ನಟಿ ರಶ್ಮಿಕಾ ಮಂದಣ್ಣಗೆ ತನ್ನ ಮ್ಯಾನೇಜರ್ ನಿಂದಲೇ ಲಕ್ಷಾಂತರ ರೂಪಾಯಿ ವಂಚನೆ.!
‘ಕೊಡಗಿನ ಬೆಡಗಿ’ ರಶ್ಮಿಕಾ ಮಂದಣ್ಣ ಅವರಿಗೆ ಭಾರಿ ಮೋಸವಾಗಿದೆ. ಅದು ಒಂದಲ್ಲಾ ಎರಡಲ್ಲಾ ಬರೋಬ್ಬರಿ 80 ಲಕ್ಷ ರೂಪಾಯಿ! ಹೌದು, ಅನೇಕ ವರ್ಷಗಳಿಂದ ರಶ್ಮಿಕಾಗೆ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೇ ವಂಚನೆ ಎಸಗಿರುವುದು ದುರದೃಷ್ಟಕರ. ಯಾವಾಗ ತಮ್ಮ ನಂಬಿಕಸ್ತ ಮ್ಯಾನೇಜರ್‌ನಿಂದಲೇ 80 ಲಕ್ಷ ರೂಪಾಯಿ ವಂಚನೆ ಆಗಿದೆ ಎಂಬುದು ರಶ್ಮಿಕಾಗೆ ಗೊತ್ತಾಯಿತೋ, ಕೂಡಲೇ ಅವರು ತಮ್ಮ ಮ್ಯಾನೇಜರ್‌ಗೆ ಗೇಟ್‌ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಶ್ಮಿಕಾ ಮಂದಣ್ಣಗೆ ವಂಚನೆ!
ನಟಿ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನದ ಆರಂಭದಿಂದಲೇ ಈ ವ್ಯಕ್ತಿಯು ಮ್ಯಾನೇಜರ್ ಆಗಿ ನೇಮಕಗೊಂಡಿದ್ದರು. ರಶ್ಮಿಕಾ ಮಂದಣ್ಣ ಅವರ ಎಲ್ಲ ಹಣಕಾಸಿನ ವ್ಯವಹಾರವನ್ನು ಈ ವ್ಯಕ್ತಿಯೇ ನಿಭಾಯಿಸುತ್ತಿದ್ದರು. ಆದರೆ ರಶ್ಮಿಕಾಗೇ ಗೊತ್ತಿಲ್ಲದಂತೆ ಸುಮಾರು 80 ಲಕ್ಷ ರೂಪಾಯಿಗಳಷ್ಟು ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಮ್ಯಾನೇಜರ್ ಮೇಲೆ ಕೇಳಿಬಂದಿದೆ. ಇದು ಗೊತ್ತಾಗುತ್ತಿದ್ದಂತೆಯೇ, ಮ್ಯಾನೇಜರ್‌ಗೆ ಗೇಟ್‌ಪಾಸ್ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ಆದರೆ ಈ ಮ್ಯಾನೇಜರ್ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.
ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಇಷ್ಟೊಂದು ದೊಡ್ಡ ಮೊತ್ತದ ವಂಚನೆ ಆಗಿದ್ದರೂ ಕೂಡ ರಶ್ಮಿಕಾ ಈ ಪ್ರಕರಣವನ್ನು ಸೈಲೆಂಟ್ ಆಗಿ ಹ್ಯಾಂಡಲ್ ಮಾಡಿದ್ದಾರೆ. ಯಾವುದೇ ಸೀನ್ ಕ್ರಿಯೆಟ್ ಮಾಡದೇ, ಮ್ಯಾನೇಜರ್ ಹುದ್ದೆಯಿಂದ ಆತನನ್ನು ಕಿತ್ತೆಸೆದಿದ್ದಾರೆ. ಸುಮಾರು 80 ಲಕ್ಷ ರೂಪಾಯಿ ವಂಚನೆ ಆಗಿದ್ದರೂ, ಈ ಬಗ್ಗೆ ರಶ್ಮಿಕಾ ಮಂದಣ್ಣ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಕರಿಯರ್ ಕಡೆಗೆ ಅವರು ಹೆಚ್ಚಿನ ಗಮನ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಮೂಲಗಳು ಹೇಳಿದ್ದೇನು?
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಶ್ಮಿಕಾ ಅವರ ಆಪ್ತಮೂಲಗಳು, ‘ರಶ್ಮಿಕಾ ಅವರ ಮ್ಯಾನೇಜರ್ 80 ಲಕ್ಷ ರೂಪಾಯಿ ವಂಚಿಸಿದ ಬಗ್ಗೆ ಕೆಲವು ವದಂತಿಗಳಿವೆ. ಆದರೆ ರಶ್ಮಿಕಾ ಈ ಬಗ್ಗೆ ಜಾಸ್ತಿ ಸೀನ್ ಕ್ರಿಯೆಟ್ ಮಾಡಲು ಸಿದ್ಧರಿಲ್ಲ. ಈ ಕೃತ್ಯ ಎಸಗಿದ ಮ್ಯಾನೇಜರ್ ಅನ್ನು ರಶ್ಮಿಕಾ ವಜಾ ಮಾಡಿದ್ದಾರೆ’ ಎಂದು ತಿಳಿಸಿವೆ.
ಸಖತ್ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ
ಇನ್ನು, ಸಿನಿಮಾರಂಗದಲ್ಲೇ ರಶ್ಮಿಕಾ ಸಖತ್ ಬ್ಯುಸಿ ಇದ್ದಾರೆ. ಅವರ ಗಮನವೆಲ್ಲ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾದ ಮೇಲಿದೆ. ಇದರಲ್ಲಿ ರಶ್ಮಿಕಾ ಜೊತೆಗೆ ರಣಬೀರ್ ಕಪೂರ್ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ರಶ್ಮಿಕಾ ಅವರ ಬಾಲಿವುಡ್ ಭವಿಷ್ಯ ನಿರ್ಧಾರವಾಗಲಿದೆ. ಆಗಸ್ಟ್ 11ರಂದು ‘ಅನಿಮಲ್’ ತೆರೆಗೆ ಬರಲಿದೆ ಇದರ ಜೊತೆಗೆ ‘ಪುಷ್ಪ 2’ ಕೆಲಸಗಳಲ್ಲೂ ರಶ್ಮಿಕಾ ತೊಡಗಿಕೊಂಡಿದ್ದಾರೆ. ಇದು ಕೂಡ ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿದೆ. ದ್ವಿಭಾಷಾ ಸಿನಿಮಾ ‘ರೈನ್‌ಬೋ’ದಲ್ಲೂ ರಶ್ಮಿಕಾ ನಾಯಕಿಯಾಗಿದ್ದಾರೆ. ಸದ್ಯ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.