ವಿವಾಹಿತ ಮಹಿಳೆ ನಾಪತ್ತೆ -ದೂರು ದಾಖಲು
Twitter
Facebook
LinkedIn
WhatsApp
ಉಡುಪಿ, ಮೇ 26 : ಬಹ್ರೇನ್ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಶುಭ ಕೆ (38) ಎಂಬ ಮಹಿಳೆಯು ಜನವರಿ 3 ರಂದುವಿದೇಶದಿಂದ ಗಂಡನ ಮನೆಯಾದ ಉಡುಪಿ ಗೋಪಾಲಪುರದಲ್ಲಿರುವ ಮನೆಗೆ ಬಂದು, ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ ಎತ್ತರ, ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ, ಮರಾಠಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.
ಇನ್ನು ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.