ಕಾಂಗ್ರೆಸ್ ತೊರೆದು ‘ಕಮಲ’ ಹಿಡಿದ ಮುಸ್ಲಿಂ ಯುವಕರು
ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳೇ ಬಿಜೆಪಿ ಪಕ್ಷಕ್ಕೆ ಶ್ರೀರಕ್ಷೆ. 2023ಕ್ಕೆ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಖಚಿತ. ಯುವ ಕಾರ್ಯಕರ್ತರ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟುಶಕ್ತಿ ಬಂದಿದೆ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಬಿ.ಹೆಚ್.ಅನಿಲ್ಕುಮಾರ್ ತಿಳಿಸಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿಯ ಇಂದಿರಾ ಕಾಲೋನಿಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಯುವ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮುಳುಗಿದೆ. ಮುಳುಗುವ ಹಡಗಿನಲ್ಲಿ ಪ್ರಯಾಣಿಕ ಸಂಚಾರ ಮಾಡಿದರೇ ಅಪಾಯ ಕಟ್ಟಿಟ್ಟಬುತ್ತಿ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಕಾಂಗ್ರೆಸ್ ಪಕ್ಷದ ಮುಳುಗಡೆ ಖಚಿತವಾಗಿದೆ. 125ಕ್ಕೂ ಅಧಿಕ ಜನ ಯುವ ಕಾಂಗ್ರೆಸ್ ಕಾರ್ಯಕರ್ತರ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟುಶಕ್ತಿ ಬರಲಿದೆ ಎಂದು ಹೇಳಿದರು. ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಬಿ.ಹೆಚ್.ಅನಿಲ್ಕುಮಾರ್ ಕೊರಟಗೆರೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ. ಕೊರಟಗೆರೆ ಕ್ಷೇತ್ರದ ಪ್ರತಿ ಹಳ್ಳಿಯ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಬೂತ್ಮಟ್ಟದ ಸಭೆಗಳನ್ನ ಈಗಾಗಲೇ ನಡೆಸಿದ್ದಾರೆ. ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮೀಣ ಮತದಾರರ ವಿಶ್ವಾಸ ಗಳಿಸಲು ಹಗಲುರಾತ್ರಿ ಎನ್ನದೇ ಬಿಜೆಪಿ ಪಕ್ಷದ ಪರವಾರ ಪ್ರಚಾರ ದಲ್ಲಿ ತೊಡಗಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಜಿ.ವೆಂಕಟಾಚಲಯ್ಯ, ರೀಯಾಸತ್ ಅಲಿ, ಸಂಜೀವರೆಡ್ಡಿ, ರವಿವರ್ಮ, ದಾಸಾಲುಕುಂಟೆ ರಘು, ಆಟೋ ಗೋಪಾಲ ಕೃಷ್ಣ, ರಾಜಣ್ಣ, ನಾಗರಾಜು, ವೆಂಕಟೇಶ್, ಇರ್ಫಾನ್, ಪ್ರವೀನ್, ದಯಾನಂದ್, ಆನಂದ್, ಗಂಗಣ್ಣ ಸೇರಿದಂತೆ ಮುಸ್ಲಿಂ ಮುಖಂಡರು ಇದ್ದರು.