ಶುಕ್ರವಾರ, ಮೇ 3, 2024
ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ-ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ-ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ; ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್-ಅಮೇಠಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಜ್ಯದ ಅತಿ ಕಿರಿಯ ಮೇಯರ್​: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್​​​ ಆಗಿ ಡಿ. ತ್ರಿವೇಣಿ ಆಯ್ಕೆ

Twitter
Facebook
LinkedIn
WhatsApp
All about coconut tree 11

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ (Mayor) ಆಗಿ ಕಾಂಗ್ರೆಸ್ ಸದಸ್ಯೆಯಾಗಿರುವ ಡಿ. ತ್ರಿವೇಣಿ ಆಯ್ಕೆ ಆಗಿದ್ದು, ರಾಜ್ಯದಲ್ಲೇ ಅತಿ ಕಿರಿಯ ವಯಸ್ಸಿನ ಮೇಯರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ 23ನೇ ವಯಸ್ಸಿಗೆ ಬಳ್ಳಾರಿಯ 4ನೇ ವಾರ್ಡ್​ನ ಸದಸ್ಯೆ ಆಗಿ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಬಿ.ಜಾನಕಿ ಅವಿರೋಧ ಆಯ್ಕೆ ಆಗಿದ್ದಾರೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಳ್ಳಾರಿ ಮೇಯರ್​​ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ತ್ರಿವೇಣಿ ಪರ 28 ಮತ ಚಲಾವಣೆ ಆಗಿದ್ದರೆ, ಬಿಜೆಪಿಯಿಂದ ಮೇಯರ್ ಅಭ್ಯರ್ಥಿಯಾಗಿದ್ದ ನಾಗರತ್ನಗೆ 16 ಮತ ಚಲಾವಣೆ ಮಾಡಲಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬಳ್ಳಾರಿ ಮೇಯರ್​ ಪಟ್ಟಕ್ಕೇರುವ ಮೂಲಕ ತ್ರಿವೇಣಿ ದಾಖಲೆ ಬರೆದಿದ್ದಾರೆ. ಪ್ಯಾರಾ ಮೆಡಿಕಲ್​ ವಿದ್ಯಾಭ್ಯಾಸ ಮಾಡಿರುವ ಡಿ. ತ್ರಿವೇಣಿ, 2022ರಲ್ಲಿ ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ 4ನೇ ವಾರ್ಡ್​​ನಿಂದ  ಸ್ಪರ್ಧಿಸುವ ಮೂಲಕ 501 ಮತಗಳಿಂದ ಗೆದಿದ್ದರು. ಇನ್ನೊಂದು ವಿಶೇಷವೆಂದರೆ ತ್ರಿವೇಣಿ ಅವರ ಸುಶೀಲಾ ಬಾಯಿ ಕೂಡ ಈ ಹಿಂದೆ ಮೇಯರ್​ ಆಗಿದ್ದರು.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್​​ನಿಂದ 6 ಜನ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಉಮಾದೇವಿ ಶಿವರಾಜ್, ತ್ರೀವೇಣಿ, ಕುಬೇರ, ಮಿಂಚು ಶ್ರೀನಿವಾಸ್ ಹಾಗೂ ಶ್ವೇತಾರಿಂದ ಮೇಯರ್ ಸ್ಥಾನಕ್ಕೆ ರೇಸ್​ನಲ್ಲಿದ್ದರು. ಇವರೆಲ್ಲರನ್ನು ಹಿಂದಿಕ್ಕಿ ತ್ರೀವೇಣಿ ಅವರು ಮೇಯರ್​ ಆಗಿದ್ದಾರೆ.

ಕಳೆದ ವರ್ಷ 2022ರ ಮಾರ್ಚ್​​ನಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿದ್ದು, ಮೇಯರ್​ ಆಗಿ 34ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್​ ಆಗಿ 37ನೇ ವಾರ್ಡ್‌ನ ಮಾಲನ್ ಬೀ ಆಯ್ಕೆಯಾಗಿದ್ದರು. ಈಗ ಮೇಯರ್​, ಉಪಮೇಯರ್ ಅಧಿಕಾರವಧಿ 1 ವರ್ಷ ಪೂರೈಸಿದ ಹಿನ್ನೆಲೆ ಇಂದು ಚುನಾವಣೆ ನಡೆದಿದೆ. ಸದ್ಯ ಮಹಾನಗರ ಪಾಲಿಯ 39 ವಾರ್ಡ್‌ಗಳ ಪೈಕಿ 21 ಕಾಂಗ್ರೆಸ್ (Congress), 13 ಬಿಜೆಪಿ (BJP), 05 ಜನ ಪಕ್ಷೇತರರು ಸದಸ್ಯರು ಗೆಲವು ಸಾಧಿಸಿದ್ದಾರೆ.

ಉಪ ಮೇಯರ್ ಸ್ಥಾನಕ್ಕೆ 3 ಜನ ಪಾಲಿಕೆ ಸದಸ್ಯರ ಮಧ್ಯೆ ಪೈಪೋಟಿ ನಡೆದಿತ್ತು. ಉಪ ಮೇಯರ್ ಸ್ಥಾನಕ್ಕೆ ಶಶಿಕಲಾ ಜಗನ್ನಾಥ, ಜಾನಕಿ,‌ ರತ್ನಮ್ಮ ಪ್ರಬಲ ಆಕಾಂಕ್ಷಿಗಳಾಗಿದ್ದರು. ಮೇಯರ್ ಎಲೆಕ್ಷನ್‌ಗೆ ಬಿಜೆಪಿಯಿಂದಲೂ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಮೇಯರ್ ಸ್ಥಾನಕ್ಕೆ ಎಸ್​ಸಿ, ಉಪ ಮೇಯರ್ ಸ್ಥಾನಕ್ಕೆ ಎಸ್​ಟಿ ಮೀಸಲು ಘೋಷಣೆ ಮಾಡಲಾಗಿದೆ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ ಬಹುಮತ ಬಂದಿದ್ದು, ಇದರ ಜೊತೆಗೆ ಐವರು ಪಕ್ಷೇತರ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈಗ 26 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್‌ಗೆ ಮೇಯರ್ ಗದ್ದುಗೆ ಎರೆದಿದೆ.

ವಿಧಾನಸಭೆ ಚುನಾವಣೆ ಹೊತ್ತಲ್ಲಿ ಪ್ರತಿಷ್ಠೆಯಾದ ಮೇಯರ್​ ಚುನಾವಣೆ

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮಧ್ಯೆ ಗಣಿ ನಾಡಲ್ಲಿ ಪೈಪೋಟಿ ಏರ್ಪಟ್ಟಿತ್ತು. ನಾಯಕರು ಚುನಾವಣೆ ಅಖಾಡಕ್ಕಿಳಿದಿದ್ದು, ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್​ ಮಧ್ಯೆ ತೀರ್ವ ಪೈಪೋಟಿ ಏರ್ಪಟ್ಟಿತ್ತು. ಕಳೆದ ಮೇಯರ್​ ಚುನಾವಣೆಯಲ್ಲಿ ಆಪರೇಷನ್​ ಕಲಮದ ಭಯದಲ್ಲಿ ಕಾಂಗ್ರೆಸ್​ ತನ್ನ ಸದಸ್ಯರನ್ನು ರೆಸಾರ್ಟ್​​ಗೆ ಕರೆದೊಯ್ದು ಹಿಡಿದಿಟ್ಟುಕೊಂಡಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ