ಶನಿವಾರ, ಮಾರ್ಚ್ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಐಪಿಎಲ್​ನಲ್ಲಿಂದು ಡಬಲ್ ಧಮಾಕ: ರೋಚಕತೆ ಸೃಷ್ಟಿಸಿದ ಮುಂಬೈ-ಚೆನ್ನೈ ನಡುವಣ ಕಾದಾಟ

Twitter
Facebook
LinkedIn
WhatsApp
2022812175033560 FV19B HacAEtU26 1

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿಂದು (IPL 2023) ಎರಡು ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ ಗುವಾಹಟಿಯ ಬರ್ಸಾಪುರ ಸ್ಟೇಡಿಯಂನಲ್ಲಿ ಶುರುವಾಗಲಿರುವ ಮೊದಲ ಮ್ಯಾಚ್​ನಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ (RR vs DC) ಅನ್ನು ಎದುರಿಸಲಿದೆ. ಸಂಜೆ 7:30ಕ್ಕೆ ಶುರುವಾಗಲಿರುವ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ (MI vs CSK) ಮುಖಾಮುಖಿ ಆಗಲಿದೆ. ಇದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ಪಂದ್ಯಗಳು ಸಾಕಷ್ಟು ಕುತೂಹಲ ಕೆರಳಿಸಿದ್ದು, ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.

ರಾಜಸ್ಥಾನ್ vs ಡೆಲ್ಲಿ:

ಆರ್ ಆರ್ ತಂಡ ತುಂಬಾ ಬಲಶಾಲಿಯಾಗಿದೆ. ಆಡಿದ ಎರಡು ಪಂದ್ಯಗಳ ಪೈಕಿ ಒಂದು ಸೋಲು ಕಂಡಿದ್ದರೂ ಅದು ಹೀನಾಯವಾಗಿ ಇರಲಿಲ್ಲ. ಗೆಲುವಿನ ಅಂಚಿನಲ್ಲಿ ಎಡವಿತ್ತು. ಓಪನರ್​ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಭರ್ಜರಿ ಆರಂಭ ಒದಗಿಸಿದರೆ, ನಾಯಕ ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್ ಆಸರೆಯಾಗುತ್ತಿದ್ದಾರೆ. ದೇವದತ್ ಪಡಿಕ್ಕಲ್ ಮತ್ತು ರಿಯಾನ್ ಪರಾಗ್ ಇನ್ನಷ್ಟೆ ಮಿಂಚಬೇಕಿದೆ. ಬೌಲಿಂಗ್​ನಲ್ಲಿ ಆರ್. ಅಶ್ವಿನ್, ಯುಜ್ವೇಂದ್ರ ಚಹಲ್, ಟ್ರೆಂಟ್ ಬೌಲ್ಟ್ ಹಾಗೂ ಕೆಎಮ್ ಆಸೀಫ್ ಇದ್ದಾರೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಆಡಿದ ಎರಡೂ ಪಂದ್ಯಗಳಲ್ಲಿ ಸೋಲುಂಡಿದೆ. ಹೀಗಾಗಿ ಚೊಚ್ಚಲ ಗೆಲುವಿಗೆ ವಾರ್ನರ್ ಪಡೆ ಹುಡುಕುತ್ತಿದೆ. ಡಿಸಿ ತಂಡ ಈವರೆಗೆ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿಲ್ಲ. ನಾಯಕ ಡೇವಿಡ್ ವಾರ್ನರ್ ರನ್ ಕಲೆಹಾಕುತ್ತಿದ್ದಾರಷ್ಟೆ. ಪೃಥ್ವಿ ಶಾ, ರಿಲೀ ರುಸ್ಸೋ, ರೋಮನ್ ಪಾವೆಲ್, ಅಕ್ಷರ್ ಪಟೇಲ್, ಸರ್ಫರಾಜ್ ಖಾನ್, ಅಭಿಷೇಕ್ ಕಡೆಯಿಂದ ಉತ್ತಮ ಆಟ ಬರಬೇಕಿದೆ. ಬೌಲಿಂಗ್​ನಲ್ಲಿ ಕೂಡ ಅಮನ್ ಹಕಿಮ್, ಕುಲ್ದೀಪ್ ಯಾದವ್, ಆ್ಯನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್ ಇದ್ದರೂ ಮಾರಕವಾಗಿಲ್ಲ.

ಮುಂಬೈ vs ಚೆನ್ನೈ:

ಮುಂಬೈ ಈ ಬಾರಿ ತಾನಾಡಿದ ಮೊದಲ ಪಂದ್ಯದಲ್ಲೇ ಸೋಲು ಕಂಡಿತ್ತು. ಆರ್​ಸಿಬಿ ವಿರುದ್ಧ ಕಳಪೆ ಬೌಲಿಂಗ್ ಪ್ರದರ್ಶಿಸಿತ್ತು. ರೋಹಿತ್ ಪಡೆ ಇದೀಗ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ತಂಡದಲ್ಲಿ ಅನುಭವಿ ಸ್ಟಾರ್ ಆಟಗಾರರ ದಂಡೇ ಇದ್ದರೂ ಮಿಂಚುತ್ತಿಲ್ಲ. ರೋಹಿತ್ ಕಡೆಯಿಂದ ನಾಯಕನ ಆಟ ಬರಬೇಕಿದೆ. ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಬೇಕಿದೆ. ಸೂರ್ಯಕುಮಾರ್ ಫಾರ್ಮ್ ಕಂಡುಕೊಳ್ಳಬೇಕು. ಕ್ಯಾಮ್ರೋನ್ ಗ್ರೀನ್, ಟಿಮ್ ಡೇವಿಡ್ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ತಿಲಕ್ ವರ್ಮಾ ಹಾಗೂ ನೆಹಲ್ ವಧೀರ ಮೇಲೆ ನಿರೀಕ್ಷೆ ಹೆಚ್ಚಿದೆ. ಜೋಫ್ರಾ ಆರ್ಚರ್, ಪಿಯೂಶ್ ಚಾವ್ಲಾ ಹಾಗೂ ಅರ್ಶದ್ ಖಾನ್ ಮಾರಕವಾಗಬೇಕಿದೆ.

ಸಿಎಸ್​ಕೆ ತಂಡ ಗೆಲುವಿನ ಲಯಕ್ಕೆ ಮರಳಿದೆ ನಿಜ. ಆದರೆ, ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಬೇಕಿದೆ. ಕಳೆದ ಪಂದ್ಯದಲ್ಲಿ 200+ ಟಾರ್ಗೆಟ್ ನೀಡಿದ್ದರೂ ಎದುರಾಳಿ ಗೆಲುವಿನ ಅಂಚಿಗೆ ಬಂದಿತ್ತು. ಧೋನಿ ಕೂಡ ಬೌಲರ್​ಗಳಿಗೆ ಎಚ್ಚರಿಕೆ ನೀಡಿದ್ದರು. ರುತುರಾಜ್ ಗಾಯಕ್ವಾಡ್ ಬೊಂಬಾಟ್ ಬ್ಯಾಟಿಂಗ್ ತಂಡದ ಪ್ರಮುಖ ಅಸ್ತ್ರವಾಗಿದೆ. ಡ್ವೇನ್ ಕಾನ್ವೇ ಇವರಿಗೆ ಸಾಥ್ ನೀಡುತ್ತಿದ್ದಾರೆ. ಮೊಯಿನ್ ಅಲಿ ಆಲ್ರೌಂಡ್ ಆಟ ನಡೆಯುತ್ತಿದೆ. ಬೆನ್ ಸ್ಟೋಕ್ಸ್ ಹಾಗೂ ರವೀಂದ್ರ ಜಡೇಜಾ ಇನ್ನಷ್ಟೆ ತಮ್ಮ ನೈಜ್ಯ ಆಟ ಆಡಬೇಕಿದೆ. ಮಿಚೆಲ್ ಸ್ಯಾಂಟನರ್, ದೀಪಕ್ ಚಹರ್, ಹಂಗರ್ಗಕರ್ ಬೌಲರ್​ಗಳಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist