ಕಾಸರಗೋಡು: ಕಾರು -ಸ್ಕೂಟರ್ ನಡುವೆ ಅಪಘಾತ: ಬಾಲಕ ಸಾವು
Twitter
Facebook
LinkedIn
WhatsApp
ಕಾಸರಗೋಡು, ಮೇ 11 : ಕಾರು ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ.
ಚೇರೂರಿನ ಅಬ್ದುಲ್ ರಹಮಾನ್ ರವರ ಪುತ್ರ ಅಬ್ದುಲ್ ರಹಮಾನ್ ರವರ ಪುತ್ರ ಮುಹಮ್ಮದ್ ರಫಾಲ್ (16) ಮೃತಪಟ್ಟವನು.
ಈತ ಚಿನ್ಮಯ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಏಪ್ರಿಲ್ 30 ರಂದು ನೀರ್ಚಾಲು ಕನ್ಯಾಪ್ಪಾಡಿಯಲ್ಲಿ ಅಪಘಾತ ನಡೆದಿತ್ತು. ಗಾಯಗೊಂಡ ವಿದ್ಯಾರ್ಥಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮಧ್ಯಾಹ್ನ ಮೃತಪಟ್ಟನು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.