ಕಬ್ಬಿಣದ ರಾಡ್ನಿಂದ ಹೊಡೆದು ಮಹಿಳೆಯ ಹತ್ಯೆ
Twitter
Facebook
LinkedIn
WhatsApp
ಕಬ್ಬಿಣದ ರಾಡ್ನಿಂದ ಹೊಡೆದು ಮಹಿಳೆಯ ಹತ್ಯೆ ಮಾಡಿರುವ ಘಟನೆ ಮೈಸೂರು(Mysore) ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ. ಪಾಂಡವಪುರ (Pandavapura) ತಾಲೂಕಿನ ಕೆರೆತೊಣ್ಣೂರು ಗ್ರಾಮದ ಮಮತಾ(32) ಕೊಲೆಯಾದ ರ್ದುದೈವಿ. ಸಿದ್ದಲಿಂಗಪುರದಲ್ಲಿ ಆರೋಪಿ ಹಾಸನ ಮೂಲದ ಮೋಹನ್ ಹಾಗೂ ಮಮತಾ ಇಬ್ಬರು ಒಟ್ಟಾಗಿ ಬೇಕರಿ ನಡೆಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಇನ್ನು ನಿನ್ನೆ(ಮೇ.24) ಸಂಜೆ ಇಬ್ಬರ ನಡುವೆ ಏಕಾಏಕಿ ಮಾತಿಗೆ ಮಾತು ಬೆಳೆದು ಕೊಲೆ ಮಮತಾಳನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮೇಟಗಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯಿಂದ ಕೊಲೆಗೆ ನಿಖರ ಕಾರಣ ತಿಳಿಯಲಿದೆ