ಗುರುವಾರ, ಮಾರ್ಚ್ 13, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಟೆಂಟ್ ನಲ್ಲಿ ಬದುಕು ಕಟ್ಟಿ , ತಂದೆಯೊಂದಿಗೆ ಪಾನಿಪುರಿ ಮಾರಾಟಮಾಡಿ ಐಪಿಎಲ್ ಗೆ ಎಂಟ್ರಿ ಕೊಟ್ಟ ಶತಕವೀರ ಜೈಸ್ವಾಲ್!

Twitter
Facebook
LinkedIn
WhatsApp
WhatsApp Image 2023 05 12 at 10.28.22 AM

ಮುಂಬೈ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ದಿನಕ್ಕೊಬ್ಬರು ಸ್ಟಾರ್‌ಗಳು ಹುಟ್ಟಿಕೊಳ್ಳುತ್ತಾರೆ. ಆದರೆ ಯಶಸ್ವಿ ಜೈಸ್ವಾಲ್ ಎನ್ನುವ  ಅಪ್ಪಟ ಪ್ರತಿಭೆಗಳು ಕ್ರಿಕೆಟ್‌ ಜಗತ್ತಿನಲ್ಲಿ ಬೆಳೆದು ನಿಂತ  ಕಥೆ ತಿಳಿದರೆ ಎಂತಹವರಿಗೂ ಸ್ಪೂರ್ತಿಯಾಗಬಲ್ಲದು. ಮುಂಬೈ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ದಿನಕ್ಕೊಬ್ಬರು ಸ್ಟಾರ್‌ಗಳು ಹುಟ್ಟಿಕೊಳ್ಳುತ್ತಾರೆ. ಆದರೆ ಯಶಸ್ವಿ ಜೈಸ್ವಾಲ್ ಎನ್ನುವ ಅಪ್ಪಟ ಪ್ರತಿಭೆಗಳು ಕ್ರಿಕೆಟ್‌ ಜಗತ್ತಿನಲ್ಲಿ ಬೆಳೆದು ನಿಂತ ಕಥೆ ತಿಳಿದರೆ ಎಂತಹವರಿಗೂ ಸ್ಪೂರ್ತಿಯಾಗಬಲ್ಲದು. 

ಉತ್ತರ ಪ್ರದೇಶದ ತೀರಾ ಕಡುಬಡತನದ ಕುಟುಂಬದಲ್ಲಿ ಜನಿಸಿದ ಯಶಸ್ವಿ ಜೈಸ್ವಾಲ್, ಇಂದು ಕ್ರಿಕೆಟ್ ಅಭಿಮಾನಿಗಳ ಮನೆಮಾತಾಗಿದ್ದಾರೆ. ಎಂತಹ ಸ್ಟೋರಿ. ಎಂತಹ ಅದ್ಭುತ ಪ್ರತಿಭೆ. ಯಶಸ್ವಿ ಜೈಸ್ವಾಲ್ ಸೂಪರ್ ಸ್ಟಾರ್ ಆಗುವತ್ತ ಸಾಗುತ್ತಿದ್ದಾರೆ ಎಂದು ಐಪಿಎಲ್‌ ಮಾಜಿ  ಕೋಚ್ ಟಾಮ್ ಮೂಡಿ ಟ್ವೀಟ್ ಮಾಡಿ ಎಡಗೈ  ಬ್ಯಾಟರ್ ಗುಣಗಾನ ಮಾಡಿದ್ದಾರೆ.

ಕ್ರಿಕೆಟ್‌ನಲ್ಲಿ ಏನನ್ನಾದರೂ ಸಾಧಿಸಲೇ ಬೇಕು ಎನ್ನುವ ಛಲದಿಂದ ಯಶಸ್ವಿ ಜೈಸ್ವಾಲ್‌, ಪೋಷಕರನ್ನು ಬಿಟ್ಟು ಉತ್ತರಪ್ರದೇಶದಿಂದ ವಾಣಿಜ್ಯನಗರಿ ಮುಂಬೈಗೆ ಬಂದರು. ಆಗ ಯಶಸ್ವಿ ವಯಸ್ಸು 11 ವರ್ಷ.

ಈ ಕುರಿತಂತೆ 2020ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶಸ್ವಿ, ಮೊದಲಿಗೆ ನಾನು ಮುಂಬೈನ ಡೈರಿಯಲ್ಲಿ ಮಲಗುತ್ತಿದ್ದೆ. ಇದಾದ ಬಳಿಕ ನಮ್ಮ ಅಂಕಲ್ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ, ಅವರೂ ನೀನು ಇರಲು ಬೇರೆ ಜಾಗ ಹುಡುಕಿಕೋ ಎಂದರು ಎಂದು ಎಎಫ್‌ಪಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದಾದ ಬಳಿಕ ನಾನು ಮುಂಬೈ ಸ್ಪೋರ್ಟ್ಸ್‌ ಗ್ರೌಂಡ್ ಸಮೀಪದಲ್ಲಿರುವ ಆಝಾದ್‌ ಮೈದಾನದ ಬಳಿಯೇ ಟೆಂಟ್‌ನಲ್ಲಿ ಉಳಿದುಕೊಂಡಿದ್ದೆ. ಹಗಲು ಹೊತ್ತಿನಲ್ಲಿ ನಾನಲ್ಲಿಯೇ ಕ್ರಿಕೆಟ್ ಆಡುತ್ತಿದ್ದೆ ಎಂದು ಜೈಸ್ವಾಲ್ ಹೇಳಿದ್ದರು.ಮುಂಬೈನ ಪ್ರಸಿದ್ದ ರಸ್ತೆಯೊಂದರಲ್ಲಿ ರಾತ್ರಿ ವೇಳೆಗೆ ಪಾನಿಪೂರಿ ಮಾರುತ್ತಿದ್ದೆ. ಅದರಲ್ಲಿ ಬಂದ ಹಣವನ್ನು ನನ್ನ ಊಟದ ವ್ಯವಸ್ಥೆಗೆ ಬಳಸಿಕೊಳ್ಳುತ್ತಿದ್ದೆ ಎಂದು ಯಶಸ್ವಿ ಆ ದಿನಗಳನ್ನು ಮೆಲುಕು ಹಾಕಿದ್ದರು.

ಇದಾದ ಬಳಿಕ ಯಶಸ್ವಿ ಜೈಸ್ವಾಲ್, ಕೋಚ್ ಜ್ವಾಲಾ ಸಿಂಗ್ ಅವರ ಕಣ್ಣಿಗೆ ಬಿದ್ದರು. ಜ್ವಾಲಾ ರಾಜ್ಯಮಟ್ಟದ ಆಟಗಾರರಾಗಿದ್ದರು. ನನಗಿಂತ ಚಿಕ್ಕವನಾದ ಯಶಸ್ವಿ ಆಟವನ್ನು ಗಮನಿಸಿದ ಬಳಿಕ ಕ್ರಿಕೆಟ್‌ ಜರ್ನಿ ಮುಂದುವರೆಸಲು ದೇವರು ನನಗೆ ಇನ್ನೊಂದು ಅವಕಾಶ ನೀಡಿದ ಎಂದು ಭಾವಿಸಿದೆ ಎಂದು ಜ್ವಾಲಾ ಸಿಂಗ್ ಹೇಳಿದ್ದರು.

ನಿರಂತರ ಪರಿಶ್ರಮದ ಬಳಿಕ 2019ರಲ್ಲಿ ಮುಂಬೈ ತಂಡದಲ್ಲಿ ಸ್ಥಾನ ಪಡೆದ ಯಶಸ್ವಿ ಜೈಸ್ವಾಲ್ ಆ ಬಳಿಕ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ಇನ್ನು ಇದೇ ವರ್ಷ ರಾಜಸ್ಥಾನ ರಾಯಲ್ಸ್‌ ತೆಕ್ಕೆಗೆ ಜೈಸ್ವಾಲ್ ಸೇರಿಕೊಂಡರು.

ಇನ್ನು  2020ರಲ್ಲಿ ಅಂಡರ್ 19 ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಭಾರತ ಪರ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಎನಿಸಿದರು. ಇದಾದ ಬಳಿಕ 2020ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist