ಶನಿವಾರ, ಮೇ 4, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಳ್ಳಾಲ : ನೂತನ ಮನೆ ಖರೀದಿಸಿ ಗ್ರಹಪ್ರವೇಶವಾದ ಐದೇ ದಿನಕ್ಕೆ ಯುವತಿ ಆತ್ಮಹತ್ಯೆ : 24 ಪುಟಗಳ ಡೆತ್ ನೋಟ್ ಪತ್ತೆ..!

Twitter
Facebook
LinkedIn
WhatsApp
1 18

ಉಳ್ಳಾಲ, ಜೂ 08 : ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ 24 ಪುಟಗಳ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.

ಮೂಲತ: ಫರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದ ಅಶ್ವಿನಿ ಬಂಗೇರ(25)ಆತ್ಮ ಹತ್ಯೆಗೈದ ಯುವತಿ.ನಿನ್ನೆ ರಾತ್ರಿ ಅಶ್ವಿನಿ ತನ್ನ‌ ಸ್ನೇಹಿತೆ ಜೊತೆ ಚಾಟ್ ಮಾಡಿದ್ದಲೆನ್ನಲಾಗಿದ್ದು ಸ್ನೇಹಿತೆ ಬೆಳಿಗ್ಗೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದು ಬೆಳಕಿಗೆ ಬಂದಿದೆ.ಅಶ್ವಿನಿ ಬರೆದ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ದೊರೆತಿದೆ.ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿದ್ದು ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆಯಂತೆ.ಅಶ್ವಿನಿ ಸಾಮಾನ್ಯ ಕುಟುಂಬದವಲಾಗಿದ್ದು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದಳು.ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತ ಎಂಬವರಿಂದ ಅಶ್ವಿನಿಯೆ ಮನೆಯೊಂದನ್ನ ಖರೀದಿಸಿದ್ದು ಕಳೆದ ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ ,ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರೆನ್ನಲಾಗಿದೆ.

ಡೆತ್ ನೋಟಲ್ಲಿ ಅಶ್ವಿನಿ ತನ್ನ ಪ್ರಿಯಕರನ ಹೆಸರು ಉಲ್ಲೇಖಿಸಿ ಐ ಲವ್ ಯೂ ಅಂತ ಬರೆದಿದ್ದು ತಾನು ಬಳಸುತ್ತಿದ್ದ ಐ ಫೋನನ್ನ ಆತನಿಗೆ ನೀಡಬೇಕೆಂದು ಹೇಳಿದ್ದಾಳೆ.ಅಶ್ವಿನಿಯ ತಾಯಿ ಮಗಳನ್ನ ನೆನೆದು ಮನೆಯೊಳಗಡೆ ಬಿದ್ದು ಹೊರಳಾಡುತ್ತಿರುವ ದೃಶ್ಯ ಮನಕಲಕುವಂತಿತ್ತು.

ಹಲವು ಸಂಕಷ್ಟಗೊಳಗಾದ ಅಶ್ವಿನಿ‌ ಖಿನ್ನತೆಗೊಳಗಾಗಿ ಆತ್ಮ ಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.ಮೃತ ದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ