ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾಗಿ 4.5 ಲಕ್ಷ ಕಳೆದುಕೊಂಡ ಮಹಿಳೆ!

Twitter
Facebook
LinkedIn
WhatsApp
277172758 532841501533636 7790018118631827681 n 3

ಬೆಂಗಳೂರು: ಬೆಂಗಳೂರಿನ(Bengaluru) ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ 37 ವರ್ಷದ ಮಹಿಳೆಯೊಬ್ಬರು(Woman) ಡೇಟಿಂಗ್ ಆಪ್‌ನಲ್ಲಿ ಪರಿಚಿತವಾಗಿದ್ದ ವ್ಯಕ್ತಿಯನ್ನು ನಂಬಿ 4.5 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಡೇಟಿಂಗ್ ಆಪ್‌ನಲ್ಲಿ (Dating App) ಪರಿಚಯವಾದ ವ್ಯಕ್ತಿಯೊಬ್ಬನನನ್ನು ನಂಬಿ 4.5 ಲಕ್ಷ ರೂ ಕೊಟ್ಟು, ಇದೀಗ ಮೋಸ ಹೋಗಿದ್ದಾಳೆ. ಇದೀಗ ಮೋಸ ಹೋದ ಮಹಿಳೆ ಹಣ ವಾಪಸ್ ಕೊಡಿಸುವಂತೆ ಬೆಂಗಳೂರು ಸಿಟಿ ಪೊಲೀಸರ(Bengaluru City Police) ಮೊರೆ ಹೋಗಿದ್ದಾಳೆ.

ಸುಮಾರು ಒಂದು ತಿಂಗಳ ಹಿಂದೆ ಟಿಂಡರ್‌ನಲ್ಲಿ ಅದ್ವಿಕ್ ಚೋಪ್ರಾ ಎಂಬ ಮುಂಬೈ ಮೂಲದ ವ್ಯಕ್ತಿಯೊಬ್ಬನ ಪರಿಚಯವಾಗುತ್ತದೆ. ಆತನ ಫೇಕ್ ಪ್ರೊಫೈಲ್‌ ನೋಡಿ, ಈ ಮಹಿಳೆ ಆಸಕ್ತಿ ತೋರಿಸಿದ್ದಾಳೆ. ಇಬ್ಬರ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. ವಾಟ್ಸಾಪ್‌ನಲ್ಲಿ ಮೆಸೇಜ್‌ಗಳು ವಿನಿಮಯವಾಗಿವೆ. ತಾನು ಲಂಡನ್‌ನಲ್ಲಿ ಮೆಡಿಕಲ್ ಓದುತ್ತಿದ್ದೇನೆ ಎಂದು ಆತ ಬಡಾಯಿ ಕೊಚ್ಚಿಕೊಂಡಿದ್ದಾನೆ. ಅದ್ವಿಕ್ ಚೋಪ್ರಾ ಮಾತಿಗೆ ಮರುಳಾದ ಮಹಿಳೆ, ಪ್ರೀತಿಯ ಜಾಲದಲ್ಲಿ ಬಿದ್ದಿದ್ದಾಳೆ.

ಹೀಗೆ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದ್ದು, ಮೇಲ್ನೋಟಕ್ಕೆ ಅದ್ವಿಕ್ ಚೋಪ್ರಾ ಆಕೆಯ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದ. ಅಲ್ಲದೇ ಆಕೆಯನ್ನು ಭೇಟಿ ಮಾಡುವ ಇಚ್ಚೆಯನ್ನೂ ವ್ಯಕ್ತಪಡಿಸಿ, ದುಬೈ ಮೂಲಕ ಬೆಂಗಳೂರಿಗೆ ಬರುವುದಾಗಿ ಹೇಳಿದ್ದ. ಇದಾದ ಕೆಲ ದಿನಗಳ ನಂತರ ಅನಾಮಧೇಯ ನಂಬರ್‌ನಿಂದ, ಏರ್‌ಪೋರ್ಟ್ ಅಧಿಕಾರಿಗಳು ಎಂದು ಹೇಳಿ, ಆ ಮಹಿಳೆಗೆ ಕರೆ ಬಂದಿದ್ದು, ಅದ್ವಿಕ್ ಚೋಪ್ರಾ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ. ಆದ್ರೆ, ಅವರ ಬಳಿ ಹಣವಿಲ್ಲ ಹಾಕಿ ಎಂದು ಹೇಳಿದ್ದಾರೆ. ಬಳಿಕ ಮಹಿಳೆ ಆತನ ನಂಬಿಕೆ ಮೇಲೆ ಹಣ ಹಾಕಿದ್ದಾಳೆ. ಬಳಿಕ ಮಹಿಳೆಗೆ ಅನುಮಾನ ಬಂದಿದ್ದು, ಕೂಡಲೇ ಚೋಪ್ರಾನನ್ನು ಸಂಪರ್ಕಿಸಲು ಪ್ರಯತ್ನಿಸಿದಾಳೆ. ಆದ್ರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟಿಂಡರ್‌ನಲ್ಲಿ ಪ್ರೊಫೈಲನ್ನು ಡಿಲೀಟ್ ಮಾಡಿದ್ದಾನೆ. ಟಿಂಡರ್ ಗ್ರಾಹಕ ಸೇವೆಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮಹಿಳೆ ಬೆಂಗಳೂರು ಸಿಟಿ ಪೊಲೀಸರ ಮೊರೆ ಹೋಗಿದ್ದಾಳೆ.

 

ಅದ್ವಿಕ್ ಚೋಪ್ರಾ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ. ಈಗ ಅವರ ಬಳಿ ಹಣವಿಲ್ಲ. ದೆಹಲಿಯಿಂದ ಬೆಂಗಳೂರಿಗೆ ಬರಲು 68,500 ರೂ ಅಗತ್ಯವಿದೆ. ಆ ನಂತರ 1.8 ಲಕ್ಷ ರೂ ಫೀ, 2.06 ಲಕ್ಷ ರೂ ಪ್ರೊಸೆಸಿಂಗ್ ಚಾರ್ಜ್ ಕೊಡಬೇಕು ಎಂದಿದ್ದಾರೆ. ಚೋಪ್ರಾ ಮೇಲೆ ನಂಬಿಕೆಯಿಟ್ಟು, ನಾನು ಕೂಡಲೇ ಹಣ ಕಳುಹಿಸಿದ್ದೇನೆ. ನನ್ನನ್ನು ನೋಡಲು ಚೋಪ್ರಾ ಲಂಡನ್‌ನಿಂದ ಬರುತ್ತಿದ್ದಾರೆ. ಅವರಿಗಾದ ತೊಂದರೆ ತಿಳಿದು ಬಹಳ ಬೇಸರವಾಯಿತು. ಕರೆ ಮಾಡಿದವರ ಬಗ್ಗೆ ಯೋಚಿಸಲೇ ಇಲ್ಲ. ಅವರ ಮಾತನ್ನು ಕುರುಡಾಗಿ ನಂಬಿದೆ. ಏರ್‌ಪೋರ್ಟ್‌ನಿಂದ ಸುರಕ್ಷಿತವಾಗಿ ಬರಲಿ, ಆದಷ್ಟು ಬೇಗ ಭೇಟಿಯಾಗಬಹುದು ಹಣ ಕಳುಹಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist