ಮಲೈಕಾ ಅರೋರಾ 12 ವರ್ಷ ಕಿರಿಯ ಅರ್ಜುನ್ ಕಪೂರ್ ಜೊತೆ ಮದುವೆಯಾಗಲು 'ರೆಡಿ'
“ಮದುವೆ ಬಗ್ಗೆ ನಾನು ಆಲೋಚನೆ ಮಾಡಿದ್ದೇನೆ. ಜನರು ನನಗೆ ಮತ್ತೆ ಮದುವೆ ಆಗಲು ಇಷ್ಟವಿಲ್ಲ ಅಂತ ಹೇಳಬಹುದು. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ನಾನು ವ್ಯವಸ್ಥೆ, ಪ್ರೀತಿ, ಸಾಂಗತ್ಯದಲ್ಲಿ ನಂಬಿಕೆ ಇಟ್ಟಿದ್ದೇನೆ. ನಾನು ಯಾವಾಗ ಮದುವೆ ಆಗ್ತೀನಿ ಅಂತ ಉತ್ತರ ಹೇಳಲು ಆಗದು, ನಾನು ಜೀವನದಲ್ಲಿ ಜಾಸ್ತಿ ಪ್ಲ್ಯಾನ್ ಮಾಡಬಾರದು ಅಂತ ಅಂದುಕೊಳ್ತೀನಿ. ಯೋಜನೆ ಹಾಳಾದರೆ ಜೀವನದಲ್ಲಿ ಖುಷಿ ಇರೋದಿಲ್ಲ” ಎಂದು ಮಲೈಕಾ ಅರೋರ ಹೇಳಿದ್ದಾರೆ.
“ಅರ್ಜುನ್ ಅವರ ವಯಸ್ಸಿಗೆ ತುಂಬ ಪ್ರೌಢಿಮೆ ಹೊಂದಿದ್ದಾರೆ. ಅವರು ತುಂಬ ಸ್ಟ್ರಾಂಗ್ ಆಗಿದ್ದಾರೆ, ತುಂಬ ಕೇರ್ ಮಾಡುತ್ತಾರೆ. ನಾನು ಅರ್ಜುನ್ನಲ್ಲಿರುವ ಈ ರೀತಿ ಗುಣಗಳನ್ನು ತುಂಬ ಹೊಗಳ್ತೀನಿ. ನಾನು ಮುಂದಿನ 30 ವರ್ಷ ಹೀಗೆ ಕೆಲಸ ಮಾಡಬೇಕು. ನನಗೆ ಹಿಂದೆ ಬೀಳಲು ಇಷ್ಟವಿಲ್ಲ. ನನಗೆ ಉದ್ಯಮ ಮಾಡಬೇಕು, ಟ್ರಾವೆಲ್ ಮಾಡಬೇಕು, ಅರ್ಜುನ್ ಜೊತೆ ನಾನು ಮನೆ ಮಾಡಬೇಕು, ನಮ್ಮಿಬ್ಬರ ರಿಲೇಶನ್ಶಿಪ್ನ್ನು ಇನ್ನೊಂದು ಲೆವೆಲ್ಗ ತೆಗೆದುಕೊಂಡು ಹೋಗಬೇಕು” ಎಂದು ಮಲೈಕಾ ಅರೋರ ಹೇಳಿದ್ದಾರೆ.
“ನಾನು, ಮಲೈಕಾ ಪ್ರೀತಿ ಮಾಡುತ್ತಿದ್ದೇವೆ, ನನಗೆ ಮಲೈಕಾ ಅರೋರ ಜೊತೆ ಇರಬೇಕಿತ್ತು, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳೋದಿಲ್ಲ, ಒಪ್ಪೋದು ಇಲ್ಲ. ನಾವಿಬ್ಬರೂ ಈ ಬಗ್ಗೆ ಜೋಡಿಯಾಗು ಮಾತನಾಡಿಲ್ಲ. ಆದರೆ ದಿನನಿತ್ಯ ಒಂದೊಂದಾಗಿ ಇನ್ನೂ ಹೆಜ್ಜೆ ಇಡಬೇಕಿದೆ. ಮಲೈಕಾಗೆ ಈ ಹಿಂದೆ ಒಂದು ಸಾಂಸಾರಿಕ ಜೀವನ ಇತ್ತು, ಮಗು ಇತ್ತು ಎನ್ನೋದನ್ನು ಎಲ್ಲರೂ ಮೊದಲು ಅರ್ಥ ಮಾಡಿಕೊಳ್ಳಬೇಕು” ಎಂದು ಅರ್ಜುನ್ ಕಪೂರ್ ಅವರು ಈ ಹಿಂದೆ ಹೇಳಿದ್ದರು.
1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ರನ್ನು ಮಲೈಕಾ ಅರೋರ ಮದುವೆಯಾಗಿದ್ದರು. ಇವರಿಬ್ಬರು ಪ್ರೀತಿಸಿ ಚಿಕ್ಕ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆಮೇಲೆ ಈ ಜೋಡಿ ಮಧ್ಯೆ ಭಿನ್ನಾಭಿಪ್ರಾಯಗಳು ಬಂದು 2017ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಈ ದಂಪತಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ. ವಿದೇಶದಲ್ಲಿ ಸದ್ಯ ಅರ್ಹಾನ್ ಶಿಕ್ಷಣ ಪೂರೈಸುತ್ತಿದ್ದಾನೆ. ಅರ್ಬಾಜ್, ಮಲೈಕಾ ಮಗ ಈಗ ತಾಯಿ ಜೊತೆಗೆ ಇದ್ದಾನೆ.