ಕುಡಿದ ಮತ್ತಿನಲ್ಲಿ ಗೂಳಿ ಮೇಲೆ ಸವಾರಿ ಮಾಡಿದ ಯುವಕ ; ಅರೆಸ್ಟ್
ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗುವುದಕ್ಕಾಗಿ ಕೆಲ ಯುವಕರು ಇಲ್ಲ ಸಲ್ಲದ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಯುವಕನೊಬ್ಬ ಪ್ರಚಾರಕ್ಕಾಗಿ ಗೂಳಿ ಮೇಲೆ ಸವಾರಿ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಉತ್ತರಾಖಂಡದ ರಿಷಿಕೇಶದ ತಪೋವನ ಎಂಬ ನಗರದಲ್ಲಿ ಮಧ್ಯರಾತ್ರಿ ಪಾನಮತ್ತನಾಗಿದ್ದ ಯುವಕನೊಬ್ಬ ಗೂಳಿಯೊಂದರ ಮೇಲೇರಿ ಸವಾರಿ ನಡೆಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ, ಪ್ರಾಣಿದಯಾ ಸಂಘಗಳಿಂದ ಟೀಕೆಗೂ ಗುರಿಯಾಗಿತ್ತು.
05 मई की देर रात्रि तपोवन ऋषिकेश में नशे में युवक के सांड के ऊपर सवार होने संबंधी सोशल मीडिया पर प्रसारित वीडियो का संज्ञान लेते हुए युवक के विरुद्व वैधानिक कार्यवाही करते हुए युवक को चेतावनी दी गयी कि पशुओं के साथ भविष्य में इस प्रकार दुर्व्यवहार न करें। pic.twitter.com/VrSxRdhqJX
— Uttarakhand Police (@uttarakhandcops) May 8, 2023
ಇದರ ಬೆನ್ನಲ್ಲೇ ರಿಷಿಕೇಶ ಪೊಲೀಸರು ಈ ಬಗ್ಗೆ ಕ್ರಮ ಜರುಗಿಸಿದ್ದು ಬಳಿಕ ಯುವಕನಿಗೆ ತಾನು ಮಾಡಿದ ತಪ್ಪಿನ ಅರಿವಾಗಿದ್ದು ಕ್ಷಮೆಯಾಚಿಸಿದ್ದಾನೆ. ಮತ್ತೂಮ್ಮೆ ಇಂಥ ದುಸ್ಸಾಹಸಕ್ಕೆ ಕೈಹಾಕದಂತೆ ಯುವಕನಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.