ಏನೇ ಆದ್ರು RCB ನನ್ನ ಫೇವರಿಟ್, ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತೆ- ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಭಾನುವಾರ ನಡೆದ ಗುಜರಾತ್ ಟೈಟಾನ್ಸ್ (GT) ಹಾಗೂ ಆರ್ಸಿಬಿ (RCB) ನಡುವಿನ ಪಂದ್ಯವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ವೀಕ್ಷಣೆ ಮಾಡಿದರು.
ಇತ್ತೀಚೆಗೆ ರಾಜ್ಯದ ನೂತನ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಡಿಕೆಶಿ, ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆಯೂ ಪುತ್ರಿ ಐಶ್ವರ್ಯ ಜೊತೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಐಪಿಎಲ್ (IPL 2023) ಪಂದ್ಯ ವೀಕ್ಷಿಸಿದರು. ಈ ಸಂತಸವನ್ನು ಟ್ವೀಟ್ನಲ್ಲಿ ಹಂಚಿಕೊಂಡಿರುವ ಅವರು, ಆರ್ಸಿಬಿ ತಂಡಕ್ಕೆ ಅಭಯ ನೀಡಿದ್ದಾರೆ.
ನಮ್ಮ ಹುಡುಗರು ಈ ಸಾರಿ ಸೋತಿರಬಹುದು, ಆದರೆ ಅತ್ಯುತ್ತಮ ಆಟದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಏನೇ ಆದ್ರು ನನ್ನ ಫೇವ್ರೆಟ್ ಆರ್ಸಿಬಿ, ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತೆ. ನಿರಾಸೆ ಬೇಡ, ಆಶಾವಾದವಿರಲಿ ಎಂದು ಧೈರ್ಯತುಂಬಿದ್ದಾರೆ.
ಭಾನುವಾರದ ನಡೆದ ಹೈವೋಲ್ಟೇಜ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಚಚ್ಚಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್ ಟೈಟಾನ್ಸ್ 19.1 ಓವರ್ನಲ್ಲಿ 198 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.
ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಂತರ
— DK Shivakumar (@DKShivakumar) May 22, 2023
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ #IPL ಪಂದ್ಯ ವೀಕ್ಷಿಸಿದೆ.
ನಮ್ಮ ಹುಡುಗರು ಈ ಸಾರಿ ಸೋತಿರಬಹುದು, ಆದರೆ ಅತ್ಯುತ್ತಮ ಆಟದಿಂದ ಎಲ್ಲರ ಹೃದಯ ಗೆದ್ದಿದ್ದಾರೆ.
ಏನೇ ಆದ್ರು ನನ್ನ ಫೇವರಿಟ್ #RCB
ಕಪ್ ನಮ್ಮದಾಗುವ ಸಮಯ ಬಂದೇ… pic.twitter.com/WvqzXCLhdH