ಶನಿವಾರ, ಮೇ 4, 2024
ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!-ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೈಕ್‌ ಅಪಘಾತ: ಯುವಕ ಮೃತ, ಅಂಗಾಂಗಗಳನ್ನ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

Twitter
Facebook
LinkedIn
WhatsApp
images 1

ಬೆಂಗಳೂರು: ಬೈಕ್‌ ಅಪಘಾತದಲ್ಲಿ ರಕ್ತನೂ ಬಾರದೇ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಬ್ರೈನ್‌ ಡೆಡ್‌ ಆಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಒಂದು ವಾರದಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಯುವಕನ ಬ್ರೈನ್‌ ಡೆಡ್‌ ಆಗಿದೆ ಎಂದು ಬುಧವಾರ ಸಂಜೆ ವೈದ್ಯರು ಘೋಷಿಸಿದರು.

 

ರಾಜಾಜಿನಗರ ಕ್ಷೇತ್ರದ ಬಸವೇಶ್ವರ ನಗರದ ರೋಹಿತ್ (26) ಮೃತ ಯುವಕ. ಮೃತ ಯುವಕನ ಅಂಗಾಂಗಗಳನ್ನ ದಾನ ಮಾಡಿ ಆತನ ಕುಟುಂಬಸ್ಥರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 

ಮೃತ ರೋಹಿತ್‌ನ 2 ಕಣ್ಣು, 2 ಕಿಡ್ನಿ, ಲಿವರ್, ಲಂಗ್ಸ್, ಹೃದಯ ಅಂಗಾಂಗಗಳನ್ನ ದಾನ ಮಾಡಲಾಗಿದೆ. ಬೈಕ್ ಅಪಘಾತದಲ್ಲಿ ರಕ್ತನೂ ಬರದೇ ಗಾಯಗೊಂಡಿದ್ದ ರೋಹಿತ್, 8 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ‌ನಿನ್ನೆ ಸಂಜೆ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದ್ದರು. ಮೃತ ರೋಹಿತ್‌ಗೆ 8 ತಿಂಗಳ ಪುಟ್ಟ ಕಂದಮ್ಮ ಇದ್ದು, ಕುಟುಂಬಸ್ಥರು ಕಣ್ಣೀರು ಹಾಕ್ತಿದ್ದಾರೆ.

ಕಳೆದ ಭಾನುವಾರ 21ನೇ ತಾರೀಖಿನಂದು ಎರಡು ಬೈಕ್‌ಗಳ ಮಧ್ಯೆ ರಸ್ತೆ ಅಪಘಾತವಾಗಿತ್ತು. ಬಿದ್ದ ರಭಸಕ್ಕೆ ರೋಹಿತ್‌ಗೆ ಯಾವುದೇ ಗಾಯವಾಗದೇ, ರಕ್ತನೂ ಬಂದಿರಲಿಲ್ಲ. ಪ್ರಜ್ಞೆ ತಪ್ಪಿ ಬಿದ್ದ ಕಾರಣ, ವಿಜಯನಗರದ ವಿಜಯನಗರ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಪ್ರಜ್ಞೆಯಲ್ಲಿದ್ದ ರೋಹಿತ್, ನಂತರ ಪ್ರಜ್ಞಾಹೀನಾನಾಗಿದ್ದಾನೆ.

ವೈದ್ಯರ ನಿರ್ಲಕ್ಷ್ಯದಿಂದಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವೈದ್ಯರ ನಿರ್ಲಕ್ಷ್ಯವೇ ರೋಹಿತ್‌ ಸಾವಿಗೆ ಕಾರಣ ಅಂತ ಮೃತ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ