ಈಜಲು ಹೋಗಿದ್ದ ಅಣ್ಣ-ತಮ್ಮ ನದಿ ಪಾಲು
ರಾಯಚೂರು: ಈಜಲು ಹೋಗಿದ್ದ ಅಣ್ಣ ಮತ್ತು ತಮ್ಮ ಇಬ್ಬರು ನದಿ ಪಾಲಾದ ಘಟನೆ ರಾಯಚೂರು (Raichur) ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಡೆಸುಗೂರು ಗ್ರಾಮದಲ್ಲಿ ನಡೆದಿದೆ. ಮುದಿಯಪ್ಪ ಎಂಬವರ ಪುತ್ರರಾದ ಅಮರ್ (18) ಹಾಗೂ ಮಲ್ಲಿಕಾರ್ಜುನ (16) ಮೃತಪಟ್ಟವರು. ಹೆಚ್ಚಿನ ತಾಪಮಾನ ಹಿನ್ನೆಲೆ ಇಂದು ಮದ್ಯಾಹ್ನ ದಡೆಸುಗೂರು ಬಳಿಯ ತುಂಗಭದ್ರಾ ನದಿಯಲ್ಲಿ ಈಜಲು ಅಮತ್ ಮತ್ತು ಮಲ್ಲಿಕಾರ್ಜನ ತೆರಳಿದ್ದರು. ಈ ವೇಳೆ ಕೆಸರಿನಲ್ಲಿ ಸಿಲುಕಿಕೊಂಡು ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗದಗದಲ್ಲಿ ಅಪಘಾತ: ಮೂವರ ದುರ್ಮರಣ
ಗದಗ: ಎರಡು ದ್ವಿಚಕ್ರ ವಾಹನಗಳಿಗೆ ಕಾರು ಡಿಕ್ಕಿಯಾಗಿ (Gadag Accident) ಮೂವರು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ನಡೆದಿದೆ. ಶಿಂಗಟಾರಯನಕೇರಿ ತಾಂಡಾ ನಿವಾಸಿ ಶಿವಪ್ಪ ನಾಯ್ಕ್ (50), ಛಬ್ಬಿ ತಾಂಡಾ ನಿವಾಸಿ ಶಿವಾನಂದ ಲಮಾಣಿ (33), ಡೋಣಿ ತಾಂಡಾ ನಿವಾಸಿ ಕೃಷ್ಣಪ್ಪ ಚೌಹಾಣ್ (31) ಸಾವನ್ನಪ್ಪಿದವರು. ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಿಂದ ಹೊರಬಂದ ಚಾಲಕ ಪರಾರಿಯಾಗಿದ್ದಾನೆ.
ಅಪಘಾತ ಸ್ಥಳದಲ್ಲಿ ಮೃತಪಟ್ಟವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗದಗ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಡೋಣಿ ತಾಂಡಾ, ಛಬ್ಬಿ ತಾಂಡಾ ಹಾಗೂ ಸಿಂಗಟರಾಯನಕೇರ ತಾಂಡಾದವರಾಗಿದ್ದಾರೆ.