ನ್ಯಾಯಬೆಲೆ ಅಂಗಡಿಯಿಂದ ತಂದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ!
Twitter
Facebook
LinkedIn
WhatsApp

ತುಮಕೂರು: ಜಿಲ್ಲೆಯ ವಿದ್ಯಾನಗರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ(plastic rice)ಸಿಕ್ಕಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಮನೆಯಲ್ಲಿ ಅಕ್ಕಿ ಕ್ಲಿನ್ ಮಾಡುವಾಗ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಬಗ್ಗೆ ಮಹಿಳೆಯರು ಆರೋಪಿಸಿದ್ದು, ಇದರಿಂದ ಆತಂಕಗೊಂಡಿದ್ದಾರೆ.
ನ್ಯಾಯ ಬೆಲೆ ಅಂಗಡಿಯಿಂದ ತಂದಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಕ್ಸ್ ಆಗಿದಿಯಾ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಇಂತಹ ಘಟನೆ ಇದೇ ಮೊದಲಲ್ಲ, ತುಂಬಾ ಸಲ ಬೆಳಕಿಗೆ ಬಂದಿದೆ.
ಆದರೂ ಕೂಡ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ಆತಂಕ್ಕೀಡು ಮಾಡಿದೆ. ಪಡಿತರ ಅಕ್ಕಿ ವಿತರಣೆಗೂ ಮುನ್ನ ಒಮ್ಮೆ ಪರಿಶೀಲಿಸುವ ಅವಶ್ಯಕತೆಯಿದೆ.