ಪಾರ್ಟಿ ಮಾಡುವ ವೇಳೆ ನಿಂದನೆ; ಸ್ನೇಹಿತೆಯನ್ನು ಇರಿದು ಕೊಂದ ಗೆಳತಿ
ನವದೆಹಲಿ: ಸ್ನೇಹಿತೆಯ ಜೊತೆ ಪಾರ್ಟಿ ಮಾಡುವ ವೇಳೆ ವಿಚಾರ ಒಂದಕ್ಕೆ ಇಬ್ಬರು ಗೆಳತಿಯರ ನಡುವೆ ಗಲಾಟೆ ಶುರುವಾಗಿದ್ದು ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಘಟನೆಯೂ ಉತ್ತರ ದೆಹಲಿಯ ಮಜ್ನು ಕಾ ಟಿಲ್ಲಾ ಪ್ರದೇಶದಲ್ಲಿ ನಡೆದಿದ್ದು ಮೃತ ದುರ್ದೈವಿಯನ್ನು ರಾಣಿ(35) ಎಂದು ಗುರುತಿಸಲಾಗಿದ್ದು ಆರೋಪಿ ಸಪ್ನಾ(35) ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಪ್ನಾ, ರಾಣಿ ಹಾಗು ಸ್ನೇಹಿತೆಯರು ಸೋಮವಾರ ಸಂಜೆ ಗೆಳತಿ ಒಬ್ಬರ ಮನೆಯ ಮೇಲೆ ಪಾರ್ಟಿ ಮಾಆಡುತ್ತಿದ್ದರು. ಈ ವೇಳೆ ಮೃತ ರಾಣಿ ಕುಡಿದ ಮತ್ತಿನಲ್ಲಿ ಸಪ್ನಾ ಅವರ ತಂದೆಯ ಬಗ್ಗೆ ಲಘುವಾಗಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಸಪ್ನಾ ರಾಣಿಗೆ ಇರಿದಿದ್ದಾಳೆ. ತೀವ್ರ ರಕ್ತಸ್ತಾವ್ರದಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಪಾರ್ಟಿಯಲ್ಲಿ ಹಾಜರಿದ್ದ ಮಹಿಳೆ ಒಬವ್ಬರು ದೂರು ನೀಡಿದ್ದರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಆರೋಪಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.