ಮ್ಯೂಸಿಕ್ ಫೆಸ್ಟಿವಲ್ ವೇಳೆ ಸಾಮೂಹಿಕ ಗುಂಡಿನ ದಾಳಿ, ಇಬ್ಬರು ಸಾವು, 3 ಮಂದಿಗೆ ಗಾಯ
Twitter
Facebook
LinkedIn
WhatsApp
ವಾಷಿಂಗ್ಟನ್ನಲ್ಲಿ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಲ್ ಫೆಸ್ಟಿವಲ್ ಸಮಯದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಜಾರ್ಜ್ ಪಟ್ಟಣದ ಸಮೀಪವಿರುವ ಕ್ಯಾಂಪ್ ಗ್ರೌಂಡ್ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ ಶೂಟರ್ ಸೇರಿದಂತೆ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ರಾತ್ರಿ 8.25ರ ಸುಮಾರಿಗೆ ವಾಷಿಂಗ್ಟನ್ನ ಗಾರ್ಜ್ ಆಂಫಿಥಿಯೇಟರ್ ಬಳಿಯ ಕ್ಯಾಂಪ್ಗ್ರೌಂಡ್ನಲ್ಲಿ ಗುಂಡಿನ ದಾಳಿ ನಡೆದಿದೆ. ಪೊಲೀಸರು ಬಂದಿದ್ದರೂ ಕೂಡ ಆತ ಗುಂಡು ಹಾರಿಸುವುದನ್ನು ಮುಂದುವರೆಸಿದ್ದ, ಅಂತಿಮವಾಗಿ ಆತನನ್ನು ವಶಕ್ಕೆ ಪಡೆಯಲಾಗಿದೆ.
ಗಾರ್ಜ್ ಆಂಫಿಥಿಯೇಟರ್ ಬಿಯಾಂಡ್ ವಂಡರ್ಲ್ಯಾಂಡ್ ಎಂಬ ಎರಡು ದಿನಗಳ ಸಂಗೀತ ಉತ್ಸವವನ್ನು ಆಯೋಜಿಸಿತ್ತು ಪ್ರದೇಶದಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಈ ಘಟನೆಯಿಂದಾಗಿ ಕ್ಯಾಂಪ್ಗ್ರೌಂಡ್ಸ್ ಪ್ರದೇಶವನ್ನು ಮುಚ್ಚಲಾಗಿದೆ.