ಪಾಕ್ ತಂಡವನ್ನು ಮಣಿಸಿ ದಾಖಲೆಯ 4ನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತ..
ಭಾರತದ ಜೂನಿಯರ್ ಹಾಕಿ ತಂಡ (India’s junior hockey team) ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸುವ ಮೂಲಕ ಭಾರತ ನಾಲ್ಕನೇ ಬಾರಿಗೆ ಜೂನಿಯರ್ ಏಷ್ಯಾಕಪ್ (Junior Asia Cup) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಈ ಟೂರ್ನಿಯ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿಯಾಗಿದ್ದವು. ಹೀಗಾಗಿ ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಆದರೆ ಎರಡೂ ತಂಡಗಳು ಮುಖಾಮುಖಿಯಾದ ಮೊದಲ 19 ನಿಮಿಷಗಳಲ್ಲಿ ಭಾರತ, ಪಾಕಿಸ್ತಾನದ ಆಟವನ್ನು ಮುಗಿಸಿತು.
ಪಾಕಿಸ್ತಾನಕ್ಕೆ ತರಬೇತಿ ನೀಡಿದ್ದ ಭಾರತದ ಮಾಜಿ ಕೋಚ್
ಭಾರತದ ಪರ ಅಂಗದ್ ಬೀರ್ ಸಿಂಗ್ 12ನೇ ನಿಮಿಷದಲ್ಲಿ ಮತ್ತು ಅರಿಜಿತ್ ಸಿಂಗ್ 19ನೇ ನಿಮಿಷದಲ್ಲಿ ಗೋಲು ಗಳಿಸಿದರು. ಭಾರತದ ಮಾಜಿ ಕೋಚ್ ರೋಲೆಂಟ್ ಓಲ್ಟ್‌ಮನ್ಸ್ ಅವರಡಿಯಲ್ಲಿ ತರಬೇತಿ ಪಡೆದಿದ್ದ ಪಾಕಿಸ್ತಾನಿ ತಂಡದ ಪರ ಬಶರತ್ ಅಲಿ 37ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು. ಇವರನ್ನು ಹೊರತುಪಡಿಸಿದರೆ ಪಾಕ್ ಪರ ಇನ್ಯಾವುದೆ ಗೋಲು ಸಿಡಿಯಲಿಲ್ಲ. ಅಂತಿಮವಾಗಿ ಪಾಕ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ದಾಖಲೆಯ 4ನೇ ಭಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. ಇದಕ್ಕೂ ಮುನ್ನ ಭಾರತ 2004, 2005 ಮತ್ತು 2015ರಲ್ಲಿ ಪ್ರಶಸ್ತಿ ಗೆದ್ದಿದ್ದರೆ, ಪಾಕಿಸ್ತಾನ 1987, 1992 ಮತ್ತು 1996ರಲ್ಲಿ ಪ್ರಶಸ್ತಿ ಗೆದ್ದಿತ್ತು.
India are in the driving seat and hold a comfortable lead in the first half. Can we put the match beyond all doubt in the second half? Stay tuned.
— Hockey India (@TheHockeyIndia) June 1, 2023
Catch all the action LIVE on https://t.co/pYCSK2hYka app.#HockeyIndia #IndiaKaGame #AsiaCup2023 #GoldToIndianColts… pic.twitter.com/uvvaivh17S
ಫೈನಲ್‌ನಲ್ಲಿ ನಾಲ್ಕನೇ ಹಣಾಹಣಿ
ಅಷ್ಟೇ ಅಲ್ಲ, ಇದಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಈ ಟೂರ್ನಿಯ ಫೈನಲ್‌ನಲ್ಲಿ 3 ಬಾರಿ ಮುಖಾಮುಖಿಯಾಗಿದ್ದವು. 1996ರಲ್ಲಿ ಪಾಕಿಸ್ತಾನ ಗೆದ್ದಿದ್ದರೆ, 2004ರಲ್ಲಿ ಭಾರತ ಗೆದ್ದಿತ್ತು. ಕಳೆದ ಬಾರಿ ಅಂದರೆ 2015ರಲ್ಲಿ ಭಾರತ ಫೈನಲ್‌ನಲ್ಲಿ 6-2 ಅಂತರದಲ್ಲಿ ಪಾಕ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು.
7ನೇ ನಿಮಿಷದಲ್ಲಿ ಖಾತೆ ತೆರೆದ ಪಾಕಿಸ್ತಾನ
ಮೊದಲ ಕ್ವಾರ್ಟರ್‌ನಲ್ಲಿಯೇ ಭಾರತ ಪಾಕಿಸ್ತಾನದ ಮೇಲೆ ಒತ್ತಡ ಹೇರಿತು. ವಿರಾಮದ ವೇಳೆಗೆ ಭಾರತ ಏಕಪಕ್ಷೀಯವಾಗಿ 2-0 ಮುನ್ನಡೆ ಸಾಧಿಸಿತು. ಹಾಫ್ ಟೈಮ್ಗೂ ಮುನ್ನವೇ ಖಾತೆ ತೆರೆಯಲು ಪಾಕಿಸ್ತಾನಕ್ಕೆ ಅವಕಾಶವಿದ್ದರೂ ಭಾರತದ ಗೋಲ್ ಕೀಪರ್ ಮೋಹಿತ್ ಅದಕ್ಕೆ ಅವಕಾಶ ನೀಡಲಿಲ್ಲ. ಆದರೆ ಮೂರನೇ ಕ್ವಾರ್ಟರ್ನ 7ನೇ ನಿಮಿಷದಲ್ಲಿ ಪಾಕಿಸ್ತಾನ ತನ್ನ ಖಾತೆ ತೆರೆಯಿತು.
ಪಾಕ್ ತಂತ್ರ ಫಲಿಸಲಿಲ್ಲ
ಇನ್ನು ಪಂದ್ಯದ ಆರಂಭದಿಂದಲೂ ಪಾಕಿಸ್ತಾನದ ಪ್ರತಿಯೊಂದು ಪ್ರಯತ್ನವನ್ನು ಭಾರತ ತಂಡ ವಿಫಲಗೊಳಿಸಿತು. 50ನೇ ನಿಮಿಷದಲ್ಲಿ ಪಾಕಿಸ್ತಾನಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತ್ತಾದರೂ ಆ ಅವಕಾಶವನ್ನು ಬಳಸಿಕೊಳ್ಳಲು ಪಾಕ್ ತಂಡಕ್ಕೆ ಸಾಧ್ಯವಾಗಲಿಲ್ಲ. ಆ ಬಳಿಕ 4 ನಿಮಿಷಗಳ ನಂತರ ಪಾಕ್ ತಂಡಕ್ಕೆ 2 ಪೆನಾಲ್ಟಿ ಕಾರ್ನರ್ ಸಿಕ್ಕಿತ್ತಾದರೂ ಅದನ್ನು ಗೋಲಾಗಿ ಪರಿವರ್ತಿಸಲು ಭಾರತ ತಂಡ ಅವಕಾಶ ನೀಡಲಿಲ್ಲ.
Sweet Victory ✌️
— Hockey India (@TheHockeyIndia) June 1, 2023
India win a well fought encounter against arch nemesis Pakistan in the finals of Men's Junior Asia Cup 2023.#HockeyIndia #IndiaKaGame #AsiaCup2023 #GoldToIndianColts#GloryToIndianColts pic.twitter.com/LYcGHypdcW
ಲೀಗ್ ಹಂತದಲ್ಲೂ ಪೈಪೋಟಿ
ವಾಸ್ತವವಾಗಿ ಈ ಫೈನಲ್ ಪಂದ್ಯಕ್ಕೂ ಮೊದಲು, ಎರಡೂ ತಂಡಗಳು ಹಾಕಿ ಜೂನಿಯರ್ ಏಷ್ಯಾಕಪ್ 2023 ರ ಲೀಗ್ ಹಂತದಲ್ಲೂ ಮುಖಾಮುಖಿಯಾಗಿದ್ದವು. ಆದರೆ ಆ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಬಾರಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದವು. ಇನ್ನುಳಿದಂತೆ ಲೀಗ್ ಹಂತದಲ್ಲಿ ಉಭಯ ತಂಡಗಳು ಒಂದೂ ಪಂದ್ಯ ಸೋತಿರಲಿಲ್ಲ. ಭಾರತ ತಂಡವು ಅತ್ಯುತ್ತಮ ಗೋಲು ಸರಾಸರಿಯ ಆಧಾರದ ಮೇಲೆ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದು ಫೈನಲ್ಗೆ ಎಂಟ್ರಿಕೊಟ್ಟಿತ್ತು.