ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರು ಪಾರ್ಕಿಂಗ್​ಗೆ ವಿನೂತನ ಯೋಜನೆ ಜಾರಿ

Twitter
Facebook
LinkedIn
WhatsApp
mcms 10

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mangaluru international airport) ಹೊಸ ಹೊಸ ಬದಲಾವಣೆಗಳಾಗುತ್ತಿವೆ. ತನ್ನ ಪ್ರಯಾಣಿಕರಿಗೆ ಹೆಚ್ಚಿನ ಸವಲತ್ತು ನೀಡಲು ಹೆಚ್ಚಿನ ಆಧ್ಯತೆಯನ್ನು ಕೊಡಲಾಗುತ್ತಿದೆ. ಆತ್ಮೀಯರು ಮತ್ತು ಸಂಬಂಧಿಕರನ್ನು ಕರೆದೊಯ್ಯುವುದಕ್ಕೆಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವವರಿಗೆ ಶೀಘ್ರದಲ್ಲೇ ವಿಮಾನ ನಿಲ್ದಾಣದ ಟರ್ಮಿನಲ್‌ ಪ್ರವೇಶಿಸಲು ಅವಕಾಶ ದೊರೆಯಲಿದೆ ಎಂದು ಕೆಲ ದಿನಗಳ ಹಿಂದಷ್ಟೇ ತಿಳಿಸಲಾಗಿತ್ತು. ಈಗ ಮತ್ತೆ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅನುಕೂಲವಾಗಲೆಂದೇ ಫಾಸ್ಟ್ ಟ್ಯಾಗ್ ಕಾರ್ ಪಾರ್ಕಿಂಗ್ ಸೌಲಭ್ಯ ಮಾಡಲಾಗುತ್ತಿದೆ(FASTag Car Parking). ಸದ್ಯ ಈಗ ತನ್ನ ಸ್ವಯಂಚಾಲಿತ ಕಾರ್ ಪಾರ್ಕಿಂಗ್ ವ್ಯವಸ್ಥೆಗೆ ಮತ್ತೊಂದು ಸೌಲಭ್ಯವನ್ನು ಸೇರಿಸಲಾಗಿದೆ. ಮಂಗಳವಾರದಿಂದ(ಏಪ್ರಿಲ್ 17) ಫಾಸ್ಟ್ ಟ್ಯಾಗ್ ಕಾರ್ ಪಾರ್ಕಿಂಗ್ ಸೇವೆಗೆ ಚಾಲನೆ ನೀಡಲಾಗಿದೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಸ್ವಯಂಚಾಲಿತ ಕಾರ್ ಪಾರ್ಕಿಂಗ್ ವ್ಯವಸ್ಥೆಯ ಜೊತೆಗೆ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನೂ ಜಾರಿ ಮಾಡಲಾಗಿದೆ. ಈ ಮೂಲಕ ಪ್ರಯಾಣಿಕರು, ತಮ್ಮವರನ್ನು ಬಿಡಲು ಬರುವವರು, ಹಾಗೂ ತಮ್ಮವರನ್ನು ಅದ್ಧೂರಿ ಸ್ವಾಗತ ಮಾಡಿ ಕರೆದುಕೊಂಡು ಹೋಗಲು ಬರುವವರು ತಮ್ಮ ವಾಹನಗಳನ್ನು ಗೊತ್ತುಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬಹುದು. ಇದಕ್ಕೆ ಕಡಿಮೆ ಸಮಯ ತಗುಲುತ್ತದೆ. ಇದರಿಂದ ಕಾರ್ ಪಾರ್ಕ್ ಮಾಡುವವರಿಗೆ ಸಮಯ ಉಳಿಯುತ್ತದೆ. ಫಾಸ್ಟ್ ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ.

ತ್ವರಿತ ಚಲನೆಗೆ ಅನುಕೂಲವಾಗುವಂತೆ, ಫಾಸ್ಟ್ ಟ್ಯಾಗ್ ಆಯ್ಕೆಯನ್ನು ಬಳಸುವ ಪ್ರಯಾಣಿಕರಿಗಾಗಿ ವಿಮಾನ ನಿಲ್ದಾಣವು ಪ್ರವೇಶ (ಎರಡನೇ ಲೇನ್) ಮತ್ತು ನಿರ್ಗಮನ (ಮೂರನೇ ಲೇನ್) ನಲ್ಲಿ ಪ್ರತಿ ಲೇನ್ ಅನ್ನು ನಿಗದಿಪಡಿಸಿದೆ ಎಂದು MIA ವಕ್ತಾರರು ತಿಳಿಸಿದ್ದಾರೆ. ಇದರೊಂದಿಗೆ, ವಾಹನಗಳ ಚಲನೆಯು ವೇಗವಾಗಿರುತ್ತದೆ ಮತ್ತು ವಿಮಾನ ನಿಲ್ದಾಣವನ್ನು ಪ್ರವೇಶಿಸಲು / ನಿರ್ಗಮಿಸಲು ಕಾಯುತ್ತಿರುವ ಪ್ರಯಾಣಿಕರಿಗೆ ಸಮಯ ಉಳಿಯುತ್ತೆ. ಹೀಗಾಗಿ ಇದು ಸಮಯ ಮತ್ತು ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ.

ಫಾಸ್ಟ್ ಟ್ಯಾಗ್​ನ ಮುಖ್ಯ ಪ್ರಯೋಜನವೆಂದರೆ ಅದು ನಗದು ವಹಿವಾಟಿನ ಅಗತ್ಯವನ್ನು ನಿವಾರಿಸುತ್ತದೆ. ಇದು ಎಲ್ಲರಿಗೂ ತ್ವರಿತ ಪಾರ್ಕಿಂಗ್ ಆಯ್ಕೆಗಳನ್ನು ನೀಡುತ್ತದೆ. ಪಾರ್ಕಿಂಗ್ ರಶೀದಿಗಾಗಿ ಕಾಯುವುದು ಅಥವಾ ಪ್ರವೇಶ ಅಥವಾ ನಿರ್ಗಮನದಲ್ಲಿ ನಗದು/ಕ್ರೆಡಿಟ್ ಪಾವತಿಗಳನ್ನು ಮಾಡುವಂತಹ ಸಮಸ್ಯೆಗಳು ಇರುವುದಿಲ್ಲ. ಫಾಸ್ಟ್ ಟ್ಯಾಗ್​ಗೆ ರಿಚಾರ್ಜ್ ಮಾಡಿಸಿದ್ದರೆ ಸಾಕು ಹಣ ಅದಾಗಿಯೇ ಕಟ್ ಆಗುತ್ತೆ. ಮೊಬೈಲ್​ಗೆ ಮೆಸೇಜ್ ಬರುತ್ತೆ. ಸಾಮಾನ್ಯ ಹೆದ್ದಾರಿಗಳಿಗೆ ಫಾಸ್ಟ್ ಟ್ಯಾಗ್ ಮೂಲಕ ಹೇಗೆ ಟೋಲ್ ದರ ಕಟ್ಟಾಗುವುದೋ ಅದೇ ರೀತಿ ಇದು ಕೂಡ ಕೆಲಸ ಮಾಡುತ್ತೆ. ಫಾಸ್ಟ್‌ಟ್ಯಾಗ್ ಹೊಂದಿರುವ ಪ್ರಯಾಣಿಕರು ತಡೆರಹಿತ ಪ್ರವೇಶ, ನಿರ್ಗಮನ ಮಾಡಬಹುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist