ವಿದ್ಯುತ್ ಬಿಲ್ ಕೇಳಲು ಬಂದ ಲೈನ್‍ಮೆನ್ ಮೇಲೆ ಚಪ್ಪಲಿಯಿಂದ ಹಲ್ಲೆ - ವ್ಯಕ್ತಿಯ ಬಂಧನ
ಕೊಪ್ಪಳ: ಕರೆಂಟ್ ಬಿಲ್ (Electricity Bill) ಕೇಳಲು ಬಂದಿದ್ದ ಲೈನ್‍ಮೆನ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬಿಲ್ ಕೇಳಲು ಬಂದ ಲೈನ್ ಮೆನ್ ಮಂಜುನಾಥ್ (Lineman Manjunath) ಮೇಲೆ ಚಂದ್ರಶೇಖರಯ್ಯ ಹಲ್ಲೆ ಮಾಡಿದ್ದನು. ಇದೀಗ ಆರೋಪಿ ಚಂದ್ರಶೇಖರಯ್ಯನನ್ನು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ (Munirabad Police) ರು ಬಂಧಿಸಿದ್ದಾರೆ.
ಚಂದ್ರಶೇಖರಯ್ಯ ಕಳೆದ ಆರು ತಿಂಗಳಿಂದ ಅಂದಾಜು 9990 ಬಿಲ್ ಬಾಕಿ ಉಳಿಸಿಕೊಂಡಿದ್ದನು. ಹೀಗಾಗಿ ಜೆಸ್ಕಾಂ ಸಿಬ್ಬಂದಿ ಲೈನ್ ಕಟ್ ಮಾಡಿದ್ದರು. ಆದರೂ ಮತ್ತೆ ಅನಧಿಕೃತವಾಗಿ ಚಂದ್ರಶೇಖರಯ್ಯ ವಿದ್ಯುತ್ ಸಂರ್ಪಕ ಪಡೆದಿದ್ದನು. ಈ ಹಿನ್ನೆಲೆಯಲ್ಲಿ ಅಕ್ರಮ ವಿದ್ಯುತ್ ಸಂರ್ಪಕ ಪಡೆದಿದ್ದನ್ನೇ ಪ್ರಶ್ನಿಸೋಕೆ ಬಂದಾಗ ಹಲ್ಲೆ ಮಾಡಿದ್ದಾನೆ. ಹೀಗಾಗೆ ಚಂದ್ರಶೇಖರಯ್ಯ ಅವರನ್ನ ಅರೆಸ್ಟ್ ಮಾಡಿದ್ದೆವೆ. ಮುಂದೆ ಕಾನೂನು ಕ್ರಮ ಕೈಗೊಳ್ತೆವೆ ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದ್ದಾರೆ.
ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ 200 ಯುನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಈ ಬೆನ್ನಲ್ಲೇ ಜನ ನಾವು ಕರೆಂಟ್ ಬಿಲ್ ಕಟ್ಟಲ್ಲವೆಂದು ಹಠಕ್ಕೆ ಬಿದ್ದಿದ್ದಾರೆ.