ಶುಕ್ರವಾರ, ಮೇ 3, 2024
ಅಮೇಠಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅನಿಲ್‌ ಕುಂಬ್ಳೆ ದಾಖಲೆ ಸರಿಗಟ್ಟಿದ ಆಕಾಶ್ ಮಧ್ವಾಲ್‌!

Twitter
Facebook
LinkedIn
WhatsApp
ಅನಿಲ್‌ ಕುಂಬ್ಳೆ ದಾಖಲೆ ಸರಿಗಟ್ಟಿದ ಆಕಾಶ್ ಮಧ್ವಾಲ್‌!

ಬೆಂಗಳೂರು : ನಾಲ್ಕು ವರ್ಷಗಳ ಹಿಂದೆ ಟೆನಿಸ್‌ ಬಾಳ್‌ ಕ್ರಿಕೆಟ್‌ ಆಡುತ್ತಿದ್ದ ಉತ್ತರಾಖಂಡ್‌ ಮೂಲದ ಯುವ ಇಂಜಿನೀಯರ್‌ ಆಕಾಶ್‌ ಮಧ್ವಾಲ್‌ ಇಂದು ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್ ತಂಡದ ಚಾಂಪಿಯನ್‌ ಬೌಲರ್‌ ಆಗಿ ಹೊರಹೊಮ್ಮಿದ್ದಾರೆ. 2019ರಲ್ಲಿ ಮೊದಲ ಬಾರಿ ರೆಡ್‌ ಬಾಲ್‌ ಕ್ರಿಕೆಟ್‌ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದ ಆಕಾಶ್‌, ಮೊದಲ ಪ್ರಯತ್ನದಲ್ಲೇ ಉತ್ತರಾಖಂಡ್‌ ತಂಡದ ಅಂದಿನ ಕೋಚ್‌ ವಸೀಮ್‌ ಜಾಫರ್‌ ಅವರ ಗಮನ ಸೆಳೆದಿದ್ದರು.

ತಮ್ಮ 24ನೇ ವಯಸ್ಸಿನ ವರೆಗೂ ಲೆದರ್‌ ಬಾಲ್‌ ಕ್ರಿಕೆಟ್‌ನ ಗಂಧ ಗಾಳಿ ಅರಿಯದ ಆಟಾಗರ, ಇಂದು ಐಪಿಎಲ್‌ 2023 ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಎದುರು 5ಕ್ಕೆ 5 ವಿಕೆಟ್‌ ಪಡೆಯುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ತಮ್ಮ 3.3 ಓವರ್‌ಗಳಲ್ಲಿ ಕೇವಲ 5 ರನ್‌ ಕೊಟ್ಟ ಆಕಾಶ್‌, ಎಲ್‌ಎಸ್‌ಜಿ ತಂಡದ ದೈತ್ಯ ಬ್ಯಾಟರ್‌ಗಳನ್ನು ಬೇಟೆಯಾಡಿದರು.

Akash Madhwal 2

ಮುಂಬೈ ಇಂಡಿಯನ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆಕಾಶ್‌ ಮಧ್ವಾಲ್‌ 3.3 ಓವರ್‌ಗಳಲ್ಲಿ 5 ರನ್‌ ನೀಡಿ 5 ವಿಕೆಟ್‌ ಉಡೀಸ್‌ ಮಾಡಿದರು. ಈ ಮೂಲಕ ಅನಿಲ್‌ ಕುಂಬ್ಳೆ ದಾಖಲೆ ಸರಿಗಟ್ಟಿದರು. ಕೇಪ್‌ಟೌನ್‌ನಲ್ಲಿ ನಡೆದ 2009ರ ಐಪಿಎಲ್‌ ಆವೃತ್ತಿಯಲ್ಲಿ ಕುಂಬ್ಳೆ 3.1 ಓವರ್‌ಗಳಲ್ಲಿ 5 ರನ್‌ ನೀಡಿ 5 ವಿಕೆಟ್‌ ಪಡೆದಿದ್ದರು. ಇದೀಗ ಆಕಾಶ್‌ ಮಧ್ವಾಲ್‌ 3.3 ಓವರ್‌ಗಳಲ್ಲಿ 5 ರನ್‌ ನೀಡಿ 5 ವಿಕೆಟ್‌ ಪಡೆದಿದ್ದಾರೆ. ಚಿರ್ಸ್‌ ಜೋರ್ಡನ್‌ ಹಾಗೂ ಪಿಯೂಷ್‌ ಚಾವ್ಲಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರು ಹೆಚ್ಚಿನ ರನ್‌ ಕಲೆಹಾಕುವಲ್ಲಿ ವಿಫಲವಾದರೂ 3ನೇ ವಿಕೆಟ್‌ಗೆ ಕ್ಯಾಮರೂನ್‌ ಗ್ರೀನ್‌ ಹಾಗೂ ಸೂರ್ಯಕುಮಾರ್‌ ಜೋಡಿ 38 ಎಸೆತಗಳಲ್ಲಿ 66 ರನ್‌ ಬಾರಿಸಿತ್ತು. ಇವರಿಬ್ಬರ ಆಟದಿಂದ ಮುಂಬೈ ಮೊದಲ 10 ಓವರ್‌ಗಳಲ್ಲಿ 98 ರನ್‌ ಗಳಿಸಿತ್ತು. ಬಳಿಕ ಸೂರ್ಯ ಹಾಗೂ ಗ್ರೀನ್‌ ಔಟಾಗುತ್ತಿದ್ದಂತೆ ರನ್‌ ವೇಗ ಕಳೆದುಕೊಂಡ ಮುಂಬೈ ತಂಡ ಮುಂದಿನ 10 ಓವರ್‌ಗಳಲ್ಲಿ ಕೇವಲ 84 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಮುಂಬೈ ಪರ ಕ್ಯಾಮರೂನ್‌ ಗ್ರೀನ್‌ 41 ರನ್‌ (23 ಎಸತೆ, 6 ಬೌಂಡರಿ, 1 ಸಿಕ್ಸರ್), ಸೂರ್ಯಕುಮಾರ್‌ ಯಾದವ್‌ 33 ರನ್‌ (20 ಎಸೆತ, 2 ಬೌಂಡರಿ, 2 ಸಿಕ್ಸ್‌ರ್‌), ತಿಲಕ್‌ ವರ್ಮಾ 26 ರನ್‌, ನೇಹಾಲ್‌ ವಧೇರಾ 23 ರನ್‌, ರೋಹಿತ್‌ ಶರ್ಮಾ 11 ರನ್‌, ಇಶಾನ್‌ ಕಿಶನ್‌ 15 ರನ್‌ ಗಳಿಸಿದರು.

ರಿಷಭ್ ಪಂತ್‌ ಎದುರು ಮನೆ ಹುಡುಗ
ಟೀಮ್ ಇಂಡಿಯಾ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ಅವರ ಉತ್ತರಾಖಂಡ್‌ ನಿವಾಸದ ಎದುರು ಮನೆಯಲ್ಲೇ ಆಕಾಶ್‌ ಮಧ್ವಾಲ್‌ ಕೂಡ ಇದ್ದಾರೆ. ಆಕಾಶ್‌ ಅವರ ತಂಡೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, 2013ರಲ್ಲಿ ವೀರ ಮರಣ ಹೊಂದಿದ್ದಾರೆ. ಓದಿನಲ್ಲಿ ಬಹಳಾ ಮುಂದಿದ್ದ ಆಕಾಶ್‌ ಇಂಜಿನೀಯರಿಂಗ್ ಪದವಿ ಹೊಂದಿದ್ದಾರೆ. ಕ್ರಿಕೆಟ್‌ ಅನ್ನು ಕೇವಲ ಹವ್ಯಾಸವನ್ನಾಗಿ ತೆಗೆದುಕೊಂಡಿದ್ದ ಆಕಾಶ್ ಇಂದು ಚಾಂಪಿಯನ್‌ ಬೌಲರ್‌ ಆಗಿ ಗುರುತಿಸಿಕೊಂಡಿದ್ದಾರೆ. ಅಂದಹಾಗೆ ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲೂ ಭಾರಿ ಹೆಸರು ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ