ವಿಜಯಪುರ : ಕೆಎಸ್‌ಆರ್‌ಟಿಸಿ ಬಸ್ ಓಡಿಸುತ್ತಲೇ ಚಾಲಕ ಸಾವು

ವಿಜಯಪುರ (ಮೇ 30): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಚಲಿಸುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ನಿಯಂತ್ರಣ ತಪ್ಪಿದ ಸಾರಿಗೆ ಬಸ್ ರಸ್ತೆ ಪಕ್ಕದಲ್ಲಿಯೇ ಇದ್ದ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ.
ಬಸ್ ಓಡಿಸುವಾಗಲೇ ಡ್ರೈವರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇದರಿಂದ ಬಸ್ ಚಾಲಕನಿಲ್ಲದೇ ನಿಯಂತ್ರಣ ತಪ್ಪಿದ ಬಸ್ ಪೆಟ್ರೋಲ್ ಬಂಕ್‌ಗೆ ನುಗ್ಗಿದೆ. ಆದರೆ, ಬಸ್ ಕಂಡೆಕ್ಟರ್ (ನಿರ್ವಾಹಕ) ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ. ಇನ್ನು ಘಟನೆಯು ವಿಜಯಪುರ ಜಿಲ್ಲೆ ಸಿಂದಗಿ ನಗರದಲ್ಲಿ ನಡೆದಿದೆ.
ಮುರಿಗೆಪ್ಪ ಅಥಣಿ ಹೃದಯಾಘಾತದಿಂದ ಸಾವನ್ನಪ್ಪಿದ ಡ್ರೈವರ್ ಆಗಿದ್ದಾನೆ. ಇನ್ನು ಬಸ್ ಪೆಟ್ರೋಲ್ ಬಂಕ್‌ಗೆ ನುಗ್ಗಿತ್ತಿದ್ದರೂ ಎಚ್ಚರಿಕೆ ನೀಡದರೂ ಕೇಳದ ಹಿನ್ನೆಲೆಯಲ್ಲಿ ಕಂಡಕ್ಟರ್ ಮುಂದೆ ಹೋಗಿ ನೋಡಿದ್ದಾನೆ. ಆಗ ಕುಸಿದು ಬಿದ್ದಿದ್ದ ಡ್ರೈವರ್‌ನನ್ನು ಪಕ್ಕಕ್ಕೆ ಸರಿಸಿ ಕಂಡಕ್ಟರ್ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾನೆ. ಇದರಿಂದ ಮುಂದೆ ಆಗುತ್ತಿದ್ದ ದೊಡ್ಡ ದುರಂತ ತಪ್ಪಿದಂತಾಗಿದೆ.