ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಹಾಗಾದರೆ ಈ ಲೇಖನ ಒಮ್ಮೆ ಓದಿ!
ದೇಹವನ್ನು ಬೆಚ್ಚಗಾಗಿಸಿ, ಮನಸ್ಸಿಗೆ ಆಹ್ಲಾದ ಭಾವ ನೀಡುವ ಟೀ ಅಥವಾ ಚಹಾ ಕುಡಿಯುವುದು ದೇಹಕ್ಕೆ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ನಾವು ಚಹಾ ಕುಡಿಯುವ ವಿಧಾನದಲ್ಲಿ ಒಳ್ಳೆಯದ್ದು, ಕೆಟ್ಟದ್ದು ಎಂಬ ಅಂಶ ಅಡಗಿದೆ.
ನಮಗೆ ಪ್ರತಿನಿತ್ಯವು ಎದ್ದ ಬಳಿಕ ನಿತ್ಯ ಕರ್ಮಗಳನ್ನು ಪೂರೈಸಿಕೊಂಡು ಒಂದು ಕಪ್ ಟೀಕುಡಿಯುವುದು ಅಭ್ಯಾಸವಾಗಿ ಬಿಟ್ಟಿದೆ. ಹೀಗಾಗಿ ಟೀ ಕುಡಿಯದೆ ಇದ್ದರೆ ಆಗ ಏನೋ ಒಂದು ಕಳೆದುಕೊಂಡ ಭಾವನೆಯು ಮೂಡುವುದು. ಇಷ್ಟು ಮಾತ್ರವಲ್ಲದೆ ಟೀ ಕುಡಿಯದಿದ್ದರೆ ಆಗ ಕೆಲವರಿಗೆ ತಲೆನೋವು ಕೂಡ ಕಾಣಿಸುವುದು. ದಿನವಿಡಿ ಅವರಿಗೆ ಯಾವುದೇ ಕೆಲಸ ಮಾಡಲು ಮನಸ್ಸಿಲ್ಲದಂತೆ ಆಗಬಹುದು. ಹೀಗಾಗಿ ಹೆಚ್ಚಿನವರು ಬೆಳಗ್ಗೆ ಎದ್ದ ಬಳಿಕ ಒಂದು ಕಪ್ ಟೀಅಗತ್ಯವಾಗಿ ಸೇವಿಸುವರು. ಚಾದಲ್ಲಿ ಇರುವಂತಹ ಆರೋಗ್ಯ ಲಾಭಗಳು ಹಾಗೂ ಅದರಿಂದ ಆಗುವ ತೊಂದರೆಗಳ ಬಗ್ಗೆ ಈಗಲೂ ವಾದಗಳು ನಡೆಯುತ್ತಲೇ ಇದೆ.
ಒಂದು ಕಪ್ ಟೀ ಕುಡಿಯುವುದರಿಂದ ನಮ್ಮ ಮನಸ್ಸು ಮತ್ತು ದೇಹವು ಉಲ್ಲಾಸಗೊಳ್ಳುತ್ತದೆ. ಅದರಲ್ಲೂ ಚಳಿ ವಾತಾವರಣ, ಹಿಮ ಬೀಳುವಾಗ, ಮಳೆಗಾಲದಲ್ಲಿ ಒಂದೇ ಒಂದು ಕಪ್ ಚಹಾ ಕುಡಿದರೆ ಸಾಕು ಅಮೃತ ಕುಡಿದ ಖುಷಿ ಚಹಾ ಪ್ರಿಯರದ್ದಾಗಿರುತ್ತೆ. ನಮ್ಮಲ್ಲಿ ಹೆಚ್ಚಿನವರು ಹಾಲಿನಲ್ಲಿ ಮಾಡಿದ ಚಹಾವನ್ನು ಕುಡಿಯುತ್ತಾರೆ. ಕೆಲವೇ ಮಂದಿ ವಿವಿಧ ರೀತಿಯ ಚಹಾವನ್ನು ಆಯ್ಕೆ ಮಾಡುತ್ತಾರೆ. ಎಷ್ಟು ಬಗೆಯ ಚಹಾಗಳು ಲಭ್ಯವಿದೆ ಮತ್ತು ಅವು ದೇಹಕ್ಕೆ ಯಾವ ಪ್ರಯೋಜನಗಳನ್ನು ನೀಡುತ್ತೆ ಅನ್ನೋದನ್ನ ತಿಳಿಯಿರಿ.
ಇದರಲ್ಲಿ ಇರುವ ಪಾಲಿ ಫಿನಾಲ್ ಗಳು ಶರೀರದ ವಿಭಿನ್ನ ಅಂಗಾಂಶಗಳಲ್ಲಿಯ ಜೀರ್ಣರಸಗಳನ್ನು ಕಡಿಮೆ ಮಾಡುವುದಲ್ಲದೆ, ಹೃದಯ ರೋಗ, ವಿವಿಧ ಕ್ಯಾನ್ಸರ್ ಹಾಗೂ ಗಡ್ಡೆಗಳ ಬೆಳವಣಿಗೆಯನ್ನು ಪ್ರತಿರೋಧಿಸುತ್ತದೆ. ಕೆಲವು ಪಾಲಿಫಿನಾಲ್ ಗಳು ಸೂರ್ಯ ವಿಕಿರಣದ ಹಾನಿಕಾರಕ ಪ್ರಭಾವವನ್ನು ಪ್ರತಿರೋಧಿಸಿ ರಕ್ತಪರಿಚಲನೆಯನ್ನು ವೃದ್ಧಿಸುತ್ತವೆ.
ಬ್ಲ್ಯಾಕ್ ಟೀ: ಬ್ಲ್ಯಾಕ್ ಟೀ ಚಹಾದಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಇದು ಬ್ಲ್ಯಾಕ್ ಕಾಫಿಗೆ ಪರಿಪೂರ್ಣ ಪರ್ಯಾಯವಾಗಿದೆ. ಬ್ಲ್ಯಾಕ್ ಟೀ ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಬ್ಲ್ಯಾಕ್ ಟೀ ಕಡಿಮೆ ಕ್ಯಾಲೋರಿ ಹೊಂದಿದ್ದು, ಚಹಾವನ್ನು ಕುಡಿಯುವ ಪ್ರಯೋಜನಗಳೊಂದಿಗೆ ರಿಫ್ರೆಶ್ ಪಾನೀಯವಾಗಿದೆ.
ಕಾಫಿ ಮತ್ತು ಚಹಾದಲ್ಲಿ ಕೆಫಿನ್ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಇದೆ. ಇದರಿಂದ ದಿನಕ್ಕೆ ಎರಡು ಕಪ್ ಗಿಂತ ಹೆಚ್ಚು ಟೀಕುಡಿದರೆ ಅದರಿಂದ ನಿದ್ರೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಹಾಲು ಮತ್ತು ಸಕ್ಕರೆ ಹಾಕಿ ಟೀಕುಡಿದರೆ ಅದರಿಂದ ಆಗುವ ಬಹುದೊಡ್ಡ ಅಡ್ಡಪರಿಣಾಮವು ಇದಾಗಿದೆ. ಹಾಲು ಹಾಕಿದ ಟೀಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಆತಂಕ, ಒತ್ತಡ ಹಾಗೂ ಆರಾಮವಿಲ್ಲದಿರುವ ಸಮಸ್ಯೆ ಕಾಡುವುದು.
ಚಹಾವನ್ನು ಕುಡಿಯುವುದರಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಂತಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರಬಹುದು ಎಂದು ಅಧ್ಯಯನಗಳು ಸೂಚಿಸಿವೆ. ಚಹಾವು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಚಹಾವು ಕ್ಯಾಟೆಚಿನ್ಗಳನ್ನು ಸಹ ಹೊಂದಿದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್ನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಚಹಾವು ಸುಧಾರಿತ ಮೆದುಳಿನ ಕಾರ್ಯ, ಸುಧಾರಿತ ಜೀರ್ಣಕಾರಿ ಆರೋಗ್ಯ ಮತ್ತು ಸುಧಾರಿತ ಮೂಳೆಯ ಆರೋಗ್ಯಕ್ಕೆ ಸಹ ಸಂಬಂಧ ಹೊಂದಿದೆ.
ಚಹಾವು ದೈನಂದಿನ ದ್ರವ ಸೇವನೆಗೆ ಕೊಡುಗೆ ನೀಡುತ್ತದೆ ಮತ್ತು ವಿಶೇಷವಾಗಿ ಸಕ್ಕರೆ ಅಥವಾ ಹಾಲು ಸೇರಿಸದೆ ಸೇವಿಸಿದರೆ ಜಲಸಂಚಯನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತುಳಸಿ ಟೀ: ಒಂದು ಕಪ್ ತುಳಸಿ ಟೀ ಅನೇಕ ಧನಾತ್ಮಕ ಪ್ರಯೋಜನಗಳನ್ನು ಹೊಂದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ದೇಹಕ್ಕೆ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ನೀವು ಶೀತ ಅಥವಾ ಗಂಟಲು ನೋವು ಹೊಂದಿದ್ದರೆ ತುಳಸಿ ಚಹಾ ವಿಶೇಷವಾಗಿ ಪರಿಣಾಮಕಾರಿಯಾಗಿದೆ.
ಚಹಾದಲ್ಲಿ ಇರುವಂತಹ ಥಿಯೋಫಿಲಿನ್ ಎನ್ನುವ ರಾಸಾಯನಿಕವು ದೇಹವನ್ನು ನಿರ್ವಿಷಗೊಳಿಸಲು ನೆರವಾಗುವುದು. ಆದರೆ ಅತಿಯಾಗಿ ಥಿಯೋಫಿಲಿನ್ ದೇಹ ಸೇರಿದರೆ ಆಗ ನಿರ್ಜಲೀಕರಣ ಮತ್ತು ಮಲಬದ್ಧತೆಯು ಕಂಡುಬರಬಹುದು.
ಹಾಲು ಹಾಕಿದ ಟೀ ಕುಡಿದರೆ ಆಗ ಪೋಷಕಾಂಶಗಳ ಕೊರತೆಯು ಕಾಣಿಸಿಕೊಳ್ಳುವುದು. ಹಾಲು ಮತ್ತು ಟೀಜತೆಯಾಗಿ ಸೇವಿಸಿದರೆ ಅದರಿಂದ ದೇಹವು ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗದು ಎಂದು ಅಧ್ಯಯನಗಳೂ ಹೇಳಿವೆ. ಅತಿಯಾಗಿ ಟೀಕುಡಿದರೆ ಆಗ ಕಬ್ಬಿನಾಂಶ ಮತ್ತು ಸತುವಿನ ಕೊರತೆ ಕಾಡುವುದು.
ಕ್ಯಾನ್ಸರ್ ತಡೆಯುತ್ತದೆ ಎನ್ನುವ ಅಂಶದ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ. ಹೀಗಾಗಿ ಕೆಲವೊಂದು ಸಂಶೋಧನೆಗಳು ಕಂಡುಕೊಂಡಿರುವ ಪ್ರಕಾರ ಚಾದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳಾಗಿರುವ ಪಾಲಿಫೆನಾಲ್ ಮತ್ತು ಕ್ಯಾಟೆಚಿನ್ ಕೆಲವು ಕ್ಯಾನ್ಸರ್ ನ್ನು ಬರದಂತೆ ತಡೆಯುವುದು. ಬ್ಲ್ಯಾಕ್ ಟೀ ಕುಡಿಯುವಂತಹ ಮಹಿಳೆಯರಲ್ಲಿ ಬೇರೆ ಮಹಿಳೆಯರಿಗಿಂತ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯು ಕಡಿಮೆ ಇರುವುದು ಎಂದು ಅಧ್ಯಯನಗಳು ಹೇಳಿವೆ.
ಊಟ ಮಾಡಿದ ತಕ್ಷಣ ಅಥವಾ ನಿದ್ರಿಸುವ ಸಮಯದಲ್ಲಿ ಚಹಾ ಸೇವನೆ, ಹೆಚ್ಚಿನ ತೊಂದರೆ ಉಂಟು ಮಾಡುತ್ತದೆ. ಎದೆಬಡಿತ, ಮೈ ಕೈ ನಡುಗುವುದು, ಮೈ ಬೆವರುವುದು ಕಿವಿಯಲ್ಲಿ ಗಾಳಿ ಹೊಕ್ಕಿದಂತೆ ಆಗುವುದು ,ತಲೆನೋವು ಉಂಟಾಗುತ್ತದೆ. ಅಲ್ಕಲಾಯ್ಡ್ ಗಳ ಅತಿಸೇವನೆಯಿಂದ ಚಿತ್ತವಿಕಾರ, ಮನೋವಿಕಲ್ಪ, ಭ್ರಮೆ… ಹೀಗೆ ಮಾನಸಿಕ ಸಮತೋಲನ ತಪ್ಪುವ ಅಪಾಯ ಇರುವುದರಿಂದ ಚಹಾ ಮಿತವಾಗಿ ಸೇವಿಸಬೇಕು. ಮೂತ್ರಪಿಂಡಗಳ ಮೇಲೂ ಟೀ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಲ್ಲಿರುವ ಫ್ಲೋರೈಡ್ ಅತಿಯಾಗಿ ದೇಹ ಸೇರುವುದರಿಂದ ನರದೌರ್ಬಲ್ಯ, ಮೂಳೆಗಳ ವಕ್ರತೆ, ದೃಷ್ಟಿಮಾಂದ್ಯ ಉಂಟಾಗುವ ಸಾಧ್ಯತೆ ಇದೆ.