ಉಡುಪಿ: ಉದ್ಯೋಗ ಸಿಗದೇ ಬೇಸತ್ತು ಎಂ.ಕಾಮ್ ಓದಿದ್ದ ಯುವತಿ ಮನನೊಂದು ಆತ್ಮಹತ್ಯೆ
ಉಡುಪಿ: ಉದ್ಯೋಗ (employment) ಸಿಗದೇ ಬೇಸತ್ತು, ಖಿನ್ನತೆಗೆ ಒಳಗಾಗಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌತಮಿ (22) ಆತ್ಮಹತ್ಯೆಗೆ ಶರಣಾದ ಯುವತಿ. ಡೆತ್ ನೋಟ್ ಬರೆದಿಟ್ಟ ಗೌತಮಿ, ಮನೆಯ ಮೊದಲ ಮಹಡಿಯಲ್ಲಿ ನೇಣಿಗೆ (suicide) ಶರಣಾಗಿದ್ದಾರೆ. ಉಡುಪಿ (udupi) ಜಿಲ್ಲೆಯ ಬೈಂದೂರಿನ ಕಾಲ್ತೋಡು ಗ್ರಾಮದಲ್ಲಿ ಈ ದಾರುಣ ನಡೆದಿದೆ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಎಂ ಕಾಮ್ ಶಿಕ್ಷಣ ಮುಗಿಸಿದ್ದ (Graduate) ಗೌತಮಿ ಬ್ಯಾಂಕಿಂಗ್ ಪರೀಕ್ಷೆ ಹಾಗೂ ಇತರೆ ಕಂಪನಿಗಳ ನೇಮಕಾತಿಗಾಗಿ ಪರೀಕ್ಷೆ ಬರೆದಿದ್ದರು.
ಅರ್ಹತೆ ಇದ್ದರೂ ಉದ್ಯೋಗ ಸಿಗಲಿಲ್ಲವೆಂದು ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಿಯಾಗಿ ವರ್ಷದ ಹಿಂದೆ ಇಂತಹುದೇ ಪ್ರಕರಣ ನಡೆದಿತ್ತು…
ಸರಿಯಾಗಿ ವರ್ಷದ ಹಿಂದೆ ಇದೇ ಮೇ ತಿಂಗಳಲ್ಲಿ ಇಂತಹುದೇ ಪ್ರಕರಣ ನಡೆದಿತ್ತು. 23 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹನಾ ಎಂಬ ಯುವತಿ, ಹತ್ತಾರು ದಿನ ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ಬದುಕುಳಿಯಲು ಹೋರಾಟ ನಡೆಸಿ, ಕೊನೆಗೆ ಸಾವಿಗೆ ಶರಣಾಗಿದ್ದರು. ತಾನು ಎಂಬಿಎ (MBA) ಓದಿದ್ದು, ಅರ್ಹತೆಗೆ ತಕ್ಕ ನೌಕರಿ ಸಿಗಲಿಲ್ಲ ಎಂಬುದು ಆಕೆಯ ನೋವಾಗಿತ್ತು.