ಮಂಗಳವಾರ, ಏಪ್ರಿಲ್ 30, 2024
ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ-Gold Rate: ಏರಿಳಿತದಲ್ಲಿರುವ ಚಿನ್ನದ ದರ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ-ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನನ್ನ ಮೇಲಿರುವ ಆರೋಪ ಸಾಬೀತಾದರೆ ನೇಣಿಗೆ ಶರಣಾಗುತ್ತೇನೆ - ಬ್ರಿಜ್ ಭೂಷಣ್

Twitter
Facebook
LinkedIn
WhatsApp
images 25

ನವದೆಹಲಿ: ಕುಸ್ತಿ ಫೆಡರೇಶನ್‌ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ  ದೆಹಲಿಯಲ್ಲಿ ಭಾರತೀಯ ಕುಸ್ತಿಪಟುಗಳು ನಡೆಸುತ್ತಿರುವ ಧರಣಿ ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್‌ ಭೂಷಣ್‌ ತಮ್ಮ ಮೇಲಿನ ಯಾವುದಾದರೂ ಒಂದು ಆರೋಪ ಸಾಬೀತಾದರೂ ನಾನು ನೇಣಿಗೆ ಶರಣಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡಿದ ಬ್ರಿಜ್‌ ಭೂಷಣ್‌, ʻಕುಸ್ತಿಪಟುಗಳು ನನಗೆ ಮಕ್ಕಳಿದ್ದಂತೆ. ನಾನು ಯಾವತ್ತೂ ಅವರನ್ನು ತೆಗಳುವ ಮಾತುಗಳನ್ನಾಡುವುದಿಲ್ಲ. ಏಕೆಂದರೆ ಅವರ ಸಾಧನೆಗಳಲ್ಲಿ ನನ್ನ ರಕ್ತದ, ಬೆವರಿನ ಫಲವೂ ಇದೆ ಎಂದು ಹೇಳಿದ್ದಾರೆ. ಹಾಗಾಗಿ ನನ್ನ ವಿರುದ್ಧದ ಆರೋಪಗಳಲ್ಲಿ ಯಾವುದಾದರೂ ಒಂದಾದರೂ ಸಾಬೀತಾದರೆ ನಾನು ನೇಣಿಗೆ ಶರಣಾಗುವುದು ಖಂಡಿತʼ ಎಂದು ಹೇಳಿದ್ದಾರೆ.

ʻಕುಸ್ತಿಪಟುಗಳು ಸರ್ಕಾರದ ಬಳಿ ನನ್ನನ್ನು ನೇಣುಗಂಬಕ್ಕೆ ಏರಿಸಬೇಕೆಂದು ಪಟ್ಟು ಹಿಡಿಯಲು ಪ್ರಾರಂಭಿಸಿ ಸುಮಾರು ನಾಲ್ಕು ತಿಂಗಳಾಗಿದೆ. ಆದರೆ ಸರ್ಕಾರ ನನ್ನನ್ನು ನೇಣಿಗೇರಿಸುತ್ತಿಲ್ಲ. ಅದಕ್ಕಾಗಿ ಅವರು ತಮ್ಮ ಪದಕಗಳನ್ನು ಪವಿತ್ರ ಗಂಗೆಗೆ ಎಸೆಯಲು ತೀರ್ಮಾನಿಸಿದ್ದರು. ತಮ್ಮ ಪದಕಗಳನ್ನು ಗಂಗೆಗೆ ಎಸೆಯುವುದರಿಂದ ಬ್ರಿಜ್‌ ಭೂಷಣ್‌ನನ್ನು ಗಲ್ಲಿಗೇರಿಸುವುದಿಲ್ಲ. ಬದಲಾಗಿ ನನ್ನ ಮೇಲಿನ ಆರೋಪಗಳಲ್ಲಿ ಒಂದನ್ನಾದರೂ ಸಾಬೀತುಪಡಿಸಿ ಅದನ್ನು ಕೋರ್ಟಿಗೆ ಹಾಜರುಪಡಿಸಿ. ಅದನ್ನು ನಾನು ಒಪ್ಪಿಕೊಳ್ಳುವೆʼ ಎಂದು ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಸಂಸದನೂ, ಕುಸ್ತಿ ಫೆಡರೇಷನ್‌ ಅಧ್ಯಕ್ಷನೂ ಆಗಿರುವ ಬ್ರಿಜ್‌ ಭೂಷಣ್‌ ಸಿಂಗ್‌ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ