ಕುದುರೆ ಸವಾರಿ ವೇಳೆ ಅವಘಡ; ಜನಪ್ರಿಯ ಮಾಡೆಲ್ ನಿಧನ
ಆಸ್ಟ್ರೇಲಿಯಾ ಮಾಡೆಲ್, 2022ರ ಮಿಸ್ ಯೂನಿವರ್ಸ್ (Miss Universe) ಫೈನಲಿಸ್ಟ್ ಸಿಯನ್ನಾ ವಿಯರ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 23 ವರ್ಷ ವಯಸ್ಸಾಗಿತ್ತು. ಕುದುರೆ ಸವಾರಿ ಮಾಡುವಾಗ ಉಂಟಾದ ಅವಘಡದಲ್ಲಿ ಅವರಿಗೆ ತೀವ್ರ ಗಾಯಗಳಾಗಿತ್ತು. ಸಿಯನ್ನಾ ವಿಯರ್ (Sienna Weir) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಬದುಕಿ ಬಾಳಬೇಕಿದ್ದ ಮಾಡೆಲ್ ಈ ರೀತಿ ಸಣ್ಣ ವಯಸ್ಸಿನಲ್ಲೇ ನಿಧನ ಹೊಂದಿದ್ದು ನಿಜಕ್ಕೂ ದುಃಖದ ವಿಚಾರ.
ಮಾಧ್ಯಮಗಳ ವರದಿ ಪ್ರಕಾರ, ಸಿಯನ್ನಾ ವಿಯರ್ ಅವರು ಏಪ್ರಿಲ್ 2ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಗ್ರೌಂಡ್ನಲ್ಲಿ ಹಾರ್ಸ್ರೈಡ್ ಮಾಡುತ್ತಿದ್ದರು. ಈ ವೇಳೆ ಕುದುರೆ ಕುಸಿದು ಬಿದ್ದಿದೆ. ಈ ವೇಳೆ ಸಿಯನ್ನಾ ವಿಯರ್ ತಲೆ ಭಾಗಕ್ಕೆ ಗಾಯ ಉಂಟಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಒಂದು ತಿಂಗಳಿಂದ ಅವರನ್ನು ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಕುಟುಂಬದವರು ಒಪ್ಪಿಗೆ ಕೊಟ್ಟ ಬಳಿಕ ವೈದ್ಯರು ಮೇ 4ರಂದು ಲೈಫ್ ಸಪೋರ್ಟ್ ತೆಗೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಿಯನ್ನಾ ವಿಯರ್ ಅವರ ಫೋಟೋನ ಹಂಚಿಕೊಳ್ಳಲಾಗಿದೆ. ‘ನಮ್ಮ ಹೃದಯದಲ್ಲಿ ನೀವು ಸದಾ ಇರುತ್ತೀರಿ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಿಯನ್ನಾ ವಿಯರ್ ಅವರ ಫೋಟೋನ ಹಂಚಿಕೊಳ್ಳಲಾಗಿದೆ. ‘ನಮ್ಮ ಹೃದಯದಲ್ಲಿ ನೀವು ಸದಾ ಇರುತ್ತೀರಿ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸಿಯನ್ನಾ ವಿಯರ್ ಅವರಿಗೆ ಹಾರ್ಸ್ ರೈಡಿಂಗ್ ಬಗ್ಗೆ ವಿಶೇಷ ಪ್ರೀತಿ ಇತ್ತು. ಸಮಯ ಸಿಕ್ಕಾಗಲೆಲ್ಲ ಅವರು ಕುದುರೆ ಸವಾರಿ ಮಾಡುತ್ತಿದ್ದರು. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ‘ನಾನು ನಗರದಲ್ಲಿ ವಾಸಿಸುತ್ತಿದ್ದೇ. ಆದರೆ ನನಗೆ ಕುದರೆ ಓಡಿಸುವ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಈ ಪ್ಯಾಷನ್ ಎಲ್ಲಿಂದ ಬಂತು ಗೊತ್ತಿಲ್ಲ. ನಾನು 3ನೇ ವಯಸ್ಸಿನಿಂದಲೂ ಕುದುರೆ ಸವಾರಿ ಮಾಡುತ್ತಿದ್ದೇನೆ. ಅದು ಇಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಪ್ರತಿ ವಾರಾಂತ್ಯದಲ್ಲಿ ಹಾರ್ಸ್ ರೈಡಿಂಗ್ ತರಬೇತಿ ನೀಡುತ್ತೇನೆ ಮತ್ತು ಕುದುರೆ ಸವಾರಿ ಮಾಡುತ್ತೇನೆ’ ಎಂದು ಅವರು ಹೇಳಿದ್ದರು. ಈಗ ಕುದುರೆ ಸವಾರಿಯೇ ಅವರ ಜೀವನಕ್ಕೆ ಕುತ್ತು ತಂದಿದೆ.