ಶುಕ್ರವಾರ, ಮೇ 10, 2024
ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕನಸನ್ನು ಬೆನ್ನಟ್ಟಲು ಲಿಂಕ್ಡ್​ಇನ್​ನಲ್ಲಿ ಕೆಲಸ ಬಿಟ್ಟ ಯುವತಿ ಆಕಾಂಕ್ಷಾ ಮೊಂಗಾ

Twitter
Facebook
LinkedIn
WhatsApp
pexels elijah odonnell 3473569 1

ಜೀವಿಸುವುದಕ್ಕೊಂದು ಕೆಲಸವನ್ನು ಹೇಗೋ ಹುಡುಕೊಳ್ಳಬಹುದು. ಆದರೆ ಬದುಕುವುದಕ್ಕಾಗಿ ಕನಸು ಬಹಳ ಮುಖ್ಯ. ಹಾಗೆಂದು ಕನಸು ಕಂಡವರೆಲ್ಲರೂ ನನಸನ್ನಾಗಿಸಿಕೊಳ್ಳುತ್ತಾರೆ ಎಂದು ಹೇಳಲಾಗದು. ಕೆಲವೇ ಕೆಲವರಿಗೆ ಇದು ಸಾಧ್ಯವಾಗುತ್ತದೆ. ಇದೀಗ ವೈರಲ್ ಆಗಿರುವ ಈ ಲಿಂಕ್ಡ್​ಇನ್​  ಪೋಸ್ಟ್ ಗಮನಿಸಿ. ದೆಹಲಿ ಮೂಲದ ಯುವತಿಯೊಬ್ಬಳು ತನ್ನ ಕನಸಿಗಾಗಿ ಒಂದು ವರ್ಷದ ಹಿಂದೆ ಕೆಲಸವನ್ನು ತೊರೆದಳು. ಮುಂದೇನಾಯಿತೆಂದು ಓದಿ.

ಪ್ರತಿಯೊಬ್ಬರೂ ತಮ್ಮ ಆಸಕ್ತಿಗೆ ಅನುಗುಣವಾಗಿ ಉತ್ಸಾಹದಿಂದ ಕೆಲಸ ಮಾಡಲು ಬಯಸುತ್ತಾರೆ. ಆ ಪ್ರಕಾರ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ತಮ್ಮ ಆಯ್ಕೆಯಲ್ಲಿ ಸಮರ್ಥವಾಗಿ ಕೆಲಸ ಮಾಡಿ ಯಶಸ್ಸು ಗಳಿಸಬಹುದು ಎಂಬ ವಿಶ್ವಾಸ ಅವರಿಗಿರುತ್ತದೆ. ಆಕಾಂಕ್ಷಾ ಮೊಂಗಾ ಎಂಬ ಕಂಟೆಂಟ್​ ಕ್ರಿಯೇಟರ್ ಲಿಂಕ್ಡ್​ಇನ್​ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ  2022ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ‘ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಕೆಲಸವನ್ನು ಬಿಟ್ಟಿದ್ದೆ. ನನ್ನ ಹಂಬಲವನ್ನು ಆಗುಮಾಡಿಕೊಳ್ಳುವುದಕ್ಕೋಸ್ಕರ ಜಗತ್ತನ್ನು ಪೂರ್ಣ ಮನಸ್ಸು ಕೊಟ್ಟು ಪ್ರಯಾಣಿಸಬೇಕೆಂದು ನಿರ್ಧರಿಸಿದ್ದೆ. ಅದು ಸಾಧ್ಯವಾಯಿತು’ ಎಂದಿದ್ದಾರೆ.

ಆರುಜನರ ತಂಡವನ್ನು ಕಟ್ಟಿಕೊಂಡು ಈತನಕ 12 ದೇಶಗಳಲ್ಲಿ ಈಕೆ ಪ್ರಯಾಣಿಸಿದ್ದಾರೆ. 300ಕ್ಕೂ ಹೆಚ್ಚು ವಿಡಿಯೋ ಕಂಟೆಂಟ್​ ಸೃಷ್ಟಿಸಿದ್ದಾರೆ. ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಇವರು ಸಾಮಾಜಿಕ ಜಾಲತಾಣದಲ್ಲಿ 2,50,000 ಫಾಲೋವರ್​ಗಳನ್ನು ಹೊಂದಿದ್ದಾರೆ. ಈಗ ವೈರಲ್ ಆಗಿರುವ ಈ ಪೋಸ್ಟ್​ ಅನ್ನು ಸುಮಾರು 2 ಲಕ್ಷಕ್ಕಿಂತ ಹೆಚ್ಚು ಜನರು ನೋಡಿದ್ದಾರೆ. ನೆಟ್ಟಿಗರು ಈಕೆಯ ಪೋಸ್ಟ್​ನಿಂದ ಪ್ರಭಾವಿತರಾಗಿದ್ದಾರೆ.

ನಿಮಗೆ ಖುಷಿ ಕೊಡುವುದನ್ನೇ ನೀವು ವೃತ್ತಿಯಾಗಿಸಿಕೊಳ್ಳಿ. ಆಗ ನಿಮ್ಮ ಜೀವನ ಇನ್ನೂ ಎತ್ತರಕ್ಕೇರುತ್ತದೆ ಎಂದು ಅಭಿನಂದಿಸಿದ್ದಾರೆ ಅನೇಕರು. ನೀವು ನಿಮ್ಮ ಪ್ರಯಾಣದ ವೆಚ್ಚವನ್ನು ಹೇಗೆ ನಿರ್ವಹಿಸಿದಿರಿ ಎಂದು ಕೇಳಿದ್ದಾರೆ ಕೆಲವರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ