ಕೆಜಿಗೆ 50 ರೂ.ಗಿಂತ ಕಡಿಮೆಯಿರುವ ಸೇಬು ಆಮದು ನಿಷೇಧ – ಕೇಂದ್ರ ಸರ್ಕಾರ
Twitter
Facebook
LinkedIn
WhatsApp

ನವದೆಹಲಿ: ಪ್ರತಿ ಕೆಜಿಗೆ 50 ರೂ.ಗಿಂತಲೂ ಕಡಿಮೆಯಿರುವ ಸೇಬು ಹಣ್ಣನ್ನು (Apples) ಆಮದು ಮಾಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ (Central Government) ನಿಷೇಧಿಸಿದೆ.
ಪ್ರತಿ ಕೆಜಿಗೆ 50ಕ್ಕಿಂತ ಹೆಚ್ಚಿದ್ದರೆ ಆಮದು (Imports) ಮಾಡಬಹುದು ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಸಿಐಎಫ್ (ವೆಚ್ಚ, ವಿಮೆ, ಸರಕು ಸಾಗಣೆ) ಆಮದು ಬೆಲೆ (Price) ಪ್ರತಿ ಕೆಜಿಗೆ 50ಕ್ಕಿಂತಲೂ ಕಡಿಮೆ ಇದ್ದರೆ ಸೇಬುಗಳ ಆಮದನ್ನು ನಿಷೇಧಿಸಲಾಗಿದೆ ಎಂದು ಡಿಜಿಎಫ್ಟಿ ಅಧಿಸೂಚನೆಯಲ್ಲಿ ತಿಳಿಸಿದೆ.
ಭೂತಾನ್ನಿಂದ ಆಮದು ಮಾಡುಕೊಳ್ಳುತ್ತಿರುವ ಸೇಬುಹಣ್ಣುಗಳಿಗೆ ಕನಿಷ್ಠ ಆಮದು ಬೆಲೆಯ ಷರತ್ತು ಅನ್ವಯಿಸುವುದಿಲ್ಲ ಎಂದು ಹೇಳಿದೆ. ಯುಎಸ್, ಇರಾನ್, ಬ್ರೆಜಿಲ್, ಯುಎಇ, ಅಫ್ಘಾನಿಸ್ತಾನ, ಫ್ರಾನ್ಸ್, ಬೆಲ್ಜಿಯಂ, ಚಿಲಿ, ಇಟಲಿ, ಟರ್ಕಿ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪೋಲೆಂಡ್ ದಕ್ಷಿಣ ಆಫ್ರಿಕಾ ದೇಶವು ಭಾರತಕ್ಕೆ ಸೇಬು ರಫ್ತು ಮಾಡುತ್ತವೆ.