ಬೆಂಗಳೂರು: 5 ವರ್ಷ ಸಿದ್ದರಾಮಯ್ಯ(Siddaramaiah) ಸಿಎಂ ಎಂಬ ಎಂ.ಬಿ ಪಾಟೀಲ್ (M.B.Patil) ಅವರ ಹೇಳಿಕೆಗೆ ಸಂಸದ ಡಿಕೆ ಸುರೇಶ್ (D.K.Suresh) ಆಕ್ರೋಶ ವ್ಯಕ್ತಪಡಿಸಿದ್ದು, ನೇರ ಎಚ್ಚರಿಕೆ ನೀಡಿದ್ದಾರೆ.
5 ವರ್ಷ ಸಿದ್ದರಾಮಯ್ಯ ಸಿಎಂ ಹೇಳಿಕೆ: ಎಂ.ಬಿ ಪಾಟೀಲ್‌ಗೆ ನೇರ ಎಚ್ಚರಿಕೆ ಕೊಟ್ಟ ಡಿಕೆ ಸುರೇಶ್!
Twitter
Facebook
LinkedIn
WhatsApp
ಸಿದ್ದರಾಮಯ್ಯ ಪೂರ್ಣಾವಧಿಯ ಸಿಎಂ ಎಂದು ಎಂ.ಬಿ.ಪಾಟೀಲ್ ಹೇಳಿಕೆಯೊಂದನ್ನು ನೀಡಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಅವರು, ನಾನು ಎಂ.ಬಿ.ಪಾಟೀಲ್ ಹೇಳಿಕೆಗೆ ಉತ್ತರ ಕೊಡಬಲ್ಲೆ. ಆದರೆ ಅದು ಈಗ ಬೇಡ ಎಂದು ಕಿಡಿಕಾರಿದರು.
ಎಂ.ಬಿ.ಪಾಟೀಲ್ ಹೇಳಿಕೆಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಸುರ್ಜೇವಾಲಾ ಅವರ ಹತ್ತಿರ ಮಾತನಾಡಿ. ನಾನು ಅವರ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ ಕೊಡಬಲ್ಲೆ. ಆದರೆ ಈಗ ಅದು ಬೇಡ. ನನಗೂ ಎಂ.ಬಿ.ಪಾಟೀಲ್ ಹೇಳಿಕೆಗೆ ಉತ್ತರ ನೀಡಲು ಬರುತ್ತದೆ ಎಂದು ಖಡಕ್ ಆಗಿ ಹೇಳಿದ್ದಾರೆ.