ಬಾಲಕನ ಜೊತೆ ವಿವಾದಾತ್ಮಕ ವಿಡಿಯೋ; ಬಾರಿ ಟೀಕೆಯ ಬಳಿಕ ಕ್ಷಮೆಯಾಚಿಸಿದ ದಲೈಲಾಮ
ನವದೆಹಲಿ: ತನ್ನ ನಾಲಿಗೆಯನ್ನು ನೆಕ್ಕುವಂತೆ ಅಪ್ರಾಪ್ತ ಬಾಲಕನಿಗೆ (Boy) ಸೂಚಿಸಿ ಭಾರೀ ಟೀಕೆಗೆ ಒಳಗಾದ ಟಿಬೆಟಿಯನ್ ಆಧ್ಯಾತ್ಮ ನಾಯಕ ದಲೈ ಲಾಮಾ (Dalai Lama) ಇದೀಗ ಬಾಲಕ ಹಾಗೂ ಆತನ ಕುಟುಂಬದ ಬಳಿ ಕ್ಷಮೆ (Apology) ಕೇಳಿದ್ದಾರೆ.
ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು, ನೆಕ್ಕುವಂತೆ ಸೂಚಿಸಿದ್ದರು. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಭಾರೀ ಟೀಗೆಗೆ ಒಳಗಾಗಿದ್ದರು. ಇದೀಗ ಬೌದ್ಧ ಧರ್ಮ ಗುರು ತನ್ನ ವರ್ತನೆ ಹಾಗೂ ಮಾತುಗಳಿಂದ ಬಾಲಕ ಹಾಗೂ ಆತನ ಕುಟುಂಬಕ್ಕೆ ನೋವಾಗಿರಬಹುದು ಎಂದು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ವೀಡಿಯೋದಲ್ಲೇನಿದೆ?
ಅಪ್ರಾಪ್ತ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ. ಬಳಿಕ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ಭಾರೀ ಟೀಕೆಗೆ ದಲೈ ಲಾಮಾ ಗುರಿಯಾಗಿದ್ದಾರೆ.
ತನ್ನ ವಿವಾದಿತ ವರ್ತನೆ ಬಗ್ಗೆ ತಿಳಿಸಿದ ದಲೈ ಲಾಮಾ, ನಾನು ಭೇಟಿಯಾಗುವ ಜನ ಹಾಗೂ ಮಕ್ಕಳೊಂದಿಗೆ ಮುಗ್ಧ ರೀತಿಯಲ್ಲಿ ಮತ್ತು ತಮಾಷೆಗಾಗಿ ಈ ರೀತಿ ವರ್ತಿಸುತ್ತೇನೆ. ಆದರೆ ನನ್ನ ವರ್ತನೆಗೆ ಬಾಲಕ ಹಾಗೂ ಆತನ ಕುಟುಂಬಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.