ಪ್ರಧಾನಿ ಮೋದಿ ಆರು ದಿನ ವಿದೇಶ ಪ್ರವಾಸ
Twitter
Facebook
LinkedIn
WhatsApp
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ ಆರು ದಿನಗಳ ಕಾಲ ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಅವಧಿಯಲ್ಲಿ ಅವರು ನಲುವತ್ತಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಮೇ 19ರಿಂದ 21ರ ವರೆಗೆ ಜಪಾನ್ ನ ಹಿರೋಶಿಮಾದಲ್ಲಿ ನಡೆಯಲಿರುವ ಜಿ7 ರಾಷ್ಟ್ರಗಳ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅನಂತರ 22ರಂದು ಅವರು ಪಪುವಾ ನ್ಯೂಗಿನಿಯಾಗೆ ತೆರಳಿ ಇಲ್ಲಿ ಇಂಡಿಯಾ ಪೆಸಿಫಿಕ್ ದ್ವೀಪಗಳ ಸಹಕಾರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರನೇ ಹಂತದಲ್ಲಿ ಮೇ 23ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.