ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನೀವು ಉದ್ದಾರ ಆಗಲ್ಲ, ಮದುವೆ ಆಗುತ್ತಾ ಅಂದಿದ್ರು; ರಾಘವೇಂದ್ರ ಹುಣಸೂರು ವಿರುದ್ಧ ರಿಷಿಕಾ ಶಾಕಿಂಗ್ ಹೇಳಿಕೆ

Twitter
Facebook
LinkedIn
WhatsApp
examdp 1678422373 1

ಸ್ಯಾಂಡಲ್‌ವುಡ್ ನಟಿ, ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ಬಣ್ಣದ ಲೋಕಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುವ ತಯಾರಿಯಲ್ಲಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಭೀಕರ ರಸ್ತೆ ಅಪಘಾತದಿಂದ ಬೆನ್ನು ಮೂಳೆ ಮುರಿದುಕೊಂಡಿದ್ದ ರಿಷಿಕಾ ಎದ್ದು ನಡೆಯುವ ಸ್ಥಿತಿಯಲ್ಲಿ ಇರಲಿಲ್ಲ. ಆದರೀಗ ಚೇತರಿಸಿಕೊಳ್ಳುತ್ತಿರುವ ರಿಷಿಕಾ ಬಹುತೇಕ ಗುಣಮುಖರಾಗಿದ್ದಾರೆ. ಮತ್ತೆ ಆಕ್ಟೀವ್ ಆಗಿದ್ದಾರೆ. ಮೊದಲಿನ ಹಾಗೆ ಬಣ್ಣದ ಲೋಕದಲ್ಲಿ ಸಕ್ರೀಯವಾಗುವ ಕನಸುಕಂಡಿದ್ದಾರೆ. ರಿಷಿಕಾ ಸದ್ಯ ಅನೇಕ ವಾಹಿನಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಸೈಕಲ್ ಗ್ಯಾಪ್ ಎನ್ನುವ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಿಕಾ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಮದುವೆ ಮುರಿದು ಬಿದ್ದ ಬಗ್ಗೆ, ಬಿಗ್ ಬಾಸ್ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಝೀ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣುಸೂರು ಬಗ್ಗೆ ಶಾಕಿಂಗ್ ಕೇಳಿಕೆ ನೀಡಿದ್ದಾರೆ. 

ಸಂದರ್ಶನದಲ್ಲಿ ಮಾತನಾಡಿದ ರಿಷಿಕಾ, ‘ಬಿಗ್ ಬಾಸ್ ಗೆ ಕರೆ ಮಾಡಿದ್ದರು. ಆಗ ನಾನು ಮದುವೆ ಆಗೋಕೆ ನಿರ್ಧರಿಸಿದ್ದೆ. ಅದೇ ಸಮದಲ್ಲಿ ಬಿಗ್ ಬಾಸ್‌ಗೆ ಆಫರ್ ಬಂತು. ಆಗ ರಾಘವೇಂದ್ರ ಹುಣಸುರು ಅವರನ್ನು ಭೇಟಿಯಾದೆ. ಈಗ ಅವರಿಗೆ ಸಿಕ್ಕಾಪಟ್ಟೆ ಗಾಂಚಲಿ ಬಂದಿದೆ. ಉದ್ದಾರ ಅಂತು ಆಗಲ್ಲ. ಸದ್ಯದಲ್ಲೇ ನಾನು ನಿಮ್ಮನ್ನು ನೋಡ್ತೀರಿ. ಈಗ ಶತ್ರು ಹಾಗೆ ಆಡ್ತಿದ್ದೀರಾ. ಆದರೂ ಫ್ರೆಂಡ್ ಅನ್ಕೊಂತಿನಿ. ನಾವು ಕಾಫಿ ಡೇಯಲ್ಲಿ ಮೀಟ್ ಆದ್ವಿ’ ಎಂದು ರಿಷಿಕಾ ಹೇಳಿದ್ದಾರೆ.  

rishika singh 3

‘ಬಿಗ್ ಬಾಸ್‌ಗೆ ಆಫರ್ ಮಾಡಿದಾಗ  ನಾನು ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದೆ. ಆಗ ಅವರು ತಕ್ಷಣ ಮದುವೆ ಆಗುತ್ತಾ ಅಂತ ಕೇಳಿದ್ರು. ಬೆಳಗ್ಗೆಯೇ ಏನು ಹಾಕಿದ್ಯಾ ಏನು ಅಂತ ಕೇಳಿದೆ ನಾನು. ಕುಡಿಯಲ್ಲ ಅಂತ ಗೊತ್ತು ತಾನೆ ಅಂತ ಹೇಳ್ದ. ಬಿಗ್ ಬಾಸ್‌ಗೆ ದೊಡ್ಡ ಮೊತ್ತದ ಹಣ ಆಫರ್ ಮಾಡಿದ್ರು. ಸ್ಪರ್ಧಿಯಾಗಿ ಹೋಗು. ವಿನ್ನಿಂಗ್ ಸ್ಪರ್ಧಿ ಆಗುವ ಎಲ್ಲಾ ಸಾಧ್ಯತೆ ಇದೆ, ನಾನು ಟ್ರೈನ್ ಮಾಡುತ್ತೀನಿ ಎಂದು ಹೇಳಿದ. ಆದರೆ ನಾನು ಮದುವೆ ಫಿಕ್ಸ್ ಆಗಿದೆ ಅಂತ ಹೇಳ್ದೆ. ಮತ್ತೆ ನೆಗೆಟಿವ್ ಆಗಿ ಪ್ರತಿಕ್ರಿಯೆ ನೀಡಿದ್ರು. ಮದುವೆ ಆಗುತ್ತಾ ಎಂದು ಕೇಳಿದ. ಆಗ ನನಗೆ ತುಂಬಾ ಭಯ ಆಯ್ತು. ಮದುವೆ ಆಗುತ್ತೀನಿ ಅಂತ ಹೇಳಿದಾಗ ನೆಗೆಟಿವ್ ಆಗಿ ಕಾಮೆಂಟ್ ಮಾಡಬಾರದು’ ಎಂದು ರಿಷಿಕಾ ಹೇಳಿದ್ದಾರೆ. 

f3429e9f12a9e07db7ef7a3c8b96ecd4

ಮದುವೆ ಮುರಿದ ಬಗ್ಗೆ ರಿಷಿಕಾ ಮಾತು
 
‘ಸಂದೀಪ್ ಜೊತೆ ಮದುವೆ ಫಿಕ್ಸ್ ಆಗಿತ್ತು. ಅವರು ಮೂಲತಃ ಕೇರಳದವರು. ನನ್ನ ಅಣ್ಣ ಮೂಲಕ ಪರಿಚಯ ಆಗಿದ್ದು. ಇಷ್ಟ ಆಯ್ತು ಮದುವೆ ಆಗುವ ನಿರ್ಧಾರ ಮಾಡಿದ್ವಿ ಆದರೆ ಆ ಸಮಯದಲ್ಲಿ ನನ್ನ ಕೆರಿಯರ್‌ ಚೆನ್ನಾಗಿದೆ ಎಂದು ಸಂದೀಪ್‌ಗೆ ಅನಿಸಿತ್ತು ಏಕೆಂದರೆ ನನ್ನ ಶೂಟಿಂಗ್ ಸೆಟ್‌ ಎಲ್ಲಾ ಭೇಟಿ ನೀಡುತ್ತಿದ್ದರು. ಬಣ್ಣದ ಪ್ರಪಂಚಕ್ಕೆ ಬ್ರೇಕ್ ಹಾಕಿ ಅವರನ್ನು ಆಯ್ಕೆ ಮಾಡಿಕೊಂಡೆ ಆದರೆ ಅವರ ಮನಸ್ಸು ತುಂಬಾ ದೊಡ್ಡದು ಹೀಗಾಗಿ ಅವರು ತಾಯಿ ಹೇಳಿದಂತೆ ಬೇಡ ಫ್ರೆಂಡ್ಸ್‌ ಆಗಿರಿ, ಕೆಲಸ ಮಾಡಿ ಎನ್ನುತ್ತಿದ್ದರು. ಮದ್ವೆ ಆಗಿದ್ರೆ ಇಷ್ಟರಲ್ಲಿ ಎರಡು ಮಕ್ಕಳು ಇರುತ್ತಿದ್ದರು. ನಟನೆ ಅನ್ನೋದು ದೇವರು ನಮಗೆ ಕೊಟ್ಟಿರುವ ಭಿಕ್ಷೆ’ ಎಂದಿದ್ದಾರೆ. 

‘ಮದುವೆ ಶಾಪಿಂಗ್ ಅಗಿತ್ತು, ಪತ್ರಿಕೆ ಕೂಡ ಪ್ರಿಂಟ್ ಆಗಿತ್ತು ಎಲ್ಲಾ ರೆಡಿಯಾಗಿತ್ತು ಆಗ ಮದುವೆ ಬೇಡ ಅನ್ನೋ ನಿರ್ಧಾರ ಮಾಡಿದೆವು. ಏಕೆಂದರೆ ನಾನು ಕ್ರ್ಯಾಕ್. ಪ್ರೀತಿಸುವವರು ಎಲ್ಲರೂ ಕ್ರ್ಯಾಕ್‌ಗಳೇ. ಬೇಗ ಮದುವೆ ಆಗುತ್ತೀದ್ದೀವಿ ಅನ್ನೋ ಭಾವನೆ ಇಬ್ಬರಿಗೂ ಬಂದಿತ್ತು. ನಾನು ತುಂಬಾ ಇಂಡಿಪೆಂಡೆಂಟ್ ಆಗಿದ್ದೆ. ಅವರ ತಾಯಿ ಕೂಡ ತುಂಬಾ ಇಂಡಿಪೆಂಡೆಂಟ್. ಹಾಗಾಗಿ ನನ್ನಲ್ಲಿ ಆ ಗುಣ ಇಷ್ಟ ಪಟ್ಟಿದ್ದರು. ಆದರೆ ಇಬ್ಬರೂ ಬ್ರೇಕಪ್ ಮಾಡಿಕೊಂಡೆವು’ ಎಂದು ರಿಷಿಕಾ ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.  

14470532 2117192511839524 1986143676268040937 n

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist