ಮಂಗಳೂರು : ಜೂನ್ 2 ರಿಂದ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ!
Twitter
Facebook
LinkedIn
WhatsApp

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ – ಬೆಂದೂರ್‌ವೆಲ್ ಪಣಂಬೂರು 1000 ಎಂಎಂ ವ್ಯಾಸ ಕೊಳವೆಯನ್ನು ಅಡ್ಯಾರ್ ಕಟ್ಟೆಯ ಬಳಿ ಬಲಪಡಿಸುವ ಕಾಮಗಾರಿ ಹಾಗೂ ಕೊಟ್ಟಾರಚೌಕಿ ಬಳಿ ಕೆಯುಐಡಿಎಫ್‌ಸಿ ವತಿಯಿಂದ 900 ಎಂಎಂ ವ್ಯಾಸ ಕೊಳವೆ ಮರುಜೋಡಣೆ ಕಾಮಗಾರಿ ಇರುವುದರಿಂದ ಜೂನ್ 2ರ ಬೆಳಗ್ಗೆ 6 ಗಂಟೆಯಿಂದ ಜೂನ್ 4ರ ಬೆಳಗ್ಗೆ 6 ಗಂಟೆಯವರೆಗೆ ನಗರದ ಕೆಲವು ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ನಗರದ ಬೆಂದೂರ್‌ವೆಲ್ ಲೋ ಲೆವೆಲ್ ಪ್ರದೇಶಗಳಾದ ಪಿವಿಎಸ್, ಲೇಡಿಹಿಲ್, ಬಂದರು, ಬಿಜೈ, ಸೂಟರ್‌ಪೇಟೆ, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲಬೈಲು, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ, ಕಾನ, ಬಾಳಾ, ಕುಳಾಯಿ, ಮುಕ್ಕ, ಪಂಬೂರು ಮುಂತಾದ ಪ್ರದೇಶಗಳಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ನಿಲ್ಲಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.