ನನ್ನ ಖಾಸಗಿ ವಿಡಿಯೋಗಳನ್ನು ವೆಬ್ಸೈಟ್ ಗಳಲ್ಲಿ ಮಾರಟ ಮಾಡಲಾಗಿದೆ - ನವ್ಯಶ್ರಿ
ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ (Rajakumar Takale) ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ (Navyashree Rao) ಹರಿಹಾಯ್ದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕುಮಾರ್ ಟಾಕಳೆ ಒಬ್ಬ ಹೆಣ್ಣುಬಾಕ, ಸೆಕ್ಸ್ ಟ್ರೆಡರ್ ಇದ್ದಾನೆ. ನನ್ನ ಖಾಸಗಿ ವೀಡಿಯೋ (Private Video) ಗಳನ್ನು ವೆಬ್‍ಸೈಟ್‍ಗೆ ಮಾರಾಟ ಮಾಡಿದ್ದಾನೆ. ಪೊಲೀಸರ ತನಿಖೆಯಲ್ಲಿ ಮೊಬೈಲ್ ಕಳೆದು ಹೋಗಿದೆ ಅಂತಾ ಏಕೆ ಸುಳ್ಳು ಹೇಳುತ್ತಿದ್ದಾನೆ. ಆತನ ಮೊಬೈಲ್‍ನಲ್ಲಿ ಬೇರೆ ಹೆಣ್ಣುಮಕ್ಕಳ ವಿಡಿಯೋಗಳು ಸಹ ಇರಬಹದು ಎಂದು ಆರೋಪಿಸಿದರು.
ಟಾಕಳೆ ಮನೆಯೇ ಅಕ್ರಮ ಚಟುವಟಿಕೆ ನಡೆಸುವ ತಾಣವಾಗಿದೆ. ಆತನ ಪತ್ನಿ ಹೇಗೆ ನನಗೆ ಮನೆಯಲ್ಲಿ ಒಂದು ವಾರ ಇರಲು ಅವಕಾಶ ಕೊಟ್ಟಳು?. ಇದು ಬಿಗ್ ಮಾಫಿಯಾ ಇದೆ. ಒಬ್ಬ ನವ್ಯಶ್ರೀ ಸತ್ಯಾಸತ್ಯತೆ ಬಯಲಿಗೆಳೆದಿರಬಹುದು. ಸರ್ಕಾರಿ ಅಧಿಕಾರಿಯಾಗಿ ಸರ್ಕಾರಿ ಬಂಗಲೆ ದುರುಪಯೋಗ ಪಡಿಸಿಕೊಂಡಿದ್ದಾನೆ. ಈತನ ಕಾಮಕೃತ್ಯಕ್ಕೆ ಎಷ್ಟೋ ಹೆಣ್ಣು ಮಕ್ಕಳು ಬಲಿಯಾಗಿರಬಹುದು ಎಂದು ಪ್ರಶ್ನಿಸಿದ್ದಾರೆ. ಇಂತಹ ಗೋಮುಖ ವ್ಯಾಘ್ರನ ಜೊತೆ ಆತನ ಸಹೋದರರು ಸೇರಿದ್ದಾರೆ. ಯಾವ್ಯಾವ ವೆಬ್‍ಸೈಟ್‍ಗೆ ಯಾವ್ಯಾವ ಹೆಣ್ಣುಮಕ್ಕಳ ಖಾಸಗಿ ವಿಡಿಯೋ ಮಾರಾಟ ಮಾಡಿದ್ದಾನೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ರಾಜಕುಮಾರ್ ಟಾಕಳೆನ ಗಂಡ ಅಂತಾ ಒಪ್ಪಿಕೊಳ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನವ್ಯ, ನಾನು ಸಶಕ್ತಳಾಗಿದ್ದೇನೆ. ಕುಟುಂಬ ನಿರ್ವಹಣೆ ಮಾಡುವ ಶಕ್ತಿ ಇದೆ. ನನಗೆ ಯಾವ ಗಂಡನ ಅವಶ್ಯಕತೆ ಇಲ್ಲ. ಗಂಡ ಅಂದ್ರೆ ಹೆಂಡತಿ ವೀಡಿಯೋ ಮಾಡಿ ಅಪ್‍ಲೋಡ್ ಮಾಡೋದಲ್ಲ. ಆತನ ಕ್ಷಮಿಸುವುದರಲ್ಲಿ ಅರ್ಥನೇ ಇಲ್ಲ ಎಂದು ಗರಂ ಆದರು.