ಬೈಕ್ ಸವಾರ ಓವರ್ ಟೇಕ್ ಮಾಡುವಾಗ ಆಕ್ಸಿಡೆಂಟ್; ಸ್ಥಳದಲ್ಲಿಯೇ ಸಾವು
Twitter
Facebook
LinkedIn
WhatsApp

ಶಿಕಾರಿಪುರ: ಬೈಕ್ ನಲ್ಲಿ ತೆರಳುವಾಗ ರಸ್ತೆ ಅಪಘಾತದಲ್ಲಿ ಹಾವೇರಿ ಜಿಲ್ಲೆ ಸವಣೂರು ತಾಲೂಕು ಹತ್ತಿಮತ್ತೂರು ಗ್ರಾಮದ ನಿವಾಸಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬರಗೊಪ್ಪ ಗ್ರಾಮದ ಬಳಿ ನಡೆದಿದೆ. ಹನುಮಂತಪ್ಪ ಮೃತ ಪಟ್ಟ ವ್ಯಕ್ತಿ.
ಅಂಬಾರಗೊಪ್ಪದ ಗ್ರಾಮ ಬಳಿ ಪ್ಯಾಸೆಂಜರ್ ವಾಹನವೊಂದು ಜನರನ್ನ ಇಳಿಸುತ್ತಿದ್ದ ವೇಳೆ ಹಿಂದಿನಿಂದ ಬೈಕ್ ನಲ್ಲಿ ಬಂದ ಹನುಮಂತಪ್ಪ ಬಲಭಾಗದಿಂದ ಬಂದು ಓವರ್ ಟೇಕ್ ಮಾಡಲು ಎತ್ತಿಸಿದ್ದಾನೆ. ಓವರ್ ಟೇಕ್ ಮಾಡುವ ವೇಳೆ ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದ್ದಾರೆ.
ತಲೆಗೆ ಹೊಡೆತಬಿದ್ದ ಹನುಮಂತಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.