ಅಂಗಡಿಗೆಂದು ಹೋದ ವಿವಾಹಿತೆ ನಾಪತ್ತೆ
Twitter
Facebook
LinkedIn
WhatsApp
ಸುರತ್ಕಲ್: ಕುಳಾಯಿ ಗ್ರಾಮದ ವಿವಾಹಿತ ಮಹಿಳೆಯೊಬ್ಬರು ಮಾ. 25ರಂದು ಮಧ್ಯಾಹ್ನ ಔಷಧ ಅಂಗಡಿಗೆಂದು ಹೋದವರು ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾರೆ.
ಯತೀಶ್ ಅವರ ಪತ್ನಿ ಮಾನಸಾ(22) ನಾಪತ್ತೆಯಾದವರು. ಐದಡಿ ಎತ್ತರ, ಬಳಿ ಮೈಬಣ್ಣ, ಕೈಯಲ್ಲಿ ನವಿಲು ಗರಿ ಟ್ಯಾಟೂ ಹಾಕಿದ್ದು, ನೀಲಿ ಬಣ್ಣದ ಟೀಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.