ಸೋಮವಾರ, ಮೇ 20, 2024
ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!-ಸಿಎಂ ಸಿದ್ದರಾಮಯ್ಯಗೆ ಸೋಮಾರಿ ಸಿದ್ದು ಎಂದು ನಟ ಚೇತನ್ ಅಹಿಂಸಾ ವ್ಯಂಗ್ಯ..!-Gold Rate: ಇಂದಿನ ಚಿನ್ನಾಭರಣದ ಬೆಲೆ ಹೇಗಿದೆ; ಖರೀದಿಗೆ ಸೂಕ್ತವೇ.?-ಆರ್ಸಿಬಿ ಗೆ ಕಪ್ ಗೆಲ್ಲಲು ಮುಂದಿನ ಪಂದ್ಯ ಯಾವಾಗ; ಎದುರಾಳಿ ತಂಡ ಯಾವುದು.?-ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ; ಇರಾನ್ ಮಾದ್ಯಮ ವರದಿ-ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್

Twitter
Facebook
LinkedIn
WhatsApp
ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್

ಹಾವೇರಿ: ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಹಾನಗಲ್ ಪಟ್ಟಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ 76 ರ ಹರೆಯದ ಹಿರಿಯ ನಾಯಕ ಮನೋಹರ ತಹಶೀಲ್ದಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಏಪ್ರಿಲ್ 7 ರಂದು ಹಾನಗಲ್ ಪಟ್ಟಣಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದ್ದು ಈ ವೇಳೆ ಪಕ್ಷ ಸೇರ್ಪಡೆಯಾಗಲಿದ್ದಾರೆ.

ನನಗೆ ನೋವು ಕೊಟ್ಟರೂ ಪಕ್ಷಕ್ಕಾಗಿ ಕೆಲಸ ಮಾಡಿದೆ. ಉಪಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಹೊರಗಿನವರು, ಒಳಗಿನವರು ಯಾರು ಇರಲಿಲ್ಲ.ಎಂಎಲ್ ಸಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು.ಸೂಟ್ ಕೇಸ್ ತಗೊಂಡು ಹಿಂದೆ ಸರದಿದ್ದಾರೆ ಎಂದು ಅಪಪ್ರಚಾರ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ನನ್ನನ್ನ ಕೊಂಡುಕೊಳ್ಳುವ ಗಂಡಸು ಭೂಮಿಯ ಮೇಲೆ ಹುಟ್ಟಿಲ್ಲ.ಅವರಿಗೆ ತಾಕತ್ ಇದ್ದರೆ ನನ್ನನ್ನ ಸ್ಪರ್ಧೆ ಯಿಂದ ಹಿಂದೆ ಸರಿಸಲಿ.ನನಗಾದ ಅನ್ಯಾಯಕ್ಕೆ ಅಲ್ಲಿಂದ ಸಿಡಿದು ಹೊರ ಬಂದಿದ್ದೇನೆ. ಕೈ ಮುಗಿದು ಕಾಲಿಗೆ ಬಿದ್ದು ಟಿಕೆಟ್ ಕೇಳಿದೆ. ಅವರಿಗೆ ಕರುಣೆ ಇಲ್ಲ, ಹೃದಯ ಇಲ್ಲ, ಅವರ ಮನಸ್ಸು ಮರಗಲೆ ಇಲ್ಲ. ಇದು ನನ್ನ ಕೊನೆ ಚುನಾವಣೆ ಒಂದು ಅವಕಾಶ ಕೊಡಿ ಎಂದು ಕೇಳಿದೆ. ಗಲ್ಲಿಗೆ ಹಾಕುವವನಿಗೆ ಕೊನೆ ಆಸೆ ಏನು ಅಂತಾ ಕೇಳುತ್ತಾರೆ.ಆದರೆ ನನಗೆ ಹಾಗೂ ಕೇಳಲಿಲ್ಲ, ಸೌಜನ್ಯಕ್ಕೂ ಕೇಳಲಿಲ್ಲ. ಚೆಂಡಿಗೆ ಕೈ ಹಾಕಿ ಹೊರ ಹಾಕಿದರು. ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತೀದ್ದೇನೆ.

ನನ್ನ ಮುಂದೆ ಬಹಳಷ್ಟು ಪಕ್ಷಗಳಿದ್ದವು. ನೀವೆ ನನಗೆ ಸುಪ್ರೀಂ, ನೀವು ನನಗೆ ಬಿ ಫಾಮ್೯ ಕೊಡೊರು.ಪಕ್ಷೇತರ ಯಾಕಾಗಬಾರದು ಎನ್ನುವ ಚಿಂತನೆ ಬಂತು. ಆಗ ನಾನು ಒಂಟಿ ಸಿಪಾಯಿ ಆಗುತ್ತೇನೆ. ಪಕ್ಷೇತರ ಬೇಡ, ಪಕ್ಷದಿಂದ ನಿಲ್ಲುವ ತೀರ್ಮಾನ ಮಾಡಿದೆವು. ಜೆಡಿಎಸ್ ಆಯ್ಕೆ ಮಾಡಿದ್ರೆ ಒಳ್ಳೆಯದು ಅಂತ ಹೇಳಿದರು. ಏಪ್ರಿಲ್ 7 ರಂದು ಪಂಚರತ್ನ ಯಾತ್ರೆ ಹಾನಗಲ್ ಗೆ ಬರುತ್ತದೆ.ನೀವು ಒಪ್ಪಿಗೆ ಕೊಟ್ಟರೆ, ನಾವು ನೀವು ಸೇರಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಏಪ್ರಿಲ್ 7 ಕ್ಕೆ ಪಂಚರತ್ನ ಯಾತ್ರೆ ಸ್ವಾಗತಿಸೋಣ. ಅಂದು ಎಲ್ಲರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಮತ್ತೆ ಶಾಸಕನಾಗುವ ಹುಚ್ಚು ನನ್ನಲ್ಲಿ ಇರಲಿಲ್ಲ. ಸ್ವಾಭಿಮಾನಕ್ಕಾಗಿ ನಿಂತಿದ್ದೇನೆ, ತಾಲೂಕಿನವರೇ ಮುಂದಿನ‌ ಶಾಸಕರಾಗಬೇಕು ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ