‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. Vishnupriya ಸಿನಿಮಾದ ರೊಮ್ಯಾಂಟಿಕ್ ಲವ್ ಸ್ಟೋರಿ ಹೇಳಲು ರೆಡಿಯಾಗಿದ್ದಾರೆ.
ರಾತ್ರೋ ರಾತ್ರಿ ಕಣ್ಣು ಹೊಡೆದು ಇಂಟರ್ನೆಟ್ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಸುಂದರಿ ಪ್ರಿಯಾಗೆ ‘ಒರು ಆಡಾರ್ ಲವ್’ ಚಿತ್ರ 20 ಸೆಕೆಂಡ್ ಕಣ್ಣು ಹೊಡೆದು ಫೇಮಸ್ ಆಗಿದ್ದರು. ಅದೆಷ್ಟರ ಮಟ್ಟಿಗೆ ಪ್ರಿಯಾ ಹವಾ ಕ್ರಿಯೆಟ್ ಆಗಿತ್ತು ಅಂದ್ರೆ ಬಾಲಿವುಡ್ ಅಂಗಳದವೆರೆಗೂ ನಟಿಯ ಹೆಸರು ಚಾಲ್ತಿಯಲ್ಲಿತ್ತು. ಅದೆಷ್ಟು ಬೇಗ ಫೇಮಸ್ ಆದ್ರೋ ಅಷ್ಟೇ ಬೇಗ ಪ್ರಿಯಾ ಹವಾ ಕಮ್ಮಿಯಾಯ್ತು. ಆದ್ರೂ ತಲೆ ಕೆಡಿಸಿಕೊಳ್ಳದೇ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಮೊಟ್ಟ ಮೊದಲ ಬಾರಿಗೆ ಕನ್ನಡದ ಸಿನಿಮಾಗೆ ಮಾಲಿವುಡ್ ನಟಿ ಪ್ರಿಯಾ ಬಣ್ಣ ಹಚ್ಚಿದ್ದಾರೆ. ‘ವಿಷ್ಣುಪ್ರಿಯಾ’ ಸಿನಿಮಾದಲ್ಲಿ ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು (Shreyas Manju) ನಾಯಕಿಯಾಗಿ ನಟಿಸಿದ್ದಾರೆ. ಕಾರಣಾಂತಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಈಗ ಮೇ-ಜೂನ್ನಲ್ಲಿ ಸಿನಿಮಾ ತೆರೆಗೆ ಬರಲಿದೆ.
https://www.instagram.com/reel/Cqp5fKvNdIv/?utm_source=ig_embed&ig_rid=ec31600b-14b5-45a8-99e0-45443ea27ef1
ಮಾಲಿವುಡ್ (Mollywood) ನಿರ್ದೇಶಕ ವಿ.ಕೆ ಪ್ರಕಾಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. Geetha Govindam ಖ್ಯಾತಿಯ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ವಿಷ್ಣುಪ್ರಿಯಾ’ ಮೂಲಕ ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ ಹೇಳಲು ಶ್ರೇಯಸ್-ಪ್ರಿಯಾ ರೆಡಿಯಾಗಿದ್ದು, ಈ ಸಿನಿಮಾ ಚಿತ್ರಮಂದಿರಲ್ಲಿ ಮೋಡಿ ಮಾಡುತ್ತಾ ಎಂದು ಕಾದುನೋಡಬೇಕಿದೆ.