ಪರೀಕ್ಷೆಯಲ್ಲಿ ಪಾಸ್ ಮಾಡಲು ದೈಹಿಕ ಸಂಬಂಧ ಬೆಳೆಸುವಂತೆ ವಿದ್ಯಾರ್ಥಿನಿಗೆ ಬೇಡಿಕೆಯಿಟ್ಟ ಶಿಕ್ಷಕ..!
Twitter
Facebook
LinkedIn
WhatsApp
ವಾರಣಾಸಿ: ಪರೀಕ್ಷೆಯಲ್ಲಿ ಪಾಸ್ ಮಾಡಲು ದೈಹಿಕ ಸಂಬಂಧ ಬೆಳೆಸುವಂತೆ ವಿದ್ಯಾರ್ಥಿನಿಗೆ ಶಿಕ್ಷಕ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೌನ್‌ಪುರ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ವಿದ್ಯಾರ್ಥಿನಿಯನ್ನು ಪರಿಕ್ಷೆಯಲ್ಲಿ ಪಾಸ್ ಮಾಡುವುದಾಗಿ ಹಾಗೂ ಅದಕ್ಕಾಗಿ ಆಕೆ ತನ್ನ ಜತೆ ಲೈಂಗಿಕವಾಗಿ ಸಹಕರಿಸುವಂತೆ ಕೇಳಿದ್ದ. ವಿದ್ಯಾರ್ಥಿನಿಯು ಶಿಕ್ಷಕನ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿದ್ದು, ಆತನ ಕರಾಳಮುಖವನ್ನು ಬಹಿರಂಗಪಡಿಸಲು ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾಳೆ.
ಘಟನೆಯಿಂದ ಆಕ್ರೋಶಗೊಂಡಿರುವ ಇತರ ವಿದ್ಯಾರ್ಥಿಗಳು ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು, ವೈರಲ್ ಆಗಿರುವ ವಿಡಿಯೋ ಕುರಿತು ಬಾಲಕಿಯು ಯಾವುದೇ ದೂರು ನೀಡದಿದ್ದರೂ, ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.