ಎಳನೀರು ಆರೋಗ್ಯಕ್ಕೆ ಒಳ್ಳೆಯದೇ? ಹಾಗಾದರೆ ಈ ವರದಿ ಒಮ್ಮೆ ನೋಡಿ
ಇಂದಿನ ಜನರಿಗೆ ಅದರಲ್ಲೂ ಈ ಬೇಸಿಗೆ ದಿನಗಳಲ್ಲಂತೂ ಏನಾದರೂ ತಿಂದ ಬಳಿಕ ತಂಪು ಪಾನೀಯ ಕುಡಿಯಬೇಕು ಎಂದು ಅನಿಸುತ್ತದೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ದೊರೆಯುವ ಬಣ್ಣದ ಲೇಬಲ್ ಗಳನ್ನು ಜೋಡಿಸಿ ಜನರನ್ನು ಆಕರ್ಷಿಸಿ ತಂಪು ಪಾನೀಯಗಳಿಗೆ ಮಾರು ಹೋದವರೇ ಇಲ್ಲ. ಈ ತಂಪು ಪಾನೀಯಗಳು ಕುಡಿಯುದರಿಂದ ನಮ್ಮದೇ ಆರೋಗ್ಯ ಕೆಡಿಸುತ್ತದೆ. ಹೀಗಾಗಿ ಹಿರಿಯರು ಹೇರಳವಾಗಿ ತಂಪು ಪಾನೀಯಗಳನ್ನು ಬಿಟ್ಟು ಎಳನೀರನ್ನು (Tender Coconut) ಉಪಯೋಗಿಸುತ್ತಾರೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಇದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಎಳನೀರು ಎಂಬುದು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹಲವು ಆರೋಗ್ಯದ ಅಡ್ಡ ಪರಿಣಾಮಗಳಿಗೆ ಎಳನೀರು ಉತ್ತಮ ಪರಿಹಾರ.
ಎಳನೀರು ಕುಡಿಯುವುದರಿಂದ ಮೂತ್ರಕೋಶದ ಹಾದಿಗಳು ಸ್ವಚ್ಛಗೊಳ್ಳುತ್ತದೆ. ಅಲ್ಲದೆ ಉರಿ ಮೂತ್ರದ ಸಮಸ್ಯೆಯನ್ನು ನಿವಾರಿಸುತ್ತದೆ. ಇತ್ತೀಚೆಗಿನ ದಿನಗಳಲ್ಲಿ ತೆಂಗಿನಕಾಯಿ ನೀರು ಕುಡಿಯುವುದು ಸಹ ಟ್ರೆಂಡ್ನಲ್ಲಿದೆ. ಅದು ಕುಡಿಯಲು ಸಿಹಿಯಾಗಿರುತ್ತದೆ. ಸೇವಿಸಿದಾಗ ತಣ್ಣನೆಯ ಅನುಭೂತಿ ನೀಡುವುದು ಮಾತ್ರವಲ್ಲ, ಹಲವಾರು ಅಗತ್ಯ ಪೌಷ್ಟಿಕಾಂಶಗಳನ್ನು ಕೂಡ ಒಳಗೊಂಡಿದೆ.
ಎಳನೀರು ಕುಡಿಯಲು ಯಾವುದೇ ಸಮಯವೆನ್ನುವುದು ಇಲ್ಲ. ಇದನ್ನು ದಿನದ ಯಾವುದೇ ಸಮಯ ಅಥವಾ ರಾತ್ರಿ ವೇಳೆ ಕೂಡ ಕುಡಿಯಬಹುದು. ಆದರೆ ಇದನ್ನು ನಿಗದಿತ ಸಮಯದಲ್ಲಿ ಕುಡಿದರೆ ಅದರಿಂದ ಹಲವು ಲಾಭಗಳು ಸಿಗುವುದು.
ಎಳನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಇರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಸಂಶಯ ಪಡಬೇಕಾಗಿಲ್ಲ.
- ತೆಂಗಿನಕಾಯಿ ನೀರಿನಲ್ಲಿ ಶೇಕಡಾ 94ರಷ್ಟು ನೀರು ಮತ್ತು ಅತ್ಯಂತ ಕಡಿಮೆ ಕೊಬ್ಬು ಇರುತ್ತದೆ. ಆದರೆ ತೆಂಗಿನ ಹಾಲಿನಲ್ಲಿ ಶೇಕಡಾ 50ರಷ್ಟು ನೀರು ಮತ್ತು ಹೆಚ್ಚು ಕೊಬ್ಬು ಇರುತ್ತದೆ. ಒಂದು ಲೋಟ (240 ಮಿಲಿ ಲೀಟರ್) ತೆಂಗಿನ ನೀರಿನಲ್ಲಿ, 60 ಕ್ಯಾಲೋರಿ ಇರುತ್ತದೆ. 15 ಕಾರ್ಬೊಹೈಡ್ರೇಟ್ಗಳು, 8 ಗ್ರಾಂ ಸಕ್ಕರೆ, ಶೇಕಡಾ 4ರಷ್ಟು ಕ್ಯಾಲ್ಸಿಯಂ, ಮೆಗ್ನೀಶಿಯಂ, ಶೇಕಡಾ 2ರಷ್ಟು ಫಾಸ್ಪರಸ್ ಮತ್ತು ಶೇಕಡಾ 15ರಷ್ಟು ಪೊಟ್ಯಾಶಿಯಂ ಇರುತ್ತದೆ.
- ಮಲಬದ್ಧತೆ ಮತ್ತು ನಿರ್ಜಲೀಕರಣ ನಿವಾರಣೆ ಮಾಡಲು ಗರ್ಭಿಣಿಯರು ಎಳನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಇದರಿಂದ ಮಾರ್ನಿಂಗ್ ಸಿಕ್ನೆಸ್ ನಿವಾರಣೆ ಆಗುವುದು ಮತ್ತು ಎದೆಯುರಿಯಂತಹ ಸಮಸ್ಯೆಯು ಕಡಿಮೆ ಆಗುವುದು. ಎಳನೀರು ರಕ್ತ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ಮದುಮೇಹ ಇರುವ ಪ್ರಾಣಿಗಳಲ್ಲಿ ಆರೋಗ್ಯ ಸುಧಾರಣೆಗೆ ಕಾರಣ ಆಗಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಇತ್ತೀಚಿನ ಅಧ್ಯಯನವೊಂದರಲ್ಲಿ ತೆಂಗಿನ ನೀರು ಇಲಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸನ್ನು ಕಡಿಮೆ ಮಾಡುತ್ತದೆ ಎಂಬುವುದನ್ನು ತಿಳಿಸಿದೆ. ಆದರೂ ಮನುಷ್ಯರ ಮೇಲೆ ಈ ಪರಿಣಾಮಗಳು ಹೇಗಿರುತ್ತವೆ ಎಂಬುದನ್ನು ತಿಳಿಯಲು ಇನ್ನಷ್ಟು ಅಧ್ಯಯನಗಳ ಅಗತ್ಯ ಇರುತ್ತದೆ.
- ಸಂಧಿವಾತಕ್ಕೂ ಇದು ಉತ್ತಮ ಔಷಧಿ. ಇನ್ನು ಶುಂಠಿಯಲ್ಲಿ ಪೊಟ್ಯಾಶಿಯಮ್, ಮ್ಯಾಗ್ನೀಷಿಯಂ, ಮ್ಯಾಂಗನೀಸ್ ಸಮೃದ್ಧವಾಗಿವೆ. ಜೀರ್ಣಾಂಗವ್ಯೂಹದ ತೊಂದರೆ ನಿವಾರಿಸುವಲ್ಲಿ ಶುಂಠಿ ಪರಿಣಾಮಕಾರಿ. ಇದನ್ನೂ ಎಳನೀರಿನೊಂದಿಗೆ ಸೇವಿಸಬಹುದು. ಹಾಗೆಯೇ ಪಾದರಲವಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಳನೀರಿಗೆ ಬೆರೆಸಿ ಕುಡಿಯಬಹುದು. ಹಾಗೆಯೇ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಜೀರ್ಣಾಂಗ ಬಲಗೊಳ್ಳುತ್ತದೆ.
- ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಎಳನೀರಿನಲ್ಲಿ ಲೌರಿಕ್ ಆಮ್ಲವಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿಸುವುದು, ಚಯಾಪಚಯ ಹೆಚ್ಚಿಸುವುದು ಮತ್ತು ತೂಕ ಇಳಿಸಲು ಕೂಡ ಸಹಕಾರಿ.
- ಕಿಡ್ನಿ ಕಲ್ಲುಗಳು ಬಾರದಂತೆ ತಡೆಯಲು ನೀರು ಸೇವನೆ ಅಗತ್ಯ. ಸಾದಾ ನೀರು ಒಳ್ಳೆಯ ಆಯ್ಕೆ, ಆದರೆ ಎಳನೀರು ಅತ್ಯುತ್ತಮ ಆಯ್ಕೆ ಎನ್ನುತ್ತವೆ ಎರಡು ಚಿಕ್ಕ ಅಧ್ಯಯನಗಳು.
- ವ್ಯಾಯಾಮದ ಬಳಿಕ ಎಳನೀರು ಕುಡಿದರೆ ಅದರಿಂದ ದೇಹವು ಕಳೆದುಕೊಂಡಿರುವ ಎಲೆಕ್ಟ್ರೋಲೈಟ್ಸ್ ಮರಳಿ ಪಡೆಯಲು ಸಹಕಾರಿ. ಎಳನೀರು ಕುಡಿದರೆ ಅದರಿಂದ ನಿಶ್ಯಕ್ತಿ ಮತ್ತು ಬಳಲಿಕೆ ನಿವಾರಣೆ ಮಾಡಬಹುದು ಹಾಗೂ ದೇಹಕ್ಕೆ ಇದು ಶಕ್ತಿ ನೀಡುವುದು.
- ನೈಸರ್ಗಿಕ ಎಳನೀರು ಕೊಂಚ ಸಿಹಿಯಾಗಿರುತ್ತದೆ ಮತ್ತು ಅದರಲ್ಲಿ ಕ್ಯಾಲೋರಿ ಹಾಗೂ ಕಾರ್ಬ್ಗಳು ಕಡಿಮೆ ಇರುತ್ತವೆ. ನೇರವಾಗಿ ತೆಂಗಿನಕಾಯಿ ಒಡೆದು ನೀರನ್ನು ಕುಡಿದರೆ ಇನ್ನಷ್ಟು ತಾಜಾ ಆಗಿರುತ್ತದೆ. ಅದನ್ನು ಸ್ಮೂದಿಗಳಲ್ಲಿ ಅಥವಾ ಚೀಯಾ ಬೀಜದ ಪುಡ್ಡಿಂಗ್ಗಳಲ್ಲೂ ಬಳಸಬಹುದು.
- ಎಳನೀರು ಕುಡಿದರೆ ಇದು ಜೀರ್ಣಕ್ರಿಯೆಗೆ ಸಹಕಾರಿ. ಇದು ಜೀರ್ಣಕ್ರಿಯೆಗೆ ವೇಗ ನೀಡುವುದು ಮತ್ತು ಊಟ ಬಳಿಕದ ಹೊಟ್ಟೆ ಉಬ್ಬರ ತಡೆಯುವುದು. ನಿಯಮಿತವಾಗಿ ಎಳನೀರು ಕುಡಿದರೆ ಇದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಸಮತೋಲನ ಕಾಪಾಡಬಹುದು ಮತ್ತು ರಕ್ತದೊತ್ತಡವು ಸರಿಯಾಗಿ ಇರುವುದು. ಜೀರ್ಣಕ್ರಿಯ ವ್ಯವಸ್ಥೆಯನ್ನು ಇದು ಕಾಪಾಡುವುದು.
- ಎಳನೀರು ಸೇವನೆ ಮಾಡಿದರೆ, ಅದರಿಂದ ದೇಹದಲ್ಲಿನ ಆತಂಕ ನಿವಾರಣೆ ಆಗುವುದು ಹಾಗೂ ಹೃದಯ ಬಡಿತ ಕಡಿಮೆ ಮಾಡಬಹುದು. ಮಲಗುವ ಮೊದಲು ಒಂದು ಲೋಟ ಎಳನೀರು ಕುಡಿದರೆ ಒತ್ತಡ ನಿವಾರಣೆ ಆಗುವುದು ಮತ್ತು ಮನಸ್ಸು ಶಾಂತವಾಗುವುದು.
- ಆಲ್ಕೋಹಾಲ್ ನಿಂದಾಗಿ ನಿರ್ಜಲೀಕರಣ ಉಂಟಾಗುವುದು ಮತ್ತು ಇದರಿಂದಾಗಿ ತಲೆನೋವು, ವಾಕರಿಕೆ ಬರುವುದು. ಎಳನೀರು ಕುಡಿದರೆ ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಮರು ಸ್ಥಾಪನೆ ಮಾಡಲು ನೆರವಾಗುವುದು.
ಹೀಗೆ ನಾನಾ ರೀತಿಯಲ್ಲಿ ಎಳನೀರು ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚು ಉಪಯೋಗಗಳಿವೆ ಹಿಂದಿನ ಯುವಜನರು ತಂಪು ಪಾನೀಯಗಳನ್ನು ಅತಿಯಾಗಿ ಸೇವಿಸುವ ಬದಲು ಏಳನೀರನ್ನು ಕುಡಿದರೆ ಬಲು ಉತ್ತಮ.