ಮಕ್ಕಳ ಜೊತೆ ಕ್ರಿಕೆಟ್ ಆಡಿದ ರೇಣುಕಾಚಾರ್ಯ
Twitter
Facebook
LinkedIn
WhatsApp
ದಾವಣಗೆರೆ: ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ (Honnali) ಕ್ಷೇತ್ರದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (M.P.Renukacharya) ಗ್ಯಾರಂಟಿ ಕಾರ್ಡ್ ವಿರುದ್ಧ ಅಭಿಯಾನ ಮಾಡುವುದರ ಜೊತೆಗೆ ಮಕ್ಕಳೊಂದಿಗೆ ಕ್ರಿಕೆಟ್ (Cricket) ಆಡಿದ್ದಾರೆ.
ನಿತ್ಯ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ತನ್ನ ಅವಧಿಯಲ್ಲಿ ಮಾಡಿದ ಕಾಮಗಾರಿಗಳನ್ನು ವೀಕ್ಷಣೆ ಮಾಡುತ್ತಿದ್ದು, ಕಂಕನಹಳ್ಳಿ ಹಾಗೂ ಕೊಡಚಗೊಂಡನಹಳ್ಳಿ ಗ್ರಾಮದ ಯುವಕರ ಜೊತೆ ಕ್ರಿಕೆಟ್ ಆಡಿದ್ದಾರೆ. ಹಾಲಿ ಶಾಸಕ ಸನ್ಮಾನಕ್ಕೆ ಮಾತ್ರ ಸೀಮಿತವಾದರೆ ಇತ್ತ ರೇಣುಕಾಚಾರ್ಯ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದಾರೆ.
ಹಾಲಿ ಶಾಸಕ ಶಾಂತನಗೌಡ (Shanthanagowda) ಅವರ ಬದಲು ಅವರ ಪುತ್ರ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದು, ಮಳೆ ಹಾನಿ ಪ್ರದೇಶ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ರೇಣುಕಾಚಾರ್ಯ ತಾನೇ ಇನ್ನೂ ಶಾಸಕ ಎನ್ನುವ ಭ್ರಮೆಯಲ್ಲಿ ಕ್ಷೇತ್ರ ಸುತ್ತುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.