ಸಿಕ್ಸ್ ಪ್ಯಾಕ್ ನಲ್ಲಿ ತಾಪ್ಸಿ ಪನ್ನು: ನಟಿಯ ಕಸರತ್ತಿಗೆ ಅಭಿಮಾನಿಗಳ ಪ್ರಶಂಸೆ
ಸಾಮಾನ್ಯವಾಗಿ ದೇಹ ಹುರಿಗೊಳಿಸುವಲ್ಲಿ ಹುಡುಗರೇ ಹೆಚ್ಚಿನ ಆಸಕ್ತಿವಹಿಸುತ್ತಾರೆ. ಅದರಲ್ಲೂ ಸಿಕ್ಸ್ ಪ್ಯಾಕ್ (Six Pack), ಏಟ್ ಪ್ಯಾಕ್ ರೀತಿಯ ಕಸರತ್ತುಗಳನ್ನು ಹುಡುಗಿಯರು ಮಾಡಲು ಹೋಗುವುದಿಲ್ಲ. ಹಾಗಂತ ಮಾಡುವುದೇ ಇಲ್ಲ ಅಂತಲ್ಲ. ಬೆರಳೆಣಿಕೆಯಷ್ಟು ನಟಿಯರು ಇಂತಹ ಸಿಕ್ಸ್ ಪ್ಯಾಕ್ ನಲ್ಲಿ ಅಚ್ಚರಿಗೊಳಿಸಿದ್ದೂ ಇದೆ. ಈಗ ಅಂಥದ್ದೇ ಹಾದಿ ಹಿಡಿದಿದ್ದಾರೆ ಬಾಲಿವುಡ್ (Bollywood) ನಟಿ ತಾಪ್ಸಿ ಪನ್ನು.
ತಾಪ್ಸಿ (Taapsee Pannu)ಇಂಥದ್ದೊಂದು ಕಸರತ್ತು ಮಾಡುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಜಿಮ್ ನಲ್ಲಿ ದೇಹ ಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ಮಾಡಿರುವ ಕುರಿತು ಅವರ ಜಿಮ್ ಟ್ರೈನರ್ ಹೇಳಿಕೊಂಡಿದ್ದಾರೆ. ತಾಪ್ಸಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಟೈಗರ್ ಶ್ರಾಫ್ (Tiger Shroff) ಗೆ ಕಾಂಪಿಟೇಷನ್ ಕೊಡುವುದಕ್ಕಾಗಿ ಎಂದು ಬರೆದುಕೊಂಡಿದ್ದಾರೆ.
ತಾಪ್ಸಿ ಇತ್ತೀಚಿನ ದಿನಗಳಲ್ಲಿ ವಿವಾದದ ಮೂಲಕ ಗಮನ ಸೆಳೆದಿದ್ದರು. ಮಾದಕ ಉಡುಗೆಯಲ್ಲಿ ಲಕ್ಷ್ಮಿ ಡಾಲರ್ ಹಾಕಿದ್ದಕ್ಕೆ ಟ್ರೋಲ್ ಆಗಿದ್ದರು. ಆದರೆ, ಈ ಬಾರಿ ಸಿಕ್ಸ್ ಪ್ಯಾಕ್ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳು ಕೂಡ ತಾಪ್ಸಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ಕೂಡ ವ್ಯಕ್ತ ಪಡಿಸಿದ್ದಾರೆ.