ರಾಯಚೂರು: ತಂದೆಗೆ ಊಟ ಕೊಡಲು ಜಮೀನಿಗೆ (Farm) ತೆರಳಿದ್ದ ಸಂದರ್ಭ ಹಾವು ಕಡಿದು (Snake Bite) ಬಾಲಕ ಸಾವನ್ನಪ್ಪಿದ ಘಟನೆ ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ.
ರಾತ್ರಿ ತಂದೆಗೆ ಊಟ ಕೊಡಲು ಜಮೀನಿಗೆ ಹೋಗುತ್ತಿದ್ದಾಗ ಹಾವು ಕಡಿದು ಬಾಲಕ ಸಾವು
Twitter
Facebook
LinkedIn
WhatsApp
ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಕ್ಯಾದಿಗೇರಾದ ಎ.ಜಿ.ಕಾಲೋನಿಯಲ್ಲಿ ಘಟನೆ ನಡೆದಿದ್ದು, ಆಂಜನೇಯ (15) ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾನೆ. ಜಮೀನಿನಲ್ಲಿದ್ದ ಕುರಿದೊಡ್ಡಿ ಬಳಿ ವಾಸವಿದ್ದ ತಂದೆ-ತಾಯಿಗೆ ರಾತ್ರಿ ಊಟ ಕೊಡಲು ಹೋದಾಗ ಘಟನೆ ನಡೆದಿದೆ. ಬಾಲಕ 10ನೇ ತರಗತಿ ಓದುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಹಾವು ಕಡಿದ ಕೂಡಲೇ ಬಾಲಕನನ್ನು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಸಮರ್ಪಕ ಚಿಕಿತ್ಸೆ ಸಿಗದ ಹಿನ್ನೆಲೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.