನಾಭ ತಂತ್ರಿಗಳ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡು ರಾತ್ರಿ ಮತ್ತೆ ಚೆನ್ನೈಗೆ ತೆರಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist