ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಪ್ರಜೆ 'ಒಂದೇ ಮದುವೆ' ಎರಡೇ ಮಗು, ಕಾಯ್ದೆ ಜಾರಿ - ಯತ್ನಾಳ್
Twitter
Facebook
LinkedIn
WhatsApp
ಕೂಡ್ಲಿಗಿ(ಏ.29): ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಪ್ರಜೆ ಒಂದೇ ಮದುವೆಯಾಗಬೇಕು. ಎರಡೇ ಮಕ್ಕಳನ್ನು ಹೆರಬೇಕು ಎನ್ನುವ ಕಾನೂನು ತರಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಶುಕ್ರವಾರ ತಾಲೂಕಿನ ಹೊಸಹಳ್ಳಿ ಹೋಬಳಿ ಕೇಂದ್ರದ ಮುಖ್ಯರಸ್ತೆಯಲ್ಲಿ ಬಿಜೆಪಿ ಅಭ್ಯರ್ಥಿ ಲೊಕೇಶ್ ನಾಯಕ್ ಪರ ನಡೆದ ರೋಡ್ ಶೋ ವೇಳೆ ಮಾತನಾಡಿ, ಬೇಕಾಬಿಟ್ಟಿಮಕ್ಕಳನ್ನು ಹೆತ್ತು ದೇಶದ ಸೌಲಭ್ಯ ಪಡೆದುಕೊಂಡು ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುವರಿಗೆ ಪಾಠ ಕಲಿಸಬೇಕು ಎಂದರು.
ರಾಜ್ಯದಲ್ಲಿ ಐದು ದಶಕಗಳ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಾಮಾಜಿಕ ನ್ಯಾಯ ನೀಡದೆ ವಂಚನೆ ಮಾಡಿದೆ. ಬಿಜೆಪಿ ಮಾತ್ರ ಸಾಮಾಜಿಕ ನ್ಯಾಯದ ಪ್ರಕಾರ ಮೀಸಲಾತಿ ಹೆಚ್ಚಳ ಮಾಡಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿಯ ಮೋದಿ ಆಡಳಿತದ ಸರ್ಕಾರ ಅಧಿಕಾರದಲ್ಲಿದ್ದು, ಇಡೀ ಭಾರತವೇ ಭಯೋತ್ಪಾದನೆ ಯಿಂದ ಮುಕ್ತವಾಗಿ ನೆಮ್ಮದಿ ಯಿಂದ ಜನರು ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಮತ ನೀಡಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದರು.