ಜೇಬಿನಲ್ಲಿದ್ದಾಗಲೇ ಮೊಬೈಲ್ ಸ್ಫೋಟ: 76ರ ವೃದ್ಧ ಅಪಾಯದಿಂದ ಪಾರು!
ತ್ರಿಶ್ಶೂರು: ಕೇರಳದ ತ್ರಿಶ್ಶೂರು ಸನಿಹ 76 ವರ್ಷದ ವೃದ್ಧನೊಬ್ಬನ ಮೊಬೈಲ್, ಆತನ ಅಂಗಿಯ ಜೇಬಿನಲ್ಲೇ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಆತ ಅಪಾಯದಿಂದ ಪಾರಾಗಿದ್ದಾನೆ. ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಹೋಟೆಲ್ನಲ್ಲಿ ಕುಳಿತು ಚಹಾ ಸೇವಿಸುತ್ತಿದ್ದ. ಆಗ ಜೇಬಿನಲ್ಲಿದ್ದ ಮೊಬೈಲ್ ಸಿಡಿದಿದೆ. ಬಳಿಕ ತಕ್ಷಣ ಅದನ್ನು ಕೆಳಗೆ ಎಸೆದಿದ್ದಾನೆ. ಎಸೆದ ತಕ್ಷಣ ಅದು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ವ್ಯಕ್ತಿಯ ಸಮಯ ಪ್ರಜ್ಞೆಯಿಂದಾಗಿ ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಈ ರೀತಿಯ ಮೊಬೈಲ್ ಸ್ಫೋಟ ಘಟನೆ ಮೂರನೇ ಬಾರಿ ನಡೆದಿದ್ದು, ಕಳೆದ ವಾರ ಕಲ್ಲಿಕೋಟೆಯಲ್ಲಿ ಹಾಗೂ ಏ.24ರಂದು ತ್ರಿಶ್ಶೂರ್ನಲ್ಲಿ ಮೊಬೈಲ್ ಸ್ಫೋಟಕ್ಕೆ ಮಗು ಬಲಿಯಾಗಿತ್ತು.
ಇಲಿಯಾಸ್ ಅಪಾಯದಿಂದ ಪಾರಾದ ವ್ಯಕ್ತಿ. ಗುರುವಾರ ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದ್ದು, ಇಲಿಯಾಸ್ (Iliyas) ಮರೋಟ್ಟಿಚಾಲ್ ಪ್ರದೇಶದ ಚಹಾ ಅಂಗಡಿಯಲ್ಲಿ ಕುರ್ಚಿಯ ಮೇಲೆ ಕುಳಿತು ಚಹಾ ಸೇವಿಸುತ್ತಿದ್ದಾಗ ಘಟನೆ ನಡೆದಿದೆ. ಕೂಡಲೇ ಚಹಾ ಅಂಗಡಿಯವರು ಕೂಡ ಆತನ ನೆರವಿಗೆ ಬಂದಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ವೀಡಿಯೊದಲ್ಲಿ ಕಾಣಿಸುವಂತೆ ವೃದ್ಧರೊಬ್ಬರು ಚೇರ್ನಲ್ಲಿ ಕುಳಿತು ಚಹಾ (Tea) ಸೇವಿಸುತ್ತಿದ್ದು, ಇದ್ದಕ್ಕಿದ್ದಂತೆ ಅವರ ಜೇಬಿನಲ್ಲಿದ್ದ ಮೊಬೈಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅವರು ಮೊಬೈಲ್ ಅನ್ನು ಕೆಳಕ್ಕೆಸೆದಿದ್ದಾರೆ. ಅಷ್ಟರಲ್ಲೇ ಅದು ಸ್ಪೋಟಿಸಿದೆ.
Another #phoneblast incident ?
— Soul (@Sanxyyyyy) May 18, 2023
Location: Thrissur, Kerala pic.twitter.com/ixTNdxwAJN
ಘಟನೆಗೆ ಸಂಬಂಧಿಸಿದಂತೆ ಒಲ್ಲೂರು ಪೊಲೀಸ್ ಅಧಿಕಾರಿ (Police Officer) ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕೇಳಲು ವೃದ್ಧನನ್ನು ಪೊಲೀಸ್ ಠಾಣೆಗೆ ಕರೆಸಿದ್ದೆವು. ಆತ ನೀಡಿದ ಮಾಹಿತಿಯಿಂತೆ ಈ ಫೋನ್ ಅನ್ನು ವರ್ಷದ ಹಿಂದೆ 1000 ರೂ ನೀಡಿ ಆತ ಖರೀದಿಸಿದ್ದ, ಇದೊಂದು ಸಾಮಾನ್ಯ ಫೀಚರ್ಗಳಿರುವ ಫೋನ್ ಆಗಿದ್ದು, ಇಲ್ಲಿಯವರೆಗೆ ಈ ಮೊಬೈಲ್ನಲ್ಲಿ ಯಾವುದೇ ದ್ವೇಷ ಕಂಡು ಬಂದಿರಲಿಲ್ಲ ಎಂದು ಹೇಳಿದ್ದಾಗಿ ಮಾಹಿತಿ ನೀಡಿದರು. ಇತ್ತ ಮೊಬೈಲ್ ಸ್ಫೋಟದಿಂದ ಆತ ಪಾರಾಗಿದ್ದರು ಕೆಲ ಸುಟ್ಟ ಗಾಯಗಳಾಗಿವೆ.