ಇಲಾಖೆಗಳಲ್ಲಿ ಖಾಲಿ ಹುದ್ದೆ ಭರ್ತಿಗೆ ಕ್ರಮ: ಡಿಕೆಶಿ
ಬೆಂಗಳೂರು: ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಶೀಘ್ರ ಭರ್ತಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರಕಾರದ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವುದಾಗಿ ಜನರಿಗೆ ಮಾತು ನೀಡಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಖಾಲಿ ಹುದ್ದೆಗಳಿಗೆ ಅರ್ಹರನ್ನು ಪಾರದರ್ಶಕವಾಗಿ ನೇಮಕ ಮಾಡಿ, ನಿರುದ್ಯೋಗ ಸಮಸ್ಯೆ ಬಗೆಹರಿಸುವುದು ನಮ್ಮ ಸರಕಾರದ ಆದ್ಯತೆಯಾಗಿದೆ. ಕೆಲವು ಶಾಸಕರು, ಬಿಜೆಪಿ ನಾಯಕರು ವಿದ್ಯುತ್ ಬಿಲ್ ಹಾಗೂ ಬಸ್ ಟಿಕೆಟ್ ಹಣ ಪಾವತಿಸಬೇಡಿ ಎಂಬ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಅವರು ಜನರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮೊದಲು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕಲಿ. 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಸೇರಿ ಬಿಜೆಪಿಯು ಅನೇಕ ಭರವಸೆಗಳನ್ನು ಪ್ರಣಾಳಿಕೆ ನೀಡಿತ್ತು. ಆದರೆ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದ ನಾವು ಬಸವಣ್ಣ ಹಾಗೂ ಕುವೆಂಪು ಅವರ ನಾಡಿನವರು. ಪಕ್ಷ ಕೊಟ್ಟ ಮಾತಿಗೆ ಬದ್ಧವಾಗಿದ್ದು, ನುಡಿದಂತೆ ನಡೆಯುತ್ತೇವೆ. ನಮ್ಮ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ನೆಟ್ಟಾರು ಅವರ ಪತ್ನಿ ಉದ್ಯೋಗ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ. ಬಿಜೆಪಿಯವರು ಆತುರದಿಂದ ರಾಜಕೀಯ ಮಾಡಲು ಬಯಸಿದರೆ ನಾವು ಸಮಾಜದ ಶಾಂತಿ, ಸೌಹಾರ್ದ ಹಾಗೂ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ಒಳಗೊಂಡು 34 ಮಂದಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪ್ರಕಟವಾಗಿದೆ. ಹಾಗಾದ್ರೆ, ಯಾರಿಗೆ ಯಾವ ಖಾತೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ
- ಸಿಎಂ ಸಿದ್ದರಾಮಯ್ಯ- ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆ
- ಡಿಸಿಎಂ ಡಿಕೆ ಶಿವಕುಮಾರ್- ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ
- ಡಾ. ಜಿ.ಪರಮೇಶ್ವರ್- ಗೃಹ
- ಹೆಚ್ ಕೆ ಪಾಟೀಲ್- ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ
- ಕೆ.ಹೆಚ್.ಮುನಿಯಪ್ಪ- ಆಹಾರ & ನಾಗರಿಕ ಸರಬರಾಜು ವ್ಯವಹಾರ
- ರಾಮಲಿಂಗರೆಡ್ಡಿ- ಸಾರಿಗೆ & ಮುಜರಾಯಿ
- ಎಂ.ಬಿ.ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಕೆ.ಜೆ.ಜಾರ್ಜ್- ಇಂಧನ
- ದಿನೇಶ್ ಗುಂಡೂರಾವ್: ಆರೋಗ್ಯ & ಕುಟುಂಬ ಕಲ್ಯಾಣ
- ಹೆಚ್ ಸಿ ಮಹದೇವಪ್ಪ: ಸಮಾಜಕಲ್ಯಾಣ
- ಸತೀಶ್ ಜಾರಕಿಹೊಳಿ- ಲೋಕೋಪಯೋಗಿ
- ಕೃಷ್ಣ ಬೈರೇಗೌಡ- ಕಂದಾಯ
- ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್
- ಶಿವಾನಂದ ಪಾಟೀಲ್-ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ
- ಜಮೀರ್ ಅಹಮದ್ ಖಾನ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳು
- ಶರಣುಬಸಪ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
- ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ ಖಾತೆ
- ಚಲುವರಾಯಸ್ವಾಮಿ- ಕೃಷಿ
- ಎಸ್.ಎಸ್.ಮಲ್ಲಿಕಾರ್ಜುನ- ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ
- ರಹೀ ಖಾನ್: ಪೌರಾಡಳಿತ, ಹಜ್ ಖಾತೆ
- ಸಂತೋಷ ಲಾಡ್- ಕಾರ್ಮಿಕ
- ಡಾ.ಶರಣುಪ್ರಕಾಶ್ ಪಾಟೀಲ್-ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ
- ಆರ್.ಬಿ.ತಿಮ್ಮಾಪುರ- ಅಬಕಾರಿ
- ಕೆ.ವೆಂಕಟೇಶ್- ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ
- ಶಿವರಾಜ್ ತಂಗಡಗಿ- ಹಿಂದುಳಿದ ವರ್ಗ , ಕನ್ನಡ ಮತ್ತು ಸಂಸ್ಕೃತಿ
- ಡಿ.ಸುಧಾಕರ್: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
- ಬಿ.ನಾಗೇಂದ್ರ: ಯುವಜನ ಸೇವೆ & ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ
- ಕೆ.ಎನ್.ರಾಜಣ್ಣ: ಸಹಕಾರ
- ಬೈರತಿ ಸುರೇಶ್- ನಗರಾಭಿವೃದ್ಧಿ, ಪಟ್ಟಣ ಯೋಜನೆ(ಬೆಂಗಳೂರು ಹೊರತು ಪಡಿಸಿ)
- ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ
- ಮಂಕಾಳ್ ವೈದ್ಯ- ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ
- ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
- ಡಾ.ಎಂ.ಸಿ.ಸುಧಾಕರ್- ಉನ್ನತ ಶಿಕ್ಷಣ
- ಎನ್,ಎಸ್.ಬೋಸರಾಜ್: ಸಣ್ಣ ನೀರಾವರಿ ಮತ್ತು ವಿಜ್ಞಾನ & ತಂತ್ರಜ್ಞಾನ