ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ದಾಳಿಂಬೆ ಹಣ್ಣಿನಲ್ಲಿ ಇರುವ ಆರೋಗ್ಯಕಾರಿ ಪ್ರಯೋಜನಗಳು

Twitter
Facebook
LinkedIn
WhatsApp
pomegranate 2019951411 kyookor5

ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ. ಆ ಪಟ್ಟಿಯಲ್ಲಿ ಕೆಂಪು ಬಣ್ಣದ ದಾಳಿಂಬೆ ಹಣ್ಣು ಕೂಡ ಒಂದು.ಪ್ರತಿಯೊಂದು ಹಣ್ಣು (Fruit) ಮನುಷ್ಯನ ದೇಹಕ್ಕೆ ಬೇಕಾದ ಅಗತ್ಯವಾದ ವಿಟಮಿನ್ಗಳನ್ನು (Vitamin) ನೀಡುವಲ್ಲಿ ಸಮೃದ್ಧವಾಗಿವೆ.  ಆಯುರ್ವೇದ ಔಷಧೀಯ (Ayurvedic Medicines) ವ್ಯವಸ್ಥೆಯು ದಾಳಿಂಬೆಯನ್ನು (Pomegranate) ಮನೆಮದ್ದು ಎಂದು ಹೇಳುತ್ತದೆ. ದಾಳಿಂಬೆ ಉತ್ತಮ ಪೋಷಕಾಂಶಗಳ (Nutrition) ಜೊತೆಗೆ ಹಲವಾರು ಪ್ರಯೋಜನ ಸಹ ಹೊಂದಿದೆ. ದಾಳಿಂಬೆ ಕಲ್ಲಂಗಡಿಯಂತೆ ನೀರುಭರಿತ ಮತ್ತು ಕನಿಷ್ಠ ಕ್ಯಾಲೊರಿಗಳನ್ನು ಹೊಂದಿರುವ ಹಣ್ಣು. ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಇದರಲ್ಲಿರುವ ಪ್ಯೂನಿಕಾಲಾಜಿನ್ಸ್ (Punicologicals) ಮತ್ತು ಪ್ಯೂನಿಕ್ ಆಮ್ಲ ದೇಹಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತವೆ.

Untitled 3

ನಿಮಗೆ ನೆನಪಿರಲಿ, ದಾಳಿಂಬೆ ಬೀಜಗಳನ್ನು ತಿನ್ನುವುದರಿಂದ ಮಾತ್ರ ಫೈಬರ್ ಅನ್ನು ಪಡೆಯುತ್ತೀರಿ, ಜ್ಯೂಸ್‌ಗಳಿಂದಲ್ಲ.

ಸಂಶೋಧಕರು ಹೇಳುವಂತೆ ಪುರುಷರಿಗೆ ದಾಳಿಂಬೆ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಕ್ಯಾನ್ಸರ್ ಸಮಸ್ಯೆ ಅನ್ನುವ ವಿಷಯ ಬಂದಾಗ ಪುರುಷರ ಪ್ರೊಸ್ಟೇಟ್ ಕ್ಯಾನ್ಸರ್ ಜೀವಕೋಶಗಳನ್ನು ದಾಳಿಂಬೆ ಹಣ್ಣಿನ ರಸ ನಾಶ ಪಡಿಸುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ದಾಳಿಂಬೆ ರಸದ ನಿಯಮಿತ ಸೇವನೆಯು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ಹೇಳಿದೆ. ಸಂಕೋಚನದ ರಕ್ತದೊತ್ತಡವನ್ನು ನಿಯಂತ್ರಿಸಲು ಇದು ವಿಶೇಷವಾಗಿ ಸಹಕಾರಿಯಾಗಿದೆ.

ಆರೋಗ್ಯಕರ ಹೃದಯವನ್ನು ಉತ್ತೇಜಿಸುತ್ತದೆ
ದಾಳಿಂಬೆ ಹೃದಯ ಸ್ನೇಹಿ ಹಣ್ಣುಗಳಲ್ಲಿ ಅಗ್ರಸ್ಥಾನದಲ್ಲಿದೆ.ದಾಳಿಂಬೆಯ ಉತ್ತಮ ಕೊಬ್ಬಿನ ಅಂಶವಾದ ಪ್ಯೂನಿಸಿಕ್ ಆಮ್ಲ ಹೃದ್ರೋಗದ ಹಲವಾರು ಹಂತಗಳಿಂದ ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ತಡೆಗಟ್ಟುವ ಗುಣವಿದೆ
ಕೆಲವು ಅಧ್ಯಯನಗಳ ಪ್ರಾಥಮಿಕ ಫಲಿತಾಂಶಗಳು ದಾಳಿಂಬೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ. ಇದರ ಗುಣಲಕ್ಷಣಗಳು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳನ್ನು ಹೆಚ್ಚಿಸುವುದನ್ನು ತಡೆಯುತ್ತದೆ.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ದಾಳಿಂಬೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸಾಬೀತುಪಡಿಸುತ್ತವೆ. ಇದು ಈ ಕೊಲೆಸ್ಟ್ರಾಲ್ ಅನ್ನು ಆಕ್ಸಿಡೀಕರಣದಿಂದ ರಕ್ಷಿಸುತ್ತದೆ. ಆಕ್ಸಿಡೀಕರಣ ಹಂತವು ಹೃದ್ರೋಗಗಳಿಗೆ ಮುಖ್ಯ ಕಾರಣಗಳಲ್ಲಿ ಒಂದಾಗಿರುವುದರಿಂದ ಇದು ನಿರ್ಣಾಯಕವಾಗಿದೆ.

ಗರ್ಭಿಣಿಯರಿಗೆ ಒಳ್ಳೆಯದು
ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ಕಬ್ಬಿಣದ ಕೊರತೆಯನ್ನು ತಡೆಯಲು ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ.

ದಾಳಿಂಬೆ ಬೀಜಗಳು ನಿಮ್ಮ ರಕ್ತದ ಪ್ಲೇಟ್‌ಲೆಟ್‌ಗಳು ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.

ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು ತೊಳೆದ ನಂತರ ನೀವು ಸ್ವಲ್ಪ ದಾಳಿಂಬೆ ರಸವನ್ನು ಹೊರತೆಗೆಯಬಹುದು ಮತ್ತು ಸ್ವಲ್ಪ ಆಪಲ್ ಸೈಡರ್ ವಿನೆಗರ್‌ನೊಂದಿಗೆ ಮಿಶ್ರಣ ಮಾಡಬಹುದು.

ಬೇಸಿಗೆ ಸಮಯ ಆಗಿರುವುದರಿಂದ ಆಗಾಗ ದಾಳಿಂಬೆ ಹಣ್ಣಿನ ಜೂಸ್ ತಯಾರು ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ರುಚಿಕರವೂ ಹೌದು ಆರೋಗ್ಯಕರವೂ ಹೌದು.

ಹೃದಯ, ಅಪಧಮನಿಗಳು ಅಥವಾ ಆಂತರಿಕ ಹೆಪ್ಪುಗಟ್ಟುವಿಕೆಯಿಂದ ಕಾಪಾಡುತ್ತದೆ.

100 ಗ್ರಾಂ ದಾಳಿಂಬೆ ಈ ಕೆಳಗಿನ ಪೋಷಕಾಂಶಗಳನ್ನು ಒಳಗೊಂಡಿದೆ.

ಕ್ಯಾಲೋರಿಗಳು: 83 ಕೆ.ಸಿ.ಎಲ್

ಕಾರ್ಬೋಹೈಡ್ರೇಟ್ಗಳು: 18.7 ಗ್ರಾಂ

ಸಕ್ಕರೆ: 13.67 ಗ್ರಾಂ

ಫೈಬರ್: 4 ಗ್ರಾಂ

ಪ್ರೋಟೀನ್: 1.67 ಗ್ರಾಂ

ಕೊಬ್ಬು: 1.17 ಗ್ರಾಂ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist